ಬೆಂಗಳೂರು: ಸಂಧಾನ ಮಾಡುತ್ತಿರುವವರು ಯಾರು ಯಾರನ್ನ ಕಳಿಸಿದ್ದಾರೆ ಎಂದು ಹೊರಗಡೆ ಬರಬೇಕು. ಗಾಳಿಯಲ್ಲಿ ಅಥವಾ ಪಾರಿವಾಳ ಜೊತೆ ಸಂದೇಶ ಕಳುಹಿಸಿದಂತೆ ಮಾಧ್ಯಮದವರ ಜೊತೆ ಸಂದೇಶ ಕಳುಹಿಸಿದ್ರೆ ಅದು ಅಗುತ್ತಾ. ನಾನೇ ಸುರ್ಜೇವಾಲಾ ಜೊತೆ ಮಾತನಾಡಿದ್ದೇನೆ. ಇಂದು ಸಿದ್ದರಾಮಯ್ಯ (Siddaramaiah) ಹೇಳುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಎಲ್ಲರನ್ನು ಕೇಳಿ ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ ನಮ್ಮ ಯಾರು ಕೇಳಿಲ್ಲ, ಇದು ಏನ್ ದಬ್ಬಾಳಿಕೆನಾ ಎಂದು ಸಿದ್ದರಾಮಯ್ಯ ಅವರು ನಾವು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡಿದ ಒಂದು ತಿಂಗಳ ನಂತರ ಅವರ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬ ಮಾತಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಹರಿಹಾಯ್ದಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲಿ ನಾಳೆಯಿಂದ ಪಿಯು ಕಾಲೇಜುಗಳು ಆರಂಭ! ಹಿಜಾಬ್ ಧರಿಸಿ ಬಂದರೆ ತರಗತಿಗೆ ಇಲ್ಲ ಅವಕಾಶ
ನಾವು ಏನೂ ಅವರ ಗುಲಾಮರ. ಎಷ್ಟು ಬಾರೀ ನಮಗೆ ಬೆಂಬಲ ಕೊಟ್ಟಿದ್ದಾರೆ. ದೇವೇಗೌಡರು ರಾಜ್ಯಸಭೆಗೆ ಹೋಗಬೇಕಾದ ಸನ್ನಿವೇಶವೇ ಬೇರೆ. ಮಾಜಿ ಸಿಎಂ ಯಡಿಯೂರಪ್ಪ ಅವರೇ ನಮಗೆ ಫೋನ್ ಮಾಡಿ ಹೇಳಿದರು. ನಮ್ಮ ಹೈಕಮಾಂಡ್ ಹೇಳಿದ್ದಾರೆ ದೇವೇಗೌಡ ಅಂತಹ ಹಿರಿಯರು ಬೇಕು ಎಂದು ಹೇಳಿದ್ದಾರೆ. ಆಗಾ ಬಿಜೆಪಿ ಅಭ್ಯರ್ಥಿಯನ್ನು ಹಾಕದಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಲಿಲ್ಲ. ನಾವು ಕುಪೇಂದ್ರ ರೆಡ್ಡಿ ಅವರನ್ನ ಅಭ್ಯರ್ಥಿಯಾಗಿ ಮಾಡುವುದಕ್ಕಿಂತ ಮುಂಚೆಯೇ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದಾರೆ. ನಾವು ಮೊದಲು ಕೇಳಿದ್ದೇವೆ ಅವರು ಕೇಳಿದ್ರಾ..? ನಮ್ಮ ಅಭ್ಯರ್ಥಿಯನ್ನು ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.
ಇದನ್ನು ಓದಿ: ತಂದೆ ಮಾಜಿ ಸಿಎಂ ಯಡಿಯೂರಪ್ಪರನ್ನ ಗುಣಗಾನ ಮಾಡಿದ ಮಗ ಬಿ.ವೈ. ವಿಜಯೇಂದ್ರ
ನಮ್ಮ ಕುಟುಂಬಕ್ಕೆ ಇದು ಬಹಳ ವಿಶೇಷ ಕಾರ್ಯಕ್ರಮ. ದೊಡ್ಡದಾಗಿ ನಡೆಸಬೇಕೆಂಬ ಆಸೆಯಿತ್ತು. ಆದರೆ ಕೋವಿಡ್ 4 ಅಲೆ ಭೀತಿಯಿಂದ ಸರಳವಾಗಿ ಆಚರಣೆ ಮಾಡಿದ್ದೇವೆ. ನಾಮಕರಣ ಮತ್ತು ಕನಕಾಭಿಷೇಕ ಕಾರ್ಯಕ್ರಮ ನೆರವೇರಿಸಿದ್ದೇವೆ ಎಂದು ಮೊಮ್ಮಗನ ನಾಮಕರಣ ಸಮಾರಂಭ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಇಬ್ರಾಹಿಂ, ಶಾಸಕ ಬಂಡೆಪ್ಪ ಕಾಶಂಪೂರ್ ಭಾಗಿಯಾಗಿದ್ದರು. ಪ್ರತಿಯೊಬ್ಬರಿಗೂ ದೇವರು ಒಂದೊಳ್ಳೆ ಅವಕಾಶ ಕೊಟ್ಡಿರ್ತಾನೆ. ದೇವೇಗೌಡರು ನಾಲ್ಕನೇ ತಲೆಮಾರನ್ನು ನೋಡೋ ಅವಕಾಶ ಸಿಕ್ಕಿದೆ. ಅದರ ಹಿನ್ನೆಲೆ ಇಂದು ಶಾಸ್ತ್ತೋತ್ರ್ಸವಾಗಿ ಕಾರ್ಯಕ್ರಮ ಮಾಡಿದ್ದೇವೆ. ಇದು ನಮ್ಮ ಕುಟುಂಬದ ವಿಶೇಷ ಕಾರ್ಯಕ್ರಮ. ಅವರು ಶತಾಯುಷಿಗಳಾಗಬೇಕು ಅಂತ ಪೂಜಿಸಿದ್ದೇವೆ. ಅವರ ಈ ಎಲ್ಲ ಯಶಸ್ವಿ ಜೀವನಕ್ಕೆ ಕಾರಣರಾದವರನ್ನು ಕರೆದು ಕಾರ್ಯಕ್ರಮಮಾಡೋ ಪ್ಲಾನ್ ಇತ್ತು. ಆದರೆ ಕೋವಿಡ್ ನ ಹಿನ್ನೆಲೆ ಕೆಲವೇ ಆಪ್ತರು ಹಾಗು ಕುಟುಂಬದವರನ್ನ ಕರೆದು ಮಾಡಿದ್ದಿವಿ. ಇವತ್ತು ಒಳ್ಳೆ ದಿನ ಅಂತ ಹೇಳಿದರು ಅದಕ್ಕೆ ಮಾಡಿದ್ದೀವಿ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.