AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಮಾಜಿ ಸಿಎಂ ಯಡಿಯೂರಪ್ಪರನ್ನ ಗುಣಗಾನ ಮಾಡಿದ ಮಗ ಬಿ.ವೈ. ವಿಜಯೇಂದ್ರ

ಜನರ ನೋವಿಗೆ ಸ್ಪಂದಿಸಲು ನೆರವಾಗಲು ಹೋರಾಟ ಮಾಡಿದ್ದು ಧೀಮಂತ ನಾಯಕ ಬಿ.ಎಸ್. ಯುಡಿಯೂರಪ್ಪ. ಅವರು ಕೊಟ್ಟ ಯೋಜನೆಯನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.

ತಂದೆ ಮಾಜಿ ಸಿಎಂ ಯಡಿಯೂರಪ್ಪರನ್ನ ಗುಣಗಾನ ಮಾಡಿದ ಮಗ ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ
TV9 Web
| Edited By: |

Updated on: Jun 08, 2022 | 2:58 PM

Share

ಹಾಸನ: ವಿಧಾನಪರಿಷತ್ ಚುನಾವಣೆಯನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸಿದ್ದಗಂಗಾ ಶ್ರೀಗಳನ್ನ ನಡೆದಾಡುವ ದೇವರು ಎಂದು ಎಲ್ಲರು ಪೂಜಿಸುತ್ತೇವೆ. ಹಾಗೆಯೇ ನಡೆದಾಡುವ ಸರ್ಕಾರ ಎಂಬಂತೆ ಮನೆಗೆ ತಲುಪಿಸಿದ್ದು ಯಡಿಯೂರಪ್ಪ. ಯಡಿಯೂರಪ್ಪರನ್ನ ಧಿಮಂತ ಜನ ನಾಯಕ ಎಂದು ಕರೆಯುತ್ತಾರೆ. ಬೇರೆ ಯಾರನ್ನೂ ಕರೆಯೊದಿಲ್ಲ ಎಂದು ತಂದೆ ಮಾಜಿ ಸಿಎಂ ಯಡಿಯೂರಪ್ಪರನ್ನ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಗುಣಗಾನ ಮಾಡಿದರು. ಅದೆಷ್ಟು ಪಾದಯಾತ್ರೆ, ಅದೆಷ್ಟು ಸೈಕಲ್ ಜಾತಾ ಹೋರಾಟ ಮಾಡಿದ್ದಾರೆ. ಇವೆಲ್ಲಾ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಮಾಡಿದ್ದಲ್ಲ. ಜನರ ನೋವಿಗೆ ಸ್ಪಂದಿಸಲು ನೆರವಾಗಲು ಹೋರಾಟ ಮಾಡಿದ್ದು ಧೀಮಂತ ನಾಯಕ ಬಿ.ಎಸ್. ಯುಡಿಯೂರಪ್ಪ. ಅವರು ಕೊಟ್ಟ ಯೋಜನೆಯನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಯಡಿಯೂರಪ್ಪ ಆಡುಮುಟ್ಟದ ಸೊಪ್ಪಿಲ್ಲ ಎನ್ನೊ ರೀತಿಯಲ್ಲಿ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಹೀಗೆ ಅವರು ಎಲ್ಲರಿಗೂ ಅನುಕೂಲ ಆಗೊ ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ‘ಆಚಾರ್ಯ’ ಸಿನಿಮಾ ವಿತರಕರ ನಷ್ಟ ಭರಿಸಲು ಸಂಭಾವನೆಯನ್ನೇ ಹಿಂದಿರುಗಿಸಿದ ನಟ ಚಿರಂಜೀವಿ

ಹಿಂದೆ ಬಿಜೆಪಿ ಎಂದರೆ ನಗರಕ್ಕೆ ಸೀಮಿತ ಎಂದು ವಿಪಕ್ಷಗಳು ಮಾತನಾಡುತ್ತಿದ್ದರು. ಈಗ ಹಳ್ಳಿ ಗಲ್ಲಿಯಲ್ಲಿ ಬಿಜೆಪಿ ಬೆಳೆದು ನಿಂತಿದೆ. ಬಿಜೆಪಿ ಅಧಿಕಾರಕ್ಕೆ ಬರೋದು ಕನಸು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಬಿಜೆಪಿ ಇವತ್ತು ಕರ್ನಾಟಕದಿಂದ ಕಾಶ್ಮೀರದವರೆಗೆ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಇದೇ ವೇಳೆ ಕಾಂಗ್ರೆಸ್ ಸ್ಥಿತಿ ಏನಾಗಿದೆ. ಅತಿ ಹೆಚ್ಚು ಸಂಸತ್ ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ ಕೇವಲ 42 ಕ್ಕೆ ಕುಸಿದಿದೆ. ಪ್ರತಿ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳೋ ರಾಹುಲ್ ಗಾಂಧಿ ಅವರ ಕುಟುಂಬ ಸದಾಕಾಲ ನಿಲ್ಲುತ್ತಿದ್ದ ಕ್ಷೇತ್ರವನ್ನ ಬಿಡಬೇಕಾಯ್ತು. ಅವರು ಕೇರಳದಲ್ಲಿ ಹೋಗಿ ಚುನಾವಣೆಗೆ ನಿಂತರು. ಈಗ ಕಾಂಗ್ರೆಸ್ ದೇಶದ ಎಲ್ಲೂ ಚುನಾವಣೆಗೆ ನಿಲ್ಲಲಾಗದ ಸ್ಥಿತಿ ತಲುಪಿದೆ. ನಮ್ಮ ಪ್ರಧಾನಿ ಭವಿಷ್ಯದ ಭಾರತ ಹೇಗಿರಬೇಕು ಎಂದು ಯೋಚನೆ ಮಾಡುತ್ತಾರೆ ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ಇಲ್ಲದೆ ಸರ್ಕಾರ ನಡೆದಿದೆ. ಭ್ರಷ್ಟಾಚಾರ ರಹಿತವಾಗಿ ಸರ್ಕಾರ ನಡೆಸಬಹುದು ಎಂದು ನಮ್ಮ ಪ್ರಧಾನಿ ತೋರಿಸಿಕೊಟ್ಟಿದಾರೆ ಎಂದು ಹೇಳಿದರು.

ನಾನಿನ್ನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ. ಕಳೆದ ಐದಾರು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ರಾಜ್ಯ ಯುವ ಮೋರ್ಚ ಪ್ರದಾನ ಕಾರ್ಯದರ್ಶಿಯಾಗಿದ್ದೆ. ಈಗ ರಾಜ್ಯ ಉಪಾದ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಣ್ಣ ಮುಂದೆ ಇರೋದು ಪಕ್ಷ ಸಂಘಟನೆ ಮಾಡೋ ಜವಾಬ್ದಾರಿ ಕೊಟ್ಟಿದೆ. ಅದನ್ನ ಕಣ್ಣ ಮುಂದೆ ಇಟ್ಟುಕೊಂಡು ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ. ಅದರ ಹೊರತಾಗಿ ಮುಂದೆ ಶಾಸಕ, ಸಚಿವ, ಸಿಎಂ ಆಗಬೇಕು ಎಂದು ಎನ್ನೋ ಪ್ರಶ್ನೆ ಉದ್ಭವ ಆಗಲ್ಲ. ನಮ್ಮ ರಾಜ್ಯದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಯಾವುದೇ ಸ್ಥಾನ ಮಾನ ಇಲ್ಲದೆ ಪಕ್ಷಕ್ಕೆ ದುಡಿಯುತ್ತಿದ್ದಾರೆ. ಹಾಗಾಗಿ ಇಂತಹ ಚರ್ಚೆಗಳು ಅವಶ್ಯಕತೆ ಇಲ್ಲಾ ಎಂದು ನಾನು ಭಾವಿಸಿದ್ದೇನೆ. ನಾನಂತೂ ಬಹಳ ಸ್ಪಷ್ಟವಾಗಿ ಇದ್ದೇನೆ ಎಂದರು.

ನಾನು ಮುಂದೆ ಯಾವ ರೀತಿ ಹೋಗಬೇಕು ಯಾವ ರೀತಿ ಪಕ್ಷಕ್ಕೆ ಬಲ ಕೊಡಬೇಕು. ಇದನ್ನ ಕಣ್ಣಮುಂದೆ ಇಟ್ಟು ಕೊಂಡು ನಾನು ಕೆಲಸ ಮಾಡುತ್ತಿದ್ದೇನೆ. ಮುರುಗೇಶ್ ನಿರಾಣಿಯವರು ನಾರಾಯಣಗೌಡರು ಬಹಳ ದೊಡ್ಡ ಮಾತನ್ನ ಹೇಳಿದಾರೆ. ನನ್ನ ಹಣೆಬರಹದಲ್ಲಿ ಏನು ಬರೆದಿದೆಯೋ ಅದನ್ನ ಯಾರು ಬದಲಾವಣೆ ಮಾಡಲು ಆಗಲ್ಲ. ಆದರೆ ನನ್ನ ಕಣ್ಣ ಮುಂದೆ ಇರೋದು ಪಕ್ಷ ಸಂಘಟನೆ. ಪಕ್ಷ ಸಂಘಟನೆ ಹೊರತಾಗಿ ಬೇರೆ ಏನನ್ನು ನಾನು ಮನಸ್ಸಿನಲ್ಲಿ ಇಟ್ಟು ಕೊಂಡಿಲ್ಲ. ರಾಜ್ಯದಲ್ಲಿ ಪ್ರವಾಸ ಮಾಡಬೇಕು ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಯೋಚನೆ ಮಾಡಿದ್ದೇನೆ. ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಆಗಲ್ಲ. ಹಾಗಾಗಿಯೇ ಯಡಿಯೂರಪ್ಪ ಇಷ್ಟು ಎತ್ತರಕ್ಕೆ ಬೆಳೆದದ್ದು. ನಾನು ಕೂಡ ಕಾರ್ಯಕರ್ತರ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.