ಹಿಂದು ಪದದ ಅರ್ಥ ಅಶ್ಲೀಲ ಎಂದಿದ್ದ ಸತೀಶ್​ ಜಾರಕಿಹೊಳಿ ವಿರುದ್ಧ ಕ್ರಿಮಿನಲ್​ ಕೇಸ್​ಗೆ ಕೋರ್ಟ್​​ ಒಪ್ಪಿಗೆ

| Updated By: ವಿವೇಕ ಬಿರಾದಾರ

Updated on: Feb 04, 2024 | 5:10 PM

2022 ನವೆಂಬರ್​ 6 ರಂದು ಬೆಳಗಾವಿಯಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದದ್ದ ಸತೀಶ್​ ಜಾರಕಿಹೊಳಿ ಅವರು, ಹಿಂದು ಎಂಬ ಪದ ಅಶ್ಲೀಲ, ಕೊಳಕು, ಅಸಭ್ಯ ಅರ್ಥವಿದೆ ಎಂದು ಹೇಳಿದ್ದರು. ಇವರ ಹೇಳಿಕೆ ವಿರುದ್ಧ ವಕೀಲ ದಿಲೀಪ್​ ಕುಮಾರ್​ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

ಹಿಂದು ಪದದ ಅರ್ಥ ಅಶ್ಲೀಲ ಎಂದಿದ್ದ ಸತೀಶ್​ ಜಾರಕಿಹೊಳಿ ವಿರುದ್ಧ ಕ್ರಿಮಿನಲ್​ ಕೇಸ್​ಗೆ ಕೋರ್ಟ್​​ ಒಪ್ಪಿಗೆ
ಸತೀಶ್ ಜಾರಕಿಹೊಳಿ
Follow us on

ಬೆಂಗಳೂರು, ಫೆಬ್ರವರಿ 04: ಹಿಂದು ಪದಕ್ಕೆ ಅಶ್ಲೀಲ (Word Hindu means obscene) ಎಂಬ ಅರ್ಥವಿದೆ ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ (Satish Jarakiholi) ವಿರುದ್ಧ ಕ್ರಿಮಿನಲ್ ಕೇಸ್ (Criminal case)​ ದಾಖಲಿಸಿ, ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

2022 ನವೆಂಬರ್​ 6 ರಂದು ಬೆಳಗಾವಿಯಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸತೀಶ್​ ಜಾರಕಿಹೊಳಿ ಅವರು, ಹಿಂದು ಎಂಬ ಪದಕ್ಕೆ ಅಶ್ಲೀಲ, ಕೊಳಕು, ಅಸಭ್ಯ ಅರ್ಥವಿದೆ. ಇದರ ಮೂಲ ಭಾರತದಲ್ಲ ಹಿಂದು ಎಂಬ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಹಿಂದು ಎಂಬ ಪದ ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದು ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದನ್ನು ಚರ್ಚೆ ಮಾಡಬೇಕು ಎಂದಿದ್ದರು.

ಇದನ್ನೂ ಓದಿ: ಪಟ್ಟು ಬಿಡದ ಸತೀಶ್ ಜಾರಕಿಹೊಳಿ: ಹಿಂದೂ ಪದದ ಅರ್ಥ ಸೋತವರು, ಗುಲಾಮರು, ಡಕಾಯಿತರು ಎಂಬ ದಾಖಲೆ ಬಿಡುಗಡೆ

ಇದಾದ ನಂತರ ಸತೀಶ್​ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರು, ಹಿಂದೂ ಕಾರ್ಯಕರ್ತರು ಹಾಗೂ ವಕೀಲ ದಿಲೀಪ್ ಕುಮಾರ್ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ಹೇಳಿಕೆ ನಂತರ ಸತೀಶ್​ ಜಾರಕಿಹೊಳಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಲೋಕೋಪಯೋಗಿ ಸಚಿವ ಆಗಿದ್ದಾರೆ. ಆದ್ದರಿಂದ ವಕೀಲ ದಿಲೀಪ್​ ಕುಮಾರ್​ ಎಂಬುವರು ನೀಡಿದ್ದ ದೂರಿನ ಪ್ರಕರಣದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ, ಸಚಿವ ಸತೀಶ್ ಜಾರಕಿಹೊಳಿ‌ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸ್​ ದಾಖಲಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಕಾನೂನು ಹೋರಾಟ ಮಾಡುತ್ತೇವೆ: ಸತೀಶ್ ಜಾರಕಿಹೊಳಿ‌

ಆದೇಶದ ಪ್ರತಿಯಲ್ಲಿ ಏನಿದೆ ಅಂತಾ ನೋಡಬೇಕಿದೆ. ಆದೇಶದ ಪ್ರತಿ ನನಗೆ ಸಿಕ್ಕಿಲ್ಲ, ಕಾನೂನು ಹೋರಾಟ ಮಾಡುತ್ತೇವೆ. ಹಿಂದು ಪದದ ಬಗ್ಗೆ ನನ್ನ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯಾರೋ ಕೇಸ್ ಹಾಕಿದ್ದರು. ನ್ಯಾಯಾಲಯ ಏನು ಆದೇಶ ನೀಡಿದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:07 pm, Sun, 4 February 24