ಬೆಂಗಳೂರು: ಸರಕು ಸಾಗಣೆ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ; 20 ‘ನಮ್ಮ ಕಾರ್ಗೋ’ ಟ್ರಕ್‌ಗಳಿಗೆ ಸಾರಿಗೆ ಸಚಿವ ಚಾಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಲಾಜಿಸ್ಟಿಕ್ಸ್​ನಲ್ಲಿ ‘ನಮ್ಮ ಕಾರ್ಗೋ' ಟ್ರಕ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಹೊಸದೊಂದು ಪ್ರಯತ್ನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುವ 20 ಹೊಸ ಟ್ರಕ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು (ಶನಿವಾರ) ಚಾಲನೆ ನೀಡಿದರು.

ಬೆಂಗಳೂರು: ಸರಕು ಸಾಗಣೆ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ; 20 'ನಮ್ಮ ಕಾರ್ಗೋ’ ಟ್ರಕ್‌ಗಳಿಗೆ ಸಾರಿಗೆ ಸಚಿವ ಚಾಲನೆ
ಸರಕು ಸಾಗಣೆ ಸೇವೆ ಆರಂಭಿಸಿದ KSRTC
Follow us
ಕಿರಣ್ ಹನುಮಂತ್​ ಮಾದಾರ್
|

Updated on: Dec 23, 2023 | 3:52 PM

ಬೆಂಗಳೂರು, ಡಿ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಲಾಜಿಸ್ಟಿಕ್ಸ್​ ಆರಂಭಿಸಿದೆ. ಇಂದು(ಡಿ.23) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಅವರು 20 ‘ನಮ್ಮ ಕಾರ್ಗೋ’ ಟ್ರಕ್‌ಗಳಿಗೆ ಚಾಲನೆ ನೀಡಿದರು. ನಂತರ  ಮಾತನಾಡಿ, ‘ಕೆಎಸ್‌ಆರ್‌ಟಿಸಿ ಒಂದು ವರ್ಷದೊಳಗೆ 500 ಟ್ರಕ್‌ಗಳಿಗೆ ತನ್ನ ಕಾರ್ಗೋ ಫ್ಲೀಟ್ ಅನ್ನು ವಿಸ್ತರಿಸಲು ಯೋಜಿಸಿದೆ. ಮುಂದಿನ ಕೆಲವು ದಿನಗಳಲ್ಲಿ 100 ಟ್ರಕ್‌ಗಳು ಸೇರ್ಪಡೆಗೊಳ್ಳಲಿವೆ ಎಂದು ಹೇಳಿದರು.

ಇನ್ನು ಈ ಹೊಸ ಟ್ರಕ್‌ಗಳನ್ನು ಟಾಟಾದ ಪುಣೆ ತಯಾರಿಕ ಘಟಕದಲ್ಲಿ ತಯಾರಿಸಲಾಗಿದ್ದು, ಇದನ್ನು ರಾಜ್ಯದೊಳಗೆ ಸರಕು ಸಾಗಿಸಲು ಬಳಸಲಾಗುತ್ತದೆ. ಈಗ 20 ಟ್ರಕ್​ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರ ಪ್ರತಿಕ್ರಿಯೆಯನ್ನು ನೋಡಿದ ನಂತರ ಒಂದು ತಿಂಗಳಲ್ಲಿ 100 ಮತ್ತು ಒಂದು ವರ್ಷದಲ್ಲಿ 500 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

ಇದನ್ನೂ ಓದಿ:ಕ್ರಿಸ್​ಮಸ್​ ಹಬ್ಬಕ್ಕೆ ಸಾವಿರ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ KSRTC

ಈ ಟ್ರಕ್​ಗಳಲ್ಲಿ 6 ಟನ್ ಸರಕುಗಳನ್ನು ಸಾಗಿಸಬಹುದು

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವು ಸರಕು ಸಾಗಣೆ ಟ್ರಕ್‌ಗಳ ಡಿಪೋ ಆಗಿದ್ದು, ಅಲ್ಲಿಂದ ಅವುಗಳ ಕಾರ್ಯಾಚರಣೆ ನಡೆಯಲಿದೆ. ಕೆಎಸ್‌ಆರ್‌ಟಿಸಿ ತನ್ನ ಸರಕು ವ್ಯಾಪಾರವನ್ನು 2021 ರಲ್ಲಿಯೇ ಸರಕುಗಳನ್ನು ಸಾಗಿಸಲು ಬಸ್‌ಗಳನ್ನು ಬಳಸಿ ಪ್ರಾರಂಭಿಸಿತು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲು ಪ್ರಾರಂಭಿಸಿದ. ಈ ಆರು ಚಕ್ರಗಳ ಟ್ರಕ್​​ನಲ್ಲಿ 6 ಟನ್ ಸರಕುಗಳನ್ನು ಸಾಗಿಸಬಹುದಾಗಿದೆ.

ರಾಜ್ಯದ ಹಲವೆಡೆ ಸಂಚರಿಸಲಿವೆ ಈ ಟ್ರಕ್​ಗಳು

ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಕಾರ, ಈ ಟ್ರಕ್‌ಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತದೆ. ಈ ಕುರಿತು ಉತ್ತಮ ಪ್ರತಿಕ್ರಿಯೆ ಬಂದಲ್ಲಿ, ಹೆಚ್ಚಿನ ಟ್ರಕ್‌ಗಳನ್ನು ಕೊಂಡುಕೊಂಡು ಇನ್ನಷ್ಟು ಜಿಲ್ಲೆಗಳಿಂದ ಸಂಚರಿಸಲಿದೆ. ಆರಂಭದಲ್ಲಿ, ಸಾರಿಗೆ ಇಲಾಖೆಯು ಔಷಧೀಯ, ಜವಳಿ, ಆಹಾರ ಮತ್ತು ಆತಿಥ್ಯ ಉದ್ಯಮಗಳಿಂದ ಸರಕುಗಳನ್ನು ಸಾಗಿಸಲು ಯೋಜಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್