KSRTC Bus: ಸಾಲು ಸಾಲು ರಜೆ ಹಿನ್ನೆಲೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ; ವಿವರ ಇಲ್ಲಿದೆ

| Updated By: ganapathi bhat

Updated on: Apr 11, 2022 | 5:55 PM

ಈಸ್ಟರ್, ವಿಶು ಹಬ್ಬ ಹಿನ್ನೆಲೆಯಲ್ಲಿ KSRTCಯಿಂದ ಬಸ್​ ವ್ಯವಸ್ಥೆ ಮಾಡಲಾಗಿದೆ. ಬಸ್​ಗಳ ಮುಂಗಡ ಬುಕಿಂಗ್ ಕೂಡ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, 17/4/22 ರ ಬಳಿಕ ಬೇರೆ ಊರುಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

KSRTC Bus: ಸಾಲು ಸಾಲು ರಜೆ ಹಿನ್ನೆಲೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ; ವಿವರ ಇಲ್ಲಿದೆ
ಕೆಎಸ್​ಆರ್​ಟಿಸಿ ಬಸ್
Follow us on

ಬೆಂಗಳೂರು: ಈ ವಾರಾಂತ್ಯದ ನಾಲ್ಕು ದಿನಗಳಲ್ಲಿ ಸಾಲು ಸಾಲು ರಜೆ ಇರುವ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 13 ರಿಂದ ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ರಾಜ್ಯದ ನಾನಾ ಭಾಗಗಳಿಗೆ 300 ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಕುಂದಾಪುರ, ಧರ್ಮಸ್ಥಳ ಸೇರಿದಂತೆ ಎಲ್ಲೆಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣಕ್ಕೆ ಬಸ್​ಗಳ ಸಂಚಾರ ಹೆಚ್ಚಾಗಿ ಇರಲಿದೆ. ಈಸ್ಟರ್, ವಿಶು ಹಬ್ಬ ಹಿನ್ನೆಲೆಯಲ್ಲಿ KSRTCಯಿಂದ ಬಸ್​ ವ್ಯವಸ್ಥೆ ಮಾಡಲಾಗಿದೆ. ಬಸ್​ಗಳ ಮುಂಗಡ ಬುಕಿಂಗ್ ಕೂಡ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, 17/4/22 ರ ಬಳಿಕ ಬೇರೆ ಊರುಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಏಪ್ರಿಲ್ 11 ರಿಂದ 14ರ ವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧ

ಕೋದಂಡರಾಮಸ್ವಾಮಿ ಪಲ್ಲಕ್ಕಿ ಉತ್ಸವ ಹಿನ್ನೆಲೆ ಏಪ್ರಿಲ್ 11, 12 ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. 2 ದಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಆಗಿರಲಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ. ಅಲ್ಲದೆ, ಏಪ್ರಿಲ್ 13, 14 ರಂದು ಮುತ್ಯಾಲಮ್ಮ ದೇವಿ ರಥೋತ್ಸವ ಹಿನ್ನೆಲೆ ಭಾರತೀನಗರ ಠಾಣಾ ವ್ಯಾಪ್ತಿಯಲ್ಲಿ 2 ದಿನ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಪೂರ್ವ ವಿಭಾಗದ ಭಾರತೀನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಿಕೇಶಿ ನಗರ, ಶಿವಾಜಿನಗರ, ಡಿಜೆ ಹಳ್ಳಿ ಸೇರಿದಂತೆ ಉತ್ತರ ವಿಭಾಗದ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 13, 14 ರಂದು ಮದ್ಯ ಮಾರಾಟ ನಿಷೇಧ ಇರಲಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಬಗ್ಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬಬಿಎಂಟಿಸಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು? ಪ್ರಯಾಣಿಕರ ಆತಂಕಕ್ಕೆ ಮುಕ್ತಿ ಯಾವಾಗ?

ಇದನ್ನೂ ಓದಿ: ಕಂಪನಿಯ ಇಂಜಿನಿಯರ್​ಗಳು ತಪಾಸಣೆ ಮಾಡಿ ಓಕೆ ಅಂದ ಬಳಿಕವೂ ಬಿಎಂಟಿಸಿ ಬಸ್ಸಲ್ಲಿ ಬೆಂಕಿ ಕಾಣಿಸಿಕೊಂಡಿದೆ!