ಲಾಲ್ ಬಾಗ್ ಫ್ಲವರ್ ಶೋಗೆ ಜನ ಸಾಗರ: ನಿನ್ನೆ ಒಂದೇ ದಿನ 96,500 ಜನ ವೀಕ್ಷಣೆ: 65 ಲಕ್ಷ ರೂ. ಆದಾಯ

ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್​ಬಾಗ್​​​​ನಲ್ಲಿ 215ನೇ ಫ್ಲವರ್​ ಶೋ ನಡೆಯುತ್ತಿದೆ. ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್​ಗೆ ಭೇಟಿ ನೀಡಿದ್ದಾರೆ. ನಿನ್ನೆ ಒಂದೇ ದಿನ 96,500 ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ.

ಲಾಲ್ ಬಾಗ್ ಫ್ಲವರ್ ಶೋಗೆ ಜನ ಸಾಗರ: ನಿನ್ನೆ ಒಂದೇ ದಿನ 96,500 ಜನ ವೀಕ್ಷಣೆ: 65 ಲಕ್ಷ ರೂ. ಆದಾಯ
ಫ್ಲವರ್​​​ ಶೋ
Edited By:

Updated on: Jan 27, 2024 | 3:41 PM

ಬೆಂಗಳೂರು, ಜನವರಿ 27: ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್​ಬಾಗ್​​​​ನಲ್ಲಿ 215ನೇ ಫ್ಲವರ್​ ಶೋ (Lalbagh Flower Show) ನಡೆಯುತ್ತಿದೆ. ವೀಕ್​ಎಂಡ್ ಆಗಿರುವುದರಿಂದ ಸಾವಿರಾರು ಜನರು ಫ್ಲವರವ ಶೋ ವೀಕ್ಷಣೆ‌ ಮಾಡಿದ್ದಾರೆ. ಅದರಲ್ಲಿಯೂ ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್​ಗೆ ಭೇಟಿ ನೀಡಿದ್ದಾರೆ. ನಿನ್ನೆ ಒಂದೇ ದಿನ 96,500 ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ. ಈ ಬಾರಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ನಾಳೆ ಕೊನೆಯ ದಿನವಾಗಿದೆ.

ಈ ಬಾರಿಯ ಫ್ಲವರ್​ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, ಬಸವಣ್ಣನವರನ್ನು ಇನ್ಮುಂದೆ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ ಅಂತ ಹೇಳಿದ್ದರು.

ಇದನ್ನೂ ಓದಿ: ಯಾದಗಿರಿ ಲುಂಬಿನಿ ಉದ್ಯಾನವನದಲ್ಲಿ ನಿರ್ಮಾಣಗೊಂಡ ಪುಷ್ಪಲೋಕ; ಹೂವು-ಹಣ್ಣುಗಳಿಂದ ನಿರ್ಮಾಣವಾದ ಸಾಧಕರ ಚಿತ್ರಗಳು

ವಿದೇಶಿ ಹೂಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಫ್ಲವರ್ ಶೋನಲ್ಲಿ ಇಪೇಶನ್ಸ್, ಪೆಟುನೀಯಾ, ಜೆರೇನಿಯಮ್, ಜೇರ್ಬೇರ, ಸೇವಂತಿಗೆ, ಕೆಲಾಂಚೋ, ಸಾಲ್ವಿಯಾ ಸೇರಿದಂತೆ ಇಂಡೋ ಅಮೇರಿಕನ್ ಹೈಬ್ರಿಡ್ ಹೂವುಗಳು ನೋಡುಗರ ಕಣ್ಮನ ಸೆಳೆದಿವೆ.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 68 ಬಗೆಯ ಹೂಗಳನ್ನ ಬಳಸಲಾಗಿದೆ. ಗುಲಾಬಿ, ಸಂಪಿಗೆ, ಪ್ಯಾಲನೋಪ್ಸ್, ಲ್ಯಾಡ್ಸ್ ಹೂ ಎಲ್ಲರ ಗಮನ ಸೆಳೆಯುತ್ತಿವೆ. ವಚನಕಾರರಾದ ಅಲ್ಲಮಪ್ರಭು, ಅಕ್ಕಮಹಾದೇವಿ,‌ ಇಷ್ಟಲಿಂಗವನ್ನ ನಿರ್ಮಾಣ ಮಾಡಲಾಗಿದೆ. ಅನುಭವ ಮಂಟಪವನ್ನ 3 ಬಗೆಯ ಗುಲಾಬಿ ಹಾಗೂ 4 ಬಗೆಯ ಸಂಪಿಗೆ ಹೂ ಬಳಸಿ ನಿರ್ಮಿಸಲಾಗಿದೆ.

ಮತ್ತೊಂದೆಡೆ ಫ್ಲವರ್ ಶೋನಲ್ಲಿ, ಇಕೆಬಾನ, ತರಕಾರಿ ಕೆತ್ತನೆ, ಥಾಯ್ ಆರ್ಟ್, ಜಾನೂರು ಮತ್ತು ಪುಷ್ಪ ರಂಗೋಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನ ಚಿತ್ರನಟಿ ತಾರಾ ಉದ್ಘಾಟನೆ ಮಾಡಿದ್ದರು. ಬಳಿಕ ಫ್ಲವರ್ ಶೋ ವೀಕ್ಷಿಸಿದ್ದರು.

ಇದನ್ನೂ ಓದಿ: ಕೃಷಿ ಮೇಳದಲ್ಲಿ ಡ್ರೋನ್ ಆಕರ್ಷಣೆ, ಪುಷ್ಪಗಳಲ್ಲಿ ರಾಮ ಮಂದಿರ ನಿರ್ಮಾಣ, ಎಲ್ಲಿ?

ಈ ಬಾರಿಯೂ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.

ನಾಳೆ ಒಂದು ದಿನ ಮಾತ್ರ ಫ್ಲವರ್​ ಶೋ ಇರಲಿದೆ. ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 7.30 ರವರೆಗೆ ಫ್ಲವರ್ ಶೋ ನೋಡಬಹುದು. ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ 80 ರೂ‌ಪಾಯಿ, ಮಕ್ಕಳಿಗೆ 30 ರೂಪಾಯಿ ಟಿಕೆಟ್ ನಿಗದಿ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.