ಸಿದ್ದರಾಮಯ್ಯ ದೇವರು ಹೇಳಿಕೆ: ಸತೀಶ್​ ಜಾರಕಿಹೊಳಿ ಊಸರವಳ್ಳಿಯಂತೆ ಎಂದ ಯತ್ನಾಳ್

ಸತೀಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಆಕ್ರೋಶ ವ್ಯಕ್ತಡಿಸಿರುವ ಯತ್ನಾಳ್, ಇಂಥ ಊಸರವಳ್ಳಿಯಂತೆ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ದೇವರು ಹೇಳಿಕೆ: ಸತೀಶ್​ ಜಾರಕಿಹೊಳಿ ಊಸರವಳ್ಳಿಯಂತೆ ಎಂದ ಯತ್ನಾಳ್
ಸತೀಶ್ ಜಾರಕಿಹೊಳಿ & ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: Ganapathi Sharma

Updated on: Jan 08, 2024 | 8:46 AM

ಬೆಂಗಳೂರು, ಜನವರಿ 8: ಸಿಎಂ ಸಿದ್ದರಾಮಯ್ಯ ಅವರನ್ನು ದೇವರಂತೆ ನೋಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿರುವುದಕ್ಕೆ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿರುಗೇಟು ನೀಡಿದ್ದಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಆಕ್ರೋಶ ವ್ಯಕ್ತಡಿಸಿರುವ ಯತ್ನಾಳ್, ಇಂಥ ಊಸರವಳ್ಳಿಯಂತೆ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಟೀಕಿಸಿದ್ದಾರೆ.

‘ವ್ಯಕ್ತಿ ಪೂಜೆ ಮಾಡೋದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ, ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ ‘ಮನೆ ದೇವ’ರಾಗಿ ಮಾಡಿಕೊಂಡಿರುವ ನೀವು (ಸತೀಶ್ ಜಾರಕಿಹೊಳಿ ಉದ್ದೇಶಿಸಿ) ಎಂತಹ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವುದು’ ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಹುಕ್ಕೇರಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಎಲ್ಲ ಕಾರ್ಯಕರ್ತರಂತೆ ನಾನೂ ಸಹ ಸಿಎಂ ಸಿದ್ದರಾಮಯ್ಯ ಅವರನ್ನು ದೇವರಂತೆ ನೋಡುತ್ತೇನೆ. ಕಾರ್ಯಕರ್ತರು ಅವರವರ ನಾಯಕರನ್ನು ಭಕ್ತಿಯಿಂದ ದೇವರಂತೆ ಕಾಣುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ರಿಂದ ಆಮಿಷ: ಹೆಚ್​ಡಿ ಕುಮಾರಸ್ವಾಮಿ ಆರೋಪ

ಇತ್ತೀಚೆಗಷ್ಟೇ ಆಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಆಹ್ವಾನದ ವಿಚಾರವಾಗಿ ಮಾತನಾಡಿದ್ದ ಮಾಜಿ ಸಚಿವ ಹೆಚ್ ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಿಗೆ ಹೋಲಿಸಿದ್ದರು. ಸಿದ್ದರಾಮಯ್ಯ ಅವರೇ ‘ರಾಮ’ ಎಂದು ಹೇಳಿದ್ದರು. ಇದಕ್ಕೆ ಕೂಡ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಇದೀಗ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರನ್ನು ದೇವರು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ