AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ KSRTC ಡಿಪೋ ಕರ್ಮಕಾಂಡ ಬಯಲು: ನೋ ಗ್ಯಾರಂಟಿ ಗಾಡಿ, ಡಿಪೋ ಮ್ಯಾನೇಜರ್ ಜೊತೆ ಸೆಟ್ಟಿಂಗ್ ಮಾಡಿಕೊಂಡ್ರೆ ಡ್ಯೂಟಿ ಎಂದ ಚಾಲಕ

ಕೆಎಸ್​ಆರ್​ಟಿಸಿಯ ಗದಗ ಜಿಲ್ಲೆ ಡಿಪೋದಲ್ಲಿನ ಬಸ್​​ಗಳ ಅಸಲಿಯತ್ತು ಬಯಲಾಗಿದೆ. ಈ ಡಿಪೋದ ಬಸ್​​ಗಳು ಎಷ್ಟು ಡೇಂಜರಸ್​ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಗುಜುರಿಗೆ ಸೇರುತ್ತಿವೆ ಎಂದು ಚಾಲಕರು ಬಯಲು ಮಾಡಿದ್ದಾರೆ. ಡಿಪೋದಲ್ಲಿ ಲಂಚ ಹೇಗೆ ತಾಂಡವವಾಡಿತ್ತಿದೆ. ಡ್ಯೂಟಿ ಪಡೆಯಲು ಗುಂಡು-ತುಂಡು ನೀಡಬೇಕು ಎಂಬುವುದರ ಬಗ್ಗೆ ಬಸ್​ ಚಾಲಕರು ಟಿವಿ9 ಡಿಜಿಟಲ್​​ಗೆ ತಿಳಿಸಿದ್ದಾರೆ. ಹಾಗಿದ್ದರೆ ಚಾಲಕರು ತಿಳಿಸಿದ ಅಸಲಿ ಸತ್ಯವೇನು ಇಲ್ಲಿದೆ ಓದಿ..

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Dec 13, 2023 | 9:42 AM

Share

ಗದಗ, ಡಿಸೆಂಬರ್​ 13: ರಾಜ್ಯದಲ್ಲಿ ಶಕ್ತಿ ಯೋಜನೆ (Shakti Schme) ಜಾರಿಯಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್​​ಗಳ ಬಳಕೆಯು ಹೆಚ್ಚಾಗಿದೆ. ಕೇವಲ ರಾಜ್ಯ ಮಾತ್ರವಲ್ಲದೇ ಅಂತರಾಜ್ಯಕ್ಕೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಂಪರ್ಕ ಕಲ್ಪಿಸುತ್ತಿದೆ. ಕೆಎಸ್​ಆರ್​ಟಿಸಿಗೆ ಇತ್ತೀಚಿಗೆ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿ ಲಭಿಸಿತ್ತು. ಆದರೆ ಇದೇ ಕೆಎಸ್​ಆರ್​ಟಿಸಿಯ ಗದಗ ಜಿಲ್ಲೆ ಡಿಪೋದಲ್ಲಿನ ಬಸ್​​ಗಳ ಅಸಲಿಯತ್ತು ಬಯಲಾಗಿದೆ. ಈ ಡಿಪೋದ ಬಸ್​​ಗಳು ಎಷ್ಟು ಡೇಂಜರಸ್​ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಗುಜುರಿಗೆ ಸೇರುತ್ತಿವೆ ಎಂದು ಚಾಲಕರು ಬಯಲು ಮಾಡಿದ್ದಾರೆ.

ಅಲ್ಲದೆ ಡಿಪೋದಲ್ಲಿ ಲಂಚ ಹೇಗೆ ತಾಂಡವವಾಡಿತ್ತಿದೆ. ಡ್ಯೂಟಿ ಪಡೆಯಲು ಗುಂಡು-ತುಂಡು ನೀಡಬೇಕು ಎಂಬುವುದರ ಬಗ್ಗೆ ಬಸ್​ ಚಾಲಕರು ಟಿವಿ9 ಡಿಜಿಟಲ್​​ಗೆ ತಿಳಿಸಿದ್ದಾರೆ. ಹಾಗಿದ್ದರೆ ಚಾಲಕರು ತಿಳಿಸಿದ ಅಸಲಿ ಸತ್ಯವೇನು ಇಲ್ಲಿದೆ ಓದಿ..

ಚಾಲಕ: ನಮಸ್ಕಾರಿ ಸರ್

ಟಿವಿ9: ಏನ್ ಸಮಸ್ಯೆ ಇದೆ.

ಚಾಲಕ: ನೋ ಗ್ಯಾರಂಟಿ ಗಾಡಿ ರೀ. ಒಂದು ಗಾಡಿನೂ ಓಕೆ ಗಾಡಿ ಇಲ್ಲ

ಟಿವಿ9: ಹೇಗೆ ಚಾಲಕರ ಪರಿಸ್ಥಿತಿ ?

ಚಾಲಕ: ದೇವರೇ ಕಾಪಾಡಬೇಕು.

ಟಿವಿ9: ಏನಾದ್ರೂ ಹೆಚ್ಚುಕಡಿಮೆ ಆದ್ರೆ ?

ಚಾಲಕ: ದೇವರೇ ಕಾಪಾಡಬೇಕು.

ಟಿವಿ9: ಸಮಸ್ಯೆ ಏನಿದೆ ?

ಚಾಲಕ: ಗಾಡಿ ಮೆಂಟೆನೆನ್ಸ್ ಇಲ್ಲ.

ಟಿವಿ9: ಹೇಗೆ ತೆಗೆದುಕೊಂಡು ಹೋಗುತ್ತೀರಿ ?

ಚಾಲಕ: ಏನ್ ಮಾಡೋದು ಸರ್ ಹೊಟ್ಟೆಪಾಡು.. ನೌಕರಿ ಆಗಬೇಕಲ್ಲ. ನೀ ಒಲ್ಲೆ ಅಂದ್ರೆ ಬಿಡು ಅಂತಾರೆ. ಹೋಗೋಗೆ 10 ಚಾಲಕರು ರೆಡಿ ಇರುತ್ತಾರೆ. ಅಂತ ಹೇಳುತ್ತಾರೆ.

ಟಿವಿ9: ಒಂದೂ ಗಾಡಿ ಕಂಡಿಷನ್ ಇಲ್ವಾ ?

ಚಾಲಕ: ನೋ ಗ್ಯಾರಂಟಿ ಗಾಡಿ. ಒಂದು ಗಾಡಿ ಕಂಡಿಷನ್ ಇಲ್ಲ. ಕ್ಲಚ್ ಇಲ್ಲ. ಬ್ರೇಕ್ ಇಲ್ಲಾ. ಇಂಜೀನ್ ಆಯಿಲ್ ಇಲ್ಲ.

ಟಿವಿ9: ಸರ್ಕಾರದಿಂದ ಹಣ ಬರುತ್ತೋ ಇಲ್ವೋ ?

ಚಾಲಕ: ಸರ್ಕಾರದ ಹಣ ಡಿಸೇಲ್, ವೇತನಕ್ಕೆ ಅಷ್ಟೇ ಕೊಡುತ್ತಿದ್ದಾರೆ ಸರ್​​.

ಟಿವಿ9: ಮೆಂಟೆನೆನ್ಸ್ ಇಲ್ವಾ ?

ಚಾಲಕ : ದುಡ್ಡು ಬರುವಾಗ್ಲೇ ಮಾಡಿಲ್ಲ ಈಗ ಮಾಡ್ತಾರಾ…

ಟಿವಿ9: ರಿಪೇರಿ ಗಾಡಿ ಒಳಗೆ ಬಹಳ ಇದಾವಾ ?

ಚಾಲಕ: 57 ಸ್ಕ್ಯ್ರಾಪ್ ಗಾಡಿ ಇವೆ. ಹೊರಗೆ ತೆಗೆಯಬಾರದು ಅಂಥ ಗಾಡಿ ಅವು.

ಟಿವಿ9: ನಿಲ್ಲಿಸಿದ್ದಾರಾ… ?

ಚಾಲಕ: ನಿಲ್ಲಿಸಿಲ್ಲಾ ಅವೇ ಓಡಿಸ್ತಾಯಿದ್ದಾರೆ.

ಟಿವಿ9: ಚಾಲಕರಿಗೆ ಡ್ಯೂಟಿ ಕೊಡ್ತಾಯಿಲ್ಲವಂತೆ ?

ಚಾಲಕ: ಅಯ್ಯೋ ದೊಡ್ಡ ಸಮಸ್ಯೆ ಇದೆ. ಯಾರೂ ಹೇಳಲ್ಲ.

ಟಿವಿ9: ಡ್ಯೂಟಿ ಕೊಡ್ತಾರೋ ಇಲ್ವೋ ?

ಚಾಲಕ: ಎಲ್ಲಿ ಡ್ಯೂಟಿ, ಕುಂತಿದ್ದಾರೆ ಕಟ್ಟಿಗೆ.. ಇಲ್ಲಿ ನೋಡಿ. ಈಗ ಹೋದ್ನಲ್ಲ ಅವ್ನೇ ಡಿಪೋ ಮ್ಯಾನೇಜರ್

ಟಿವಿ9: ಡಿಪೋ ಮ್ಯಾನೇಜರ್ ಎಲ್ಲಿಗೆ ಹೋದಾ ?

ಚಾಲಕ: ಇವರು ಡಿಪೋ ಮ್ಯಾನೇಜರ್ ಅಲ್ಲಾ. ಡಿಪೋ ಮ್ಯಾನೇಜರ್ ಲೆಕ್ಕಕ್ಕೆ ಅದಾನ್. ಅವ್ನ ತಗೊಂಡು ದುರ್ಗಾವಿಹಾರ ಹೋಟೆಲ್​ಗೆ ಹೋಗ್ಬೇಕು. ಸೆಟ್ಟಿಂಗ್ ಮಾಡಬೇಕು. ಚಹಾ ಕುಡಿಸಿ, ಎಣ್ಣೆ ಹೊಡಿಸಿ ಸೆಟಿಂಗ್ ಮಾಡಬೇಕು.

ಟಿವಿ9: ಯಾರು ಅವರು ?

ಚಾಲಕ: ಎಟಿಎಸ್ (ಅಸಿಸ್ಟಂಟ್ ಟ್ರಾಫಿಕ್ ಇನ್ಸಪೆಕ್ಟರ್) ಧನ್ಯಾಳ ಅಂತ.

ಟಿವಿ9: ಎಟಿಎಸ್​ಗೆ ಬೆಣ್ಣೆ ಹಚ್ಚಿದ್ರೆ ಅಷ್ಟೇ ಡ್ಯೂಟಿನಾ ?

ಚಾಲಕ: ಹಾಂ ಬೆಣ್ಣೆ ಹಚ್ಚಿದ್ರೆ, ರೊಕ್ಕಾ ಕೊಟ್ರೆ. ಕುಡಿಸಿದ್ರೆ ತಿನಿಸಿದ್ರೆ ಅಷ್ಟೇ.

ಟಿವಿ9: ಗಾಡಿ ರಿಪೇರಿ ಬಹಳ ಇದಾವಾ ?

ಚಾಲಕ: ಸಾಕಷ್ಟು ಗಾಡಿ ಅದಾವ್ರಿ. ಒಳಗೆ ನಿಮಗೆ ಅಲಾವ್ ಇಲ್ಲಾ..

ಟಿವಿ9: ಎಲ್ಲಾ ರಿಪೇರಿ ಇದ್ರೆ. ನಿಮ್ಮ ಡ್ಯೂಟಿ ಹೇಗೆ ?

ಚಾಲಕ: ಯಾರೂ ರೊಕ್ಕಾ ಕೊಟ್ಟು ಒಂದು ಟ್ರಿಪ್ ತೊಗೊಂಡು ಹೋಗ್ತಾರೆ.. ಗಾಡಿ ಅಲ್ಲೇ ನಿಲ್ಲುತ್ತೆ. ಅವ್ರಿಗೆ ನೌಕರಿ ಹಾಕ್ತಾರೆ. 1 ಟ್ರಿಪ್​ಗೆ ಸೆಟಿಂಗ್ ಇದ್ದ ಗಿರಾಕಿಗೆ ಹಾಗೆ. ಸೆಟಿಂಗ್​ಗೆ ನಾವು ದುಡ್ಡು ಕೊಡಲ್ಲ. ಈ ತಿಂಗಳ 5 ದಿನ ಪಗಾರ ತೆಗೆದಿಲ್ಲ. 3 ದಿನಕ್ಕೆ ಒಂದು ವಾರದ ಪಗಾರ ಹಾಕಿಲ್ಲ. 5-6 ಸಾವಿರ ನಮ್ದು ಹೊಯ್ತು. 20 ವರ್ಷ ದುಡಿದ ನಮಗೆ ಈ ಹಣೆ ಬರಹ ಇದೆ. ಹೊಸಬರ ಪರಿಸ್ಥಿತಿ ಹೇಗೆ…

ಟಿವಿ9: ಹೀಗಾದ್ರೆ ನಿಮ್ಮ ಪರಿಸ್ಥಿತಿ ಹೇಗೆ

ಚಾಲಕ: ನಮಗೆ ದೇವರೇ ಕಾಪಾಡಬೇಕು. ಎಲ್ಲಿ ಹೋದ್ರು ನ್ಯಾಯ ಸಿಗಲ್ಲ. ಎಲ್ಲ ಪ್ರಯತ್ನ ಮಾಡಿವಿ. ಪೊಲೀಸ್ ಠಾಣೆಗೆ ಹೋಗಿವಿ. ಕೋರ್ಟ್​ಗೆ ಹೋಗಿವಿ ಎಲ್ಲೂ ನ್ಯಾಯ ಸಿಕ್ಕಿಲ್ಲ. ಎಂಡಿ ಭೇಟಿ ಆಗಿವಿ. ಎಲ್ಲೆಲ್ಲೂ ಸಣ್ಣ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ.

ಟಿವಿ9 : ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಮಸ್ಯೆನಾ..

ಚಾಲಕ: ಶಕ್ತಿ ಯೋಜನೆಗಿಂತ ಮೊದಲು ಬಾದ್ ಆಗಿದೆ… ಅಂತ ಚಾಲಕ ಮಾತು ಮುಗಿಸಿ ಹೋದರು.

ಹೀಗೆ ಗದಗ ಡಿಪೋದಲ್ಲಿನ ಕರ್ಮಕಾಂಡವನ್ನು ಚಾಲಕ ಟಿವಿ9 ಡಿಜಿಟಿಲ್​ ಎದುರು ಬಿಚ್ಚಿಟ್ಟಿದ್ದಾರೆ. ಈಗಲದರೂ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಎಚ್ಚತ್ತಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:38 am, Wed, 13 December 23

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು