ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ಗೆ ಚಾಲನೆ ಸಿಕ್ಕಿದೆ. ಕಳೆದ ಒಂದು ವಾರದಿಂದ ಡಿಪೋನಲ್ಲೇ ಪ್ರಾಯೋಗಿಕವಾಗಿ ಓಡಾಟ ನಡೆಸುತ್ತಿದ್ದ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್‌ಗಳು ಇಂದು ರಸ್ತೆಗೆ ಇಳಿದಿವೆ. ಸಂಚಾರ ಶುರು ಮಾಡಿವೆ. ಮೆಜೆಸ್ಟಿಕ್ ಕೆಎಸ್ಆರ್ಟಿಸಿ ನಿಲ್ದಾಣದ ಡಿಸಿ ಚಂದ್ರಶೇಖರ್ ಹಾಗೂ KSRTC ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು ಮೆಜೆಸ್ಟಿಕ್ KSRTC ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ಗೆ ಚಾಲನೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್ ಬಸ್ ಸೇವೆ ಇಂದಿನಿಂದ ಆರಂಭವಾಗಿದೆ. ಎಕ್ಸ್ಪ್ರೆಸ್ ವೇನಲ್ಲಿ ಈ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತಿದೆ. ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ನಲ್ಲಿ ವಿದ್ಯಾರ್ಥಿ ಪಾಸ್ಗೆ ಅವಕಾಶವಿಲ್ಲ. ಮುಂದಿನ ಮೂರು ತಿಂಗಳಲ್ಲಿ 50 KSRTC ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೆ ಸಂಚರಿಸಲಿವೆ. 300 ಕಿ.ಮೀ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬಸ್ ಓಡಿಸಲು KSRTC ನಿರ್ಧಾರ ಮಾಡಿದೆ.
ಇ-ಬಸ್‌ಗಳು ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟ್ಗು ಚಾರ್ಜಿಂಗ್ ಸಾಕೆಟ್ , ಎಸಿ ವೆಂಟ್‌ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಳ್ಳಲಿದೆ. ಎಲೆಕ್ಟ್ರಿಕ್ ಬಸ್‌ಗಳು 2022 ಡಿಸೆಂಬರ್ 31 ರಂದು ರಾಜ್ಯಕ್ಕೆ ಬಂದಿದ್ದು, ಈಗಾಗಲೆ ಟ್ರಯಲ್ ರೈಡ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮೊದಲ ಇ-ಬಸ್ ಜನವರಿ 16ರಂದು ಬೆಂಗಳೂರಿನಿಂದ ಹೊರಟು ಮೈಸೂರು ತಲುಪುತ್ತದೆ. ಬೆಂಗಳೂರಿಂದ ಮೈಸೂರಿಗೆ ಹೊರಡುವ ಎಲೆಕ್ಟ್ರಿಕ್ ಬಸ್ ತಡೆರಹಿತವಾಗಿದ್ದು, ಬಸ್ಗೆ ಪ್ರಿಮಿಯಂ ಸರ್ವಿಸ್ ಪಾಸ್ ಹೊಂದಿರುತ್ತದೆ.
ಎಲೆಕ್ಟ್ರಿಕ್ ಬಸ್ಗಳನ್ನು ಒಂದು ಸಾರಿ ಚಾರ್ಜ್ ಮಾಡಿದರೆ 300ಕೀಮಿ ಸಂಚರಿಸುತ್ತದೆ. ಇನ್ನು ಫೆಬ್ರವರಿಯಲ್ಲಿ ರೋಡಿಗಿಳಿಯುವ 50 ಬಸ್‌ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟ, ಚಿಕ್ಕಮಗಳೂರು, ದಾವಣಗೇರೆ ಮತ್ತು ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ. ಈಗಾಗಲೆ ಬಸ್ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ವಿರಾಜಪೇಟ, ದಾವಣಗೇರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಇರಿಸಲಾಗುತ್ತದೆ.
ಎಲೆಕ್ಟ್ರಿಕ್ ಬಸ್ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ನಿರ್ವಹಿಸಲಿದೆ. ಈ ನಿರ್ವಹಣೆಗೆ ಕೆಎಸ್ಆರ್ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:06 am, Mon, 16 January 23