AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಏರ್​ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ, ಪಾರ್ಕಿಂಗ್, ಏರ್​ಪೋರ್ಟ್​ಗೆ ಬದಲಿ ಮಾರ್ಗ ವಿವರ ಇಲ್ಲಿದೆ

Bangalore Air Show Traffic Advisory: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14ರವರೆಗೆ ಏರೋ ಇಂಡಿಯಾ 2025 ವೈಮನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನ ಹಲವೆಡೆ ಸಂಚಾರ ನಿಷೇಧ, ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಪಾರ್ಕಿಂಗ್​ಗೆ ಎಲ್ಲೆಲ್ಲಿ ಜಾಗ ಹಾಗೂ ಪರ್ಯಾಯ ರಸ್ತೆಗಳು ಯಾವುವು ಎಂಬುದನ್ನು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ವಿವರಗಳು ಇಲ್ಲಿವೆ.

ಬೆಂಗಳೂರು ಏರ್​ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ, ಪಾರ್ಕಿಂಗ್, ಏರ್​ಪೋರ್ಟ್​ಗೆ ಬದಲಿ ಮಾರ್ಗ ವಿವರ ಇಲ್ಲಿದೆ
ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿರುವ ಮಾಹಿತಿಯ ಚಿತ್ರ
Ganapathi Sharma
| Updated By: Digi Tech Desk|

Updated on:Feb 10, 2025 | 9:24 AM

Share

ಬೆ೦ಗಳೂರು, ಫೆಬ್ರವರಿ 6: ಬೆ೦ಗಳೂರು ನಗರ ಯಲಹಂಕ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14 ರ ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಫೆಬ್ರವರಿ 10 ರಂದು ಬೆಳಿಗ್ಗೆ ಕಾರ್ಯಕ್ರಮದ ಉದ್ಭಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸ್ಥಳವು, ಯಲಹಂಕ ವಾಯುಸೇನಾ ನೆಲೆಯು ಬೆ೦ಗಳೂರು-ಬಳ್ಳಾರಿ ರಾಷ್ಟೀಯ ಹೆದ್ಬಾರಿ-44 (ಅಂತರಾಷ್ಟ್ರೀಯ ಏರ್‌ಪೊರ್ಟ್‌ ರಸ್ತೆ) ಗೆ ಹೊಂದಿಕೊಂಡಿದೆ. ಹೀಗಾಗಿ ರಸ್ತೆಯಲ್ಲಿ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಸುಗಮ ಸಂಚಾರದ ದೃಷ್ಟಿಯಿ೦ದ 10 ರಂದು ಬೆಳಗಿನ ಜಾವ 5 ಗಂಟೆಯಿಂದ 14 ರ ರಾತ್ರಿ 10 ರ ರವರೆಗೆ ಪರ್ಯಾರ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಎಲ್ಲೆಲ್ಲಿ ವನ್ ವೇ ಸಂಚಾರ?

  • ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ).
  • ಬಾಗಲೂರು ಮುಖ್ಯರಸ್ತೆ (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)

ಏರೋ ಇಂಡಿಯಾಗೆ ಬರುವವರಿಗೆ ಎಲ್ಲಿ ಪಾರ್ಕಿಂಗ್‌?

ಜಿಕೆವಿಕೆ ಕ್ಯಾಂಪಸ್​​ನಲ್ಲಿ ಉಚಿತ ಪಾರ್ಕಿಂಗ್‌: ಜಿಕೆವಿಕೆ ಪಾರ್ಕಿಂಗ್‌ ಸ್ಥಳದಿಂದ ಅಡ್ವಾ ಪಾರ್ಕಿಂಗ್‌ ಹಾಗೂ ಡೊಮೆಸ್ಟಿಕ್‌ ಪಾರ್ಕಿಂಗ್‌ ಸ್ಥಳಕ್ಕೆ ತೆರಳಲು ಹಾಗೂ ವಾಪಸ್‌ ಜಿಕೆವಿಕೆ ಪಾರ್ಕಿಂಗ್‌ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಿದೆ ಎಂದು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಇದನ್ನೂ ಓದಿ: ಏರ್ ಶೋಗೆ ಬರುವವರಿಗೆ ಬಿಎಂಟಿಸಿ ಉಚಿತ ಬಸ್ ವ್ಯವಸ್ಥೆ, ಈ ಜಾಗದಲ್ಲಿ ಪಾರ್ಕಿಂಗ್

ಪೇಯ್ಡ್ ಪಾರ್ಕಿಂಗ್ ಎಲ್ಲಿ?

  • ಏರ್ ಡಿಸ್​ಪ್ಲೇ ಪ್ರದೇಶಕ್ಕೆ ಗೇಟ್‌ ನಂ 8 ಹಾಗೂ 9 ರ ಮುಖಾಂತರ ಪ್ರವೇಶಿಸಬಹುದಾಗಿದೆ.
  • ಡೊಮೆಸ್ಟಿಕ್‌ ಪಾರ್ಕಿಂಗ್‌: ಗೇಟ್‌ ನಂ 5ರ ಮುಖಾಂತರ ಪ್ರವೇಶಿಸಬಹುದಾಗಿದೆ.

ಸಂಚಾರ ಸಲಹೆ

  • ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌.ಪುರ – ನಾಗವಾರ ಜಂಕ್ಷನ್‌ – ಬಲತಿರುವು – ಥಣಿಸಂದ್ರ – ನಾರಾಯಣಪುರ ಕ್ರಾಸ್‌ – ಎಡ ತಿರುವು – ಟೆಲಿಕಾ೦ ಲೇಔಟ್‌ – ಜಕ್ಕೂರು ಕ್ರಾಸ್‌ – ಬಲ ತಿರುವು – ಯಲಹಂಕ ಬೈಪಾಸ್‌ – ಯಲಹಂಕ ಕಾಫಿ ಡೇ – ಪಾಲನಹಳ್ಳಿ ಗೇಟ್‌ ಸರ್ವಿಸ್‌ ರಸ್ತೆ (ಗ್ರೀಲ್‌ ಓಪನ್‌) ಫೋರ್ಡ್‌ ಷೋ ರೂಂ – ಎಡ ತಿರುವು – ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ ಯಿಂದ ಬರಬೇಕು ಎಂದು ಟ್ರಾಫಿಕ್ ಪೊಲೀಸ್ ಪ್ರಕಟಣೆ ತಿಳಿಸಿದೆ.
  • ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌. ಪುರ೦ – ಹೆಣ್ಣೂರು ಕ್ರಾಸ್‌ – ಕೊತ್ತನೂರು – ಗುಬ್ಬಿ ಕ್ರಾಸ್‌ – ಕಣ್ಣೂರು – ಬಾಗಲೂರು. – ಬಾಗಲೂರು ಲೇಔಟ್‌ – ರಜಾಕ್‌ ಪಾಳ್ಯ – ವಿದ್ಯಾನಗರ ಕ್ರಾಸ್‌ -ಹುಣಸಮಾರನಹಳ್ಳಿ ಮೂಲಕ ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಗೊರಗುಂಟಿಪಾಳ್ಯ – ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ – ಮದರ್‌ ಡೈರಿ ಜಂಕ್ಷನ್‌ – ಉನ್ನಿ ಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ ನಾಗೇನಹಳ್ಳಿ ಗೇಟ್‌ – ಬಲ ತಿರುವು – ಹಾರೋಹಳ್ಳಿ – ಗಂಟಗಾನಹಳ್ಳಿ ಸರ್ಕಲ್‌ ಬಲ ತಿರುವು ಪಡೆದು ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಗೊರಗುಂಟೆಪಾಳ್ಯ ದ. ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ -ಮದರ್‌ ಡೈರಿ ಜಂಕ್ಷನ್‌ – ಉನ್ನಿಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ – ಬಲ ತಿರುವು -ಅದ್ದಿಗಾನಹಳ್ಳಿ -ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್‌ – ವಿದ್ಯಾನಗರ ಕ್ರಾಸ್‌ — ಯು ತಿರುವು – ಹುಣಸಮಾರನಹಳ್ಳಿ ಮೂಲಕ ಬರಬೇಕು ಎಂದು ಪ್ರಕಟಣೆ ತಿಳಿಸಿದೆ.
  • 4 ಬೆಂಗಳೂರು ದಕ್ಷಿಣ ದಿಕ್ಕಿನಿಂದ ಏರ್ ಶೋ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್‌-ಗೊರಗುಂಟಿಪಾಳ್ಯ-ಬಿ.ಇ.ಎಲ್‌ ವೃತ್ತ- ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌-ಮದರ್‌ ಡೈರಿ ಜಂಕ್ಷನ್‌ -ಉನ್ನಿ ಕೃಷ್ಣನ್‌ ಜ೦ಕ್ಷನ್‌ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ -ನಾಗೇನಹಳ್ಳಿ ಗೇಟ್‌ -ಬಲ ತಿರುವು -ಹಾರೋಹಳ್ಳಿ ಗ೦ಟಗಾನಹಳ್ಳಿ ಸರ್ಕಲ್‌ ಮೂಲಕ ಬರಬೇಕು ಎಂದು ತಿಳಿಸಲಾಗಿದೆ.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್‌- ಗೊರಗುಂಟೆಪಾಳ್ಯ -ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌- ಮದರ್‌ ಡೈರಿ-ಉನ್ನಿ ಕೃಷ್ಣನ್‌ ಜ೦ಕ್ಟನ್‌ – ಎಡ ತಿರುವು-ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ- ಬಲ ತಿರುವು- ಅದ್ದಿಗಾನಹಳ್ಳಿ -ಎಂ.ವಿ.ಐ.ಟಿ ಕ್ರಾಸ್‌- ವಿದ್ಯಾನಗರ ಕ್ರಾಸ್‌-ಯು ತಿರುವು ಪಡೆದು – ಹುಣಸಮಾರನಹಳ್ಳಿ ಮೂಲಕ ಬರಬೇಕು.

ವಿಮಾನ ನಿಲ್ದಾಣಕ್ಕೆ ಹೋಗಲು ಪರ್ಯಾಯ ಮಾರ್ಗ

  • ಬೆಂಗಳೂರು ಪೂರ್ವ ದಿಕ್ಕಿನಿಂದ ಹೋಗುವವರು ಕೆ.ಆರ್‌.ಪುರಂ-ಹೆಣ್ಣೂರು ಕ್ರಾಸ್‌ -ಕೊತ್ತನೂರು – ಗುಬ್ಬಿ ಕ್ರಾಸ್‌ – ಕಣ್ಣೂರು – ಬಾಗಲೂರು – ಮೈಲನಹಳ್ಳಿ – ಬೇಗೂರು ನೈರುತ್ಯ ಪ್ರವೇಶದ್ವಾರದ ಮೂಲಕ ತಲುಪಬಹುದು.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಹೋಗುವವರು ಗೊರಗುಂಟೆಪಾಳ್ಯ – ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌ – ಮದರ್‌ ಡೈರಿ – ಉನ್ನಿ ಕೃಷ್ಣನ್‌ ಜಂಕ್ಚನ್‌- ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ – ಅದ್ದಿಗಾನಹಳ್ಳಿ – ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್‌ – ವಿದ್ಯಾನಗರ ಕ್ರಾಸ್‌ ಮೂಲಕ ತಲುಪಬಹುದು.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ತೆರಳುವವರು ಮೈಸೂರು ರಸ್ತೆ- ನಾಯಂಡನಹಳ್ಳಿ- ಚಂದ್ರಾ ಲೇಔಟ್‌ – ಗೊರಗುಂಟೆಪಾಳ್ಯ-ಬಿಇಎಲ್‌ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌- ಮದರ್‌ಡೈರಿ ಜಂಕ್ಷನ್‌ – ಉನ್ನಿಕೃಷ್ಣನ್‌ ಜ೦ಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ – ಅದ್ದಿಗಾನಹಳ್ಳಿ-ಎಂ.ವಿ.ಐ.ಟಿ ಕ್ರಾಸ್‌ ವಿದ್ಯಾನಗರ ಕ್ರಾಸ್‌ ಮೂಲಕ ಏರ್​ಪೋರ್ಟ್ ತಲುಪಬಹುದು.

ಲಾರಿ, ಟ್ರಕ್, ಬಸ್ ಸೇರಿ ಭಾರಿ ವಾಹನ ಸಂಚಾರ ನಿರ್ಬಂಧ ಎಲ್ಲೆಲ್ಲಿ ?

  • ಬೆ೦ಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇಖ್ರಿ ವೃತ್ತದಿಂದ-ಎ೦ಂವಿಐಟಿ ಕ್ರಾಸ್‌ ವರೆಗೆ ಮತ್ತು ಎ೦ಂವಿಐಟಿ ಕ್ರಾಸ್​​ನಿಂದ ಮೇಖ್ರಿ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
  • ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ ವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
  • ನಾಗವಾರ ಜಂಕ್ಷನ್‌ನಿಂದ – ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ ರೇವಾ ಕಾಲೇಜ್‌ ಜಂಕ್ಷನ್‌ವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ.
  • ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿ೦ದ ಬೆ೦ಗಳೂರು ನಗರದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ (ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ)

  • ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್‌ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತ) ವರೆಗೆ.
  • ಬೆ೦ಗಳೂರು-ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ ನಿಂದ-ದೇವನಹಳ್ಳಿ ವರೆಗೆ.
  • ಬಾಗಲೂರು ಕ್ರಾಸ್‌ ಜಂಕ್ಷನ್‌ ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರು ವರೆಗೆ.
  • ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್‌ ಜಂಕ್ಷನ್‌ ವರೆಗೆ.
  • ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್‌ ಜಂಕ್ಷನ್‌ ವರೆಗೆ.
  • ಹೆಣ್ಣೂರು ಕ್ರಾಸ್‌ ನಿಂದ ಬೇಗೂರು ಬ್ಯಾಕ್‌ ಗೇಟ್‌ ವರೆಗೆ.
  • ನಾಗೇನಹಳ್ಳಿ ಗೇಟ್‌ ಜಂಕ್ಷನ್‌ ನಿಂದ ಯಲಹಂಕ ಸರ್ಕಲ್‌ ವರೆಗೆ.
  • ಎ೦ವಿಐಟ ಕ್ರಾಸ್‌ ನಿಂದ ನಾರಾಯಣಪುರ ರೈಲ್ವೇ ಕ್ರಾಸ್‌ ವರೆಗೆ.
  • ಕೋಗಿಲು ಕ್ರಾಸ್‌ ಜಂಕ್ಷನ್‌ ನಿ೦ದ ಕಣ್ಣೂರು ಜಂಕ್ಷನ್‌ ವರೆಗೆ.
  • ಮತ್ತಿಕೆರೆ ಕ್ರಾಸ್‌ ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್‌ ಜಂಕ್ಷನ್‌ ವರೆಗೆ.
  • ಬಾಲಸಹಳ್ಳಿ ಕ್ರಾಸ್‌ ಜಂಕ್ಷನ್‌ ನಿಂದ ಗ೦ಗಮ್ಮ ಸರ್ಕಲ್‌ ಜಂಕ್ಷನ್‌ ವರೆಗೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 6 February 25

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ