ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನಿಗೆ ದಂಡ! ಕಾರಣವೇನು? ಇಲ್ಲಿದೆ ವಿವರ

| Updated By: ವಿವೇಕ ಬಿರಾದಾರ

Updated on: Mar 04, 2025 | 1:35 PM

ನಿಯಮ ಉಲ್ಲಂಘಿಸಿ ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಹಾಗಿದ್ದರೆ ವಿದೇಶಿಗರಿಗೆ ಮನೆ ಬಾಡಿಗೆಗೆ ನೀಡುವಾಗ ಪಾಲಿಸಬೇಕಾದ ನಿಯಮಗಳೇನು? ಇಲ್ಲಿ ವಿದ್ಯಾಭ್ಯಾಸಕ್ಕೆ ಅಥವಾ ದೀರ್ಘಾವಧಿ ವಾಸಿಸಲು ಬಂದ ವಿದೇಶಿಗರಿಗೆ ಬಾಡಿಗೆ ಮನೆ ಅಥವಾ ಅಪಾರ್ಟ್​ಮೆಂಟ್​ ನೀಡುವ ಮುನ್ನ ಮಾಲೀಕರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳೇನು? ಇಲ್ಲಿದೆ ವಿವರ

ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನಿಗೆ ದಂಡ! ಕಾರಣವೇನು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 04: ನಿಯಮ ಮೀರಿ ವಿದೇಶಿಗರಿಗೆ (Foreigners) ಮನೆ ಬಾಡಿಗೆ ನೀಡಿದ್ದ ಮಾಲೀಕನಿಗೆ ನ್ಯಾಯಾಲಯ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ನಿಯಮ ಮೀರಿ ವಿದೇಶಗರಿಗೆ ಮನೆ ಬಾಡಿಗೆ ನೀಡಿದ್ದ ಮನೆ ಮಾಲೀಕನ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ (Police) ದಾಖಲಾಗಿತ್ತು. ಮನೆ ಮಾಲೀಕನ ವಿರುದ್ಧ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಐದು ಸಾವಿರ ದಂಡ ವಿಧಿಸಿದೆ. ಇದುವರೆಗೂ ನಗರದಲ್ಲಿ ನಿಯಮ ಮೀರಿರುವ ಮಾಲೀಕರ ವಿರುದ್ಧ 70 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆಯೂ ಬೆಂಗಳೂರು ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿದೇಶಿಗರಿಗೆ ಬಾಡಿಗೆ ನೀಡಲು ಇರುವ ನಿಯಮಗಳೇನು?

  • ಪ್ರವಾಸಿ ವೀಸಾದಡಿ ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅಪಾರ್ಟ್​ಮೆಂಟ್​ಗಳಲ್ಲಿ ಬಾಡಿಗೆ ನೀಡುವಂತಿಲ್ಲ. ಪ್ರವಾಸಿ ಹೊಟೇಲ್​ಗಳಲ್ಲಿ ಅವರು ವಾಸವಿದ್ದು, ಆ ಮಾಹಿತಿಯನ್ನು ಹೊಟೇಲ್​ನಿಂದಲೇ ಪೊಲೀಸರಿಗೆ ನೀಡಲಾಗುತ್ತದೆ.
  • ವಿದ್ಯಾಭಾಸ ಅಥವಾ ದೀರ್ಘ ಅವಧಿಗೆ ಉಳಿಯಲು ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅಪಾರ್ಟ್​ಮೆಂಟ್​ಗಳಲ್ಲಿ ಬಾಡಿಗೆಗೆ ಇರಲು ವೀಸಾದ ಅವಧಿಯ ಆಧಾರದಲ್ಲಿ ಅವಕಾ ಕಲ್ಪಿಸಬಹುದು. ಆದರೆ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.

ಪೊಲೀಸರಿಗೆ ಮಾಹಿತಿ ನೀಡುವುದು ಹೇಗೆ?

  • ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವಾಗ ಮನೆ ಮಾಲೀಕರು ಕಡ್ಡಾಯವಾಗಿ ಆನ್​ಲೈನ್​ನಲ್ಲಿ ‘ಸಿ ಫಾರ್ಮ್’ ಭರ್ತಿ ಮಾಡಿ ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು.
  • ನೀವು ಸಲ್ಲಿಸಿದ ಅರ್ಜಿಯನ್ನು FRRO ಅಧಿಕಾರಿಗಳು ಅನುಮೋದಿಸಿದ ಮೇಲೆ ವಿದೇಶಗರಿಗೆ ಬಾಡಿಗೆ ನೀಡಬೇಕು.

ಇದನ್ನೂ ಓದಿ: ಸಂಸತ್​ನಲ್ಲಿ ಹೊಸ ವಲಸೆ ಮಸೂದೆ ಜಾರಿ ಸಾಧ್ಯತೆ; ವಿದೇಶಿಗರಿಗೆ ಇರುವ ಷರತ್ತುಗಳೇನು?

ಈ ನಿಯಮ ಏಕೆ?

  • ವಿದೇಶಿ ಪ್ರಜೆಗಳು ಮಾದಕವಸ್ತು ಮಾರಾಟ, ಸಾಗಾಟಣೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಾಡಿಗೆಗೆ ನೀಡುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ಸ್ಥಳೀಯ ಪೊಲೀಸ್​ ಠಾಣೆಗೆ ನೀಡಿದರೇ, ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸಹಾಯವಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
ಬೆಂಗಳೂರು: 17 ಲಕ್ಷ ಮೌಲ್ಯದ ಡ್ರಗ್ಸ್​ ವಶ: ಇಬ್ಬರು ವಿದೇಶಿಗರ ಬಂಧನ
ಉಡುಪಿ: ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆ
ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ 2 ಕೋಟಿ ರೂ ವಿದೇಶಿ ಹಣ ಜಪ್ತಿ: ಮೂವರ ಬಂಧನ
ವಿದೇಶಿ ಕಸ ಗುಡಿಸುವ ಯಂತ್ರ ಬಾಡಿಗೆ ಪಡೆಯಲು ಮುಂದಾದ ಬಿಬಿಎಂಪಿ!

 

Published On - 1:34 pm, Tue, 4 March 25