ಸಾಕ್ಷ್ಯಾಧಾರ ಕೊರತೆಯಿಂದ ನಾಲ್ಕು ಪ್ರಕರಣಗಳಲ್ಲಿ ಶಾಸಕ ಎಂಪಿ ರೇಣಾಕಾಚಾರ್ಯರಿಗೆ ಬಿಗ್ ರಿಲೀಫ್

| Updated By: ಆಯೇಷಾ ಬಾನು

Updated on: Jun 29, 2022 | 6:14 PM

ವಿಚಾರಣೆ ವೇಳೆ ಕೆಲ ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನೀಡಿದ್ದ ಹೇಳಿಕೆ ಮತ್ತು ಕೋರ್ಟ್ನಲ್ಲಿ ಸಾಕ್ಷಿಗಳ ಹೇಳಿಕೆ ತಾಳಿಯಾಗಿಲ್ಲ. ಅಲ್ಲದೆ ಸಾಕ್ಷ್ಯಾಧಾರ ಕೊರತೆಯಿಂದ ರೇಣುಕಾಚಾರ್ಯ ಸೇರಿದಂತೆ ಹಲವು ಬೆಂಬಲಿಗರನ್ನು ಖುಲಾಸೆಗೊಳಿಸಿ ನ್ಯಾ.ಜೆ.ಪ್ರೀತ್ ಆದೇಶ ಹೊರಡಿಸಿದ್ದಾರೆ.

ಸಾಕ್ಷ್ಯಾಧಾರ ಕೊರತೆಯಿಂದ ನಾಲ್ಕು ಪ್ರಕರಣಗಳಲ್ಲಿ ಶಾಸಕ ಎಂಪಿ ರೇಣಾಕಾಚಾರ್ಯರಿಗೆ ಬಿಗ್ ರಿಲೀಫ್
ಶಾಸಕ ಎಮ್ ಪಿ ರೇಣುಕಾಚಾರ್ಯ
Follow us on

ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ಎಂಪಿ ರೇಣಾಕಾಚಾರ್ಯರಿಗೆ(MP Renukacharya) ನಾಲ್ಕು ಪ್ರಕರಣಗಳಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಶಾಸಕ ರೇಣುಕಾಚಾರ್ಯ ಖುಲಾಸೆಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಕೆಲ ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನೀಡಿದ್ದ ಹೇಳಿಕೆ ಮತ್ತು ಕೋರ್ಟ್ನಲ್ಲಿ ಸಾಕ್ಷಿಗಳ ಹೇಳಿಕೆ ತಾಳಿಯಾಗಿಲ್ಲ. ಅಲ್ಲದೆ ಸಾಕ್ಷ್ಯಾಧಾರ ಕೊರತೆಯಿಂದ ರೇಣುಕಾಚಾರ್ಯ ಸೇರಿದಂತೆ ಹಲವು ಬೆಂಬಲಿಗರನ್ನು ಖುಲಾಸೆಗೊಳಿಸಿ ನ್ಯಾ.ಜೆ.ಪ್ರೀತ್ ಆದೇಶ ಹೊರಡಿಸಿದ್ದಾರೆ. ಶಿವಕುಮಾರ್ ಕೆ.ಎಸ್. ಮತ್ತು ಕಾವ್ಯಶ್ರೀ ಜಿ.ಎಸ್ ವಾದ ಮಂಡನೆ ಮಾಡಿದ್ದಾರೆ.

ರೇಣಾಕಾಚಾರ್ಯರಿಗೆ ನಾಲ್ಕು ಪ್ರಕರಣಗಳಲ್ಲಿ ಬಿಗ್ ರಿಲೀಫ್
1. ಮರಳು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಅಡ್ಡಿಪಡಿಸಿದ ಆರೋಪ
2. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
3.ಹೊನ್ನಾಳಿ ಚುನಾವಣೆ ಫಲಿತಾಂಶದ ವೇಳೆ ದಾಂಧಲೆ ಆರೋಪ
4. ಅಕ್ರಮವಾಗಿ ಮರಳು ತುಂಬಲು ಕರೆ ನೀಡಿದ ಆರೋಪ

2018 ಡಿಸೆಂಬರ್ 1 ರಂದು ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದ್ದು ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರೇಣುಕಾಚಾರ್ಯ ಖುಲಾಸೆಗೊಳಿಸಿ ಕೋರ್ಟ್ ಆದೇಶ ನೀಡಿದೆ. ಆದ್ರೆ ಶಾಸಕರು ಮುಷ್ಟಿ ಅಕ್ಕಿ ಅಭಿಯಾನ ನಡೆಸಿದ್ದರೆಂದು ಆರೋಪ ಕೇಳಿ ಬಂದಿದ್ದು ಮೇ.12, 2018 ರಂದು ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಕೇಸ್ ದಾಖಲಿಸಿದ್ದರು. ಆದರೆ ವಿಚಾರಣೆ ವೇಳೆ ಅಧಿಕಾರಿಗಳು ಉಲ್ಟಾ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾಕ್ಷ್ಯಾಧಾರ ಕೊರತೆಯಿಂದ ರೇಣುಕಾಚಾರ್ಯ ಖುಲಾಸೆಗೊಳಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ 75 ವರ್ಷ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ -ರಾಹುಲ್ ಗಾಂಧಿಗೆ ಆಹ್ವಾನ

ಇನ್ನು ಹೊನ್ನಾಳಿ ಚುನಾವಣೆ ಫಲಿತಾಂಶದ ವೇಳೆ ದಾಂಧಲೆ ಮಾಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಶಾಸಕ ರೇಣುಕಾಚಾರ್ಯ ಖುಲಾಸೆಗೊಳಿಸಿ ಕೋರ್ಟ್ ಆದೇಶ ನೀಡಿದೆ. ಆದ್ರೆ ಮೇ.15,2018 ರಂದು ನಿಷೇಧಾಜ್ಞೆ ಉಲ್ಲಂಘಿಸಿ ವಿಜಯೋತ್ಸವ ಮಾಡಲಾಗಿದ್ದು ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಇದಕ್ಕೂ ಸಾಕ್ಷ್ಯಾಧಾರ ಕೊರತೆಯಿಂದ ರೇಣುಕಾಚಾರ್ಯ ಖುಲಾಸೆಗೊಳಿಸಲಾಗಿದೆ.

ಅಕ್ರಮವಾಗಿ ಮರಳು ತುಂಬಲು ಕರೆ ನೀಡಿದ ಆರೋಪ ಕೇಸ್ಗೆ ಸಂಬಂಧಿಸಿ ಶಾಸಕ ರೇಣುಕಾಚಾರ್ಯ ಖುಲಾಸೆಗೊಳಿಸಿ ಕೋರ್ಟ್ ಆದೇಶ ನೀಡಿದೆ. ನವೆಂಬರ್ 19, 2018 ರಂದು ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲವೆಂದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಎತ್ತಿನ ಗಾಡಿಗಳಲ್ಲಿ ಮರಳು ತುಂಬಲು ಶಾಸಕ ರೇಣುಕಾಚಾರ್ಯ ಕರೆ ನೀಡಿದ್ದರು. ತುಂಗಭದ್ರಾ ನದಿಯಲ್ಲಿ ಮರಳು ಎತ್ತಿದ ಆರೋಪವಿತ್ತು. ಆದರೆ ವಿಚಾರಣೆ ವೇಳೆ ಅಧಿಕಾರಿಗಳು ಉಲ್ಟಾ ಹೇಳಿಕೆ ನೀಡಿದ್ದು ಸಾಕ್ಷ್ಯಾಧಾರ ಕೊರತೆಯಿಂದ ರೇಣುಕಾಚಾರ್ಯ ಖುಲಾಸೆಗೊಳಿಸಿ ಆದೇಶ ನೀಡಲಾಗಿದೆ.

Published On - 6:14 pm, Wed, 29 June 22