ಬೆಂಗಳೂರು, ಫೆ.04: ಕರ್ನಾಟಕ ಸಾರಿಗೆ ಇಲಾಖೆ (Transport Department) ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದು ನೂತನ ರೀತಿಯ ಬಸ್‌ಗಳನ್ನು ರಸ್ತೆಗಳಿಸುತ್ತಿದೆ. ಕೆಎಸ್‌ಆರ್‌ಟಿಸಿಯ (KSRTC) ಕೆಂಗೇರಿ ವರ್ಕ್ ಶಾಪ್ಗೆ ನೂರು ಹೊಚ್ಚ ಹೊಸ ಬಸ್‌ಗಳು ಬಂದಿವೆ. ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್‌ಗಳು ಬಂದಿವೆ. ನಾಳೆ (ಫೆ.05) ಬೆಳಿಗ್ಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮೇಲೆ ನೂರು ಹೊಸ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಲಿದ್ದಾರೆ.
ನೂರು ಹೊಸ ಬಸ್ಸುಗಳಿಗೆ ಅಶ್ವಮೇಧ ಕ್ಲಾಸಿಕ್ (ಪ್ರಯಾಣದ ಮರುಕಲ್ಪಣೆ) ಅನ್ನೋ ಹೆಸರು ಇಡಲಾಗಿದೆ. ಈ ನೂರು ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಅಶ್ವಮೇಧ ಬಸ್‌ಗಳು 3.42 ಮೀಟರ್ ಎತ್ತರವಿದೆ. 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಇದೆ. 52 ಬಕೆಟ್ ಸೀಟು, ಬಸ್ಸು ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ. ಪ್ರಯಾಣಿಕರು ಲಗೇಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಇದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಪಾಯಿಂಟ್ ಟೂ ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ಸುಗಳು ಇವು. ಮಹಿಳೆಯರು ಈ ಬಸ್ಸುಗಳಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದು. ಪುರುಷ ಪ್ರಯಾಣಿಕರು ಹಣ ಕೊಟ್ಟು ಪ್ರಯಾಣ ಮಾಡಬಹುದು.
ಈಗಾಗಲೇ ಸಾರಿಗೆ ಇಲಾಖೆ ಅಂಬಾರಿ ಉತ್ಸವ ಬಸ್, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಪರಿಚಯಿಸಿದ್ದು, ಇದೀಗ ಕೆಎಸ್‌ಆರ್‌ಟಿಸಿಯ ನೂತನ ವಿನ್ಯಾಸ ಪಾಯಿಂಟು ಟು ಪಾಯಿಂಟ್ ಎಕ್ಸಪ್ರೆಸ್ ಅಶ್ವಮೇಧ ಬಸ್‌ಗಳು ನಾಳೆಯಿಂದ ರಸ್ತೆಗಿಳಿಯಲಿವೆ.
ಈ ಹಿಂದೆ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬುಕುಮಾರ್ ಅವರು, ’20 ಅಂಬಾರಿ ಉತ್ಸವ, 20 ಐರಾವತ ಕ್ಲಬ್ ಕ್ಲಾಸ್, 100 ಪಲ್ಲಕಿ ನಾನ್ ಎಸಿ ಸ್ಲೀಪರ್, 500 ಎಲೆಕ್ಟ್ರಿಕ್ ಮತ್ತು 1000 ಕರ್ನಾಟಕ ಸಾರಿಗೆ ಬಸ್‌ಗಳನ್ನು ಈ ವರ್ಷ ಸೇವೆಗೆ ನಿಯೋಜಿಸಲಾಗುವುದು. ಇದರೊಂದಿಗೆ 1000 ಬಸ್‌ಗಳನ್ನು ನವೀಕರಿಸಲಾಗುವುದು ಎಂದು ತಿಳಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ