AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಹೊಸ ಮಾರ್ಗಸೂಚಿ; 33 ಚಟುವಟಿಕೆಗಳಿಗೆ ಬಿತ್ತು ಬ್ರೇಕ್

ರಾಜ್ಯ ಸರ್ಕಾರ ಲಾಲ್‌ಬಾಗ್ ಸಸ್ಯೋದ್ಯಾನದ ಸಸ್ಯ ಸಂಗ್ರಹ ರಕ್ಷಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಸ್ಯ ವೈವಿಧ್ಯತೆ ಸಂರಕ್ಷಿಸಲು ಮತ್ತು ಶಿಸ್ತು ಕಾಪಾಡಲು ಮರ ಹತ್ತುವುದು, ಹೂ ಕೀಳುವುದು, ಛಾಯಾಗ್ರಹಣ ಸೇರಿ 33 ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಹೊಸ ಮಾರ್ಗಸೂಚಿ; 33 ಚಟುವಟಿಕೆಗಳಿಗೆ ಬಿತ್ತು ಬ್ರೇಕ್
ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಹೊಸ ಮಾರ್ಗಸೂಚಿ
ಭಾವನಾ ಹೆಗಡೆ
|

Updated on:Nov 22, 2025 | 9:02 AM

Share

ಬೆಂಗಳೂರು, ನವೆಂಬರ್ 22: ರಾಜ್ಯ ಸರ್ಕಾರ ಲಾಲ್‌ಬಾಗ್ ಸಸ್ಯೋದ್ಯಾನವನದ (Lal bagh Botanical Garden) ವ್ಯಾಪಕ ಸಸ್ಯ ಸಂಗ್ರಹವನ್ನು ರಕ್ಷಿಸಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಯಮದಡಿಯಲ್ಲಿ ದಿನನಿತ್ಯ ನಡೆಯುತ್ತಿದ್ದ ಹಲವಾರು ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದ್ದು, ನಿಷೇಧಿತ ಚಟುವಟಿಕೆಗಳಲ್ಲಿ ತೊಡಗುವವರಿಗೆ 500 ರೂ. ವರೆಗಿನ ದಂಡವೂ ಬೀಳಲಿದೆ.

ಕಳೆದ ವಾರ ಬಿಡುಗಡೆಯಾದ ಅಧಿಸೂಚನೆಯಲ್ಲಿ ಲಾಲ್‌ಬಾಗ್‌ನ ಶ್ರೀಮಂತ ಸಸ್ಯ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಶಿಸ್ತು ಕಾಪಾಡಲು ಸರ್ಕಾರವು ಗುಂಪು ಯೋಗ, ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಸೇರಿ 33 ಚಟುವಟಿಕೆಗಳನ್ನು ನಿಷೇಧಿಸಿದ್ದು, ಉದ್ಯಾನವನದಲ್ಲಿ ಹೊಸ ನಿಯಮಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಲಾಲ್​ಬಾಗ್ ಯಾವೆಲ್ಲಾ ಚಟುವಟಿಕೆಗಳ ಮೇಲೆ ನಿಷೇಧ?

ಲಾಲ್​ಬಾಗ್​ನ ಆವರಣದೊಳಗೆ ಹೊರಗಿನ ಆಹಾರವನ್ನು ತರುವುದು ಅಥವಾ ಸೇವಿಸುವುದನ್ನು ನಿಷೇಧಿಸಲಾಗಿದೆ. ಫಿಟ್‌ನೆಸ್ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಾದ ವಾಕಥಾನ್‌ಗಳು, ಮ್ಯಾರಥಾನ್‌ಗಳು, ಸೈಕ್ಲಿಂಗ್ ಮತ್ತು ಸ್ಕೇಟಿಂಗ್‌ಗಳಿಗೆ ಅನುಮತಿಯಿರುವುದಿಲ್ಲ. ಅದರೊಂದಿಗೆ ಭಿಕ್ಷೆ ಬೇಡುವುದು, ಲಂಚ ಸಂಗ್ರಹಿಸುವುದು ಮತ್ತು ಭವಿಷ್ಯ ಹೇಳುವುದು ಇಂತಹ ಚಟುವಟಿಕೆಗಳನ್ನು ಬ್ಯಾನ್ ಮಾಡಲಾಗಿದೆ.

ಉದ್ಯಾನದ ಒಳಗೆ ಸಾಕುಪ್ರಾಣಿಗಳಿಗೆ ಅನುಮತಿಯಿರುವುದಿಲ್ಲ. ಯೋಗ, ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಪತ್ರಿಕಾಗೋಷ್ಠಿಗಳಂತಹ ಗುಂಪು ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದ್ದು, ಹುಟ್ಟುಹಬ್ಬದ ಪಾರ್ಟಿಗಳು ಸೇರಿದಂತೆ ಹಲವು ಆಚರಣೆಗಳನ್ನು ನಿಷೇಧಿಸಲಾಗಿದೆ.

ಲಾಲ್​ಬಾಗ್​ನ ಸಸ್ಯ ಸಂಗ್ರಹವನ್ನು ರಕ್ಷಿಸಲು 33 ಚಟುವಟಿಕೆಗಳನ್ನು ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಅಥವಾ ಕೊಂಬೆಗಳೊಂದಿಗೆ ಆಟವಾಡುವುದನ್ನು  ಲಾಲ್​ಬಾಗ್​ನ ಸಸ್ಯ ಸಂಗ್ರಹವನ್ನು ರಕ್ಷಿಸಲು ಉದ್ಯಾನದಲ್ಲಿರುವ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ರೀಲ್‌ಗಳ ಚಿತ್ರೀಕರಣ, ಮಾಡೆಲಿಂಗ್, ಮದುವೆಗಳು, ಬೇಬಿ ಶವರ್‌ಗಳು ಮತ್ತು ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮುಖ್ಯವಾಗಿ ಸಂದರ್ಭಗಳಲ್ಲಿ ಡ್ರೋನ್ ಛಾಯಾಗ್ರಹಣಕ್ಕೆ ಅವಕಾಶವಿರುವುದಿಲ್ಲ.

ಉದ್ಯಾನದೊಳಗೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಸಂದರ್ಶಕರು ಧ್ವನಿ ವ್ಯವಸ್ಥೆಗಳು ಅಥವಾ ಸಂಗೀತ ವಾದ್ಯಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಆವರಣದೊಳಗೆ ಮದ್ಯಪಾನ ಅಥವಾ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಲಾಲ್​ಬಾಗ್​ನಲ್ಲಿ ಯಾವುದಕ್ಕೆಲ್ಲಾ ಅನುಮತಿ ನೀಡಲಾಗಿದೆ?

ಲಾಲ್​ಬಾಗ್​ನಲ್ಲಿ ಬೆಳಿಗ್ಗೆ 5.30 ರಿಂದ 9 ರವರೆಗೆ ಮತ್ತು ಸಂಜೆ 4.30 ರಿಂದ 7 ರವರೆಗೆ ಮಾತ್ರ ವಾಕಿಂಗ್ ಮತ್ತು ಜಾಗಿಂಗ್‌ಗೆ ಅವಕಾಶವಿರುತ್ತದೆ. ತೋಟಗಾರಿಕೆ ಇಲಾಖೆಯಿಂದ ಪೂರ್ವಾನುಮತಿಯೊಂದಿಗೆ ಹೂವಿನ ಪ್ರದರ್ಶನಗಳು, ಸರ್ಕಾರಿ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇಲಾಖೆಯ ಅನುಮತಿಯೊಂದಿಗೆ ಮತ್ತು ಕೆಲ ಷರತ್ತುಗಳೊಂದಿಗೆ ಹವ್ಯಾಸಿ ಪ್ರಕೃತಿ ಛಾಯಾಗ್ರಹಣ ಮತ್ತು ಆರೋಗ್ಯ ಶಿಬಿರಗಳಿಗೆ ಅನುಮತಿ ನೀಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:36 am, Sat, 22 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ