AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಚ್ಛ ಬೆಂಗಳೂರಿಗಾಗಿ ವಿದೇಶಿ ಕಸ ಗುಡಿಸುವ ಯಂತ್ರ ಬಾಡಿಗೆ ಪಡೆಯಲು ಮುಂದಾದ ಬಿಬಿಎಂಪಿ: ಕೋಟ್ಯಂತರ ಖರ್ಚು

ಬೆಂಗಳೂರನ್ನು ಸ್ವಚ್ಛ ನಗರ ಮಾಡುತ್ತೇವೆ ಎಂದು ಹೊರಟಿರುವ ಬಿಬಿಎಂಪಿ ಇದೀಗ ಹೊಸ ಯೋಜನೆ ಮೂಲಕ ರಾಜಧಾನಿಯ ರಸ್ತೆಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಬೆಂಗಳೂರಿನ ರಸ್ತೆಗಳನ್ನ ಸ್ವಚ್ಛಗೊಳಿಸಲು ವಿದೇಶಿ ಯಂತ್ರಗಳ ಮೊರೆಹೋಗಿರುವ ಪಾಲಿಕೆ ಬರೋಬ್ಬರಿ 764 ಕೋಟಿ ರೂಪಾಯಿ ವೆಚ್ಚದಲ್ಲಿ ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಸಿದ್ಧವಾಗಿದೆ. ಇತ್ತ ಪಾಲಿಕೆ ನಡೆಗೆ ಇದೀಗ ಜನರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ಸ್ವಚ್ಛ ಬೆಂಗಳೂರಿಗಾಗಿ ವಿದೇಶಿ ಕಸ ಗುಡಿಸುವ ಯಂತ್ರ ಬಾಡಿಗೆ ಪಡೆಯಲು ಮುಂದಾದ ಬಿಬಿಎಂಪಿ: ಕೋಟ್ಯಂತರ ಖರ್ಚು
ಬಿಬಿಎಂಪಿ ಸ್ವೀಪಿಂಗ್ ಮಷಿನ್​ಗಳು (ಸಂಗ್ರಹ ಚಿತ್ರ)
ಶಾಂತಮೂರ್ತಿ
| Edited By: |

Updated on: Feb 06, 2025 | 9:59 AM

Share

ಬೆಂಗಳೂರು, ಫೆಬ್ರವರಿ 6: ರಾಜಧಾನಿ ಬೆಂಗಳೂರಿನ ರಸ್ತೆಗಳನ್ನು ಸ್ವಚ್ಛಗೊಳಿಸಲು ಹೊಸದೊಂದು ಯೋಜನೆಗೆ ಮುಂದಾಗಿರುವ ಬಿಬಿಎಂಪಿ, ‘ಕ್ಲೀನ್ ಸಿಟಿ’ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚುಮಾಡಿ ಸ್ವೀಪಿಂಗ್ ಮಷಿನ್​ಗಳನ್ನು (ಕಸಗುಡಿಸುವ ಯಂತ್ರಗಳು) ಬಳಸಿಕೊಳ್ಳಲು ಮುಂದಾಗಿದೆ. ಮುಂದಿನ ಏಳು ವರ್ಷಗಳಲ್ಲಿ ರಾಜಧಾನಿಯನ್ನು ಧೂಳುಮುಕ್ತ ನಗರ ಮಾಡುವ ಉದ್ದೇಶದೊಂದಿಗೆ 764 ಕೋಟಿ ರೂಪಾಯಿ ವೆಚ್ಚದಲ್ಲಿ 20 ಸ್ವೀಪಿಂಗ್ ಮಷಿನ್​ಗಳನ್ನು ಆಮದು ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

2024-25ರ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಸ ಗುಡಿಸುವ ಯಂತ್ರಗಳಿಗಾಗಿ 30 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಮುಂದಿನ ವರ್ಷಗಳಲ್ಲಿ ಈ ಹಣದ ಪ್ರಮಾಣ 30 ರಿಂದ 60 ಕೋಟಿ ರೂಪಾಯಿಗಳಷ್ಟು ಅಧಿಕವಾಗಲಿದೆ ಅಂತಾ ಅಂದಾಜಿಸಲಾಗಿದೆ.

ವಿದೇಶಗಳಿಂದ ಸ್ವೀಪಿಂಗ್ ಮಷಿನ್ ಬಾಡಿಗೆಗೆ ಪಡೆಯಲು ಚಿಂತನೆ

ಸದ್ಯ 2017-18ನೇ ಸಾಲಿನಲ್ಲಿ 26 ಯಂತ್ರಗಳನ್ನು ಖರೀದಿಸಿದ್ದ ಪಾಲಿಕೆ, ಇದೀಗ ವಿದೇಶಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಹೊರಟಿದೆ. ಇದಕ್ಕೆ ನಗರವಾಸಿಗಳ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ಇರುವ ಕಸ ಗುಡಿಸುವ ಯಂತ್ರಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಇದು ಹಣ ದೋಚುವ ತಂತ್ರವಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಿರುವ ಕಿಲಾಡಿಗಳು: ತರಕಾರಿ ಬಿಲ್ ನೀಡಲು ಬಳಕೆ!

ಸದ್ಯ ರಸ್ತೆಗಳ ಕಸ ಗುಡಿಸಲು ಬಿಬಿಎಂಪಿಯಲ್ಲಿ 17,000 ಪೌರಕಾರ್ಮಿಕರಿದ್ದಾರೆ. ಆದರೆ, ಇದೀಗ ವಿದೇಶಿ ಯಂತ್ರಗಳನ್ನು ಬಾಡಿಗೆಗೆ ಪಡೆಯುವುದರಿಂದ ನಗರವು ಎಷ್ಟರ ಮಟ್ಟಿಗೆ ಸ್ವಚ್ಛವಾಗಿರಲಿದೆ ಎಂಬುದನ್ನು ಪಾಲಿಕೆ ಪ್ರಯೋಗ ನಡೆಸಬೇಕಿದೆ. ಆದರೆ ಫಾರಿನ್ ಮಷಿನ್​ಗಳು ರಾಜಧಾನಿಯ ರಸ್ತೆಗಳಿಗೆ ಹೊಂದುಕೊಳ್ಳುತ್ತದೆಯೋ ಇಲ್ಲವೇ ಎಂಬುದನ್ನು ಪರಾಮರ್ಶೆ ಮಾಡದೇ ಕೋಟಿ ಕೋಟಿ ಹಣ ಸುರಿಯಲು ಪಾಲಿಕೆ ಸಜ್ಜಾಗಿರುವುದಂತೂ ನಿಜ. ಬಿಬಿಎಂಪಿಯ ಈ ಹೊಸ ಪ್ಲಾನ್ ರಾಜಧಾನಿಯನ್ನು ಎಷ್ಟರಮಟ್ಟಿಗೆ ಸ್ವಚ್ಛ ನಗರವಾಗಿ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?