
Bangalore Air Show
ಏರೋ ಇಂಡಿಯಾ ಎಂದು ಕರೆಯಲ್ಪಡುವ ಬೆಂಗಳೂರು ಏರ್ ಶೋ ಕರ್ನಾಟಕ ಬೆಂಗಳೂರಿನಲ್ಲಿ ನಡೆಯುವ ದ್ವೈವಾರ್ಷಿಕ ಅಂತರರಾಷ್ಟ್ರೀಯ ಏರೋಸ್ಪೇಸ್ ಮತ್ತು ರಕ್ಷಣಾ ವಸ್ತು ಪ್ರದರ್ಶನವಾಗಿದೆ. ಜತೆಗೆ ಯುದ್ಧ ವಿಮಾನಗಳ ಸಾಹಸ ಪ್ರದರ್ಶನವೂ ಇರುತ್ತದೆ. ಇದು ಏಷ್ಯಾದ ಅತಿದೊಡ್ಡ ಏರ್ ಶೋಗಳಲ್ಲಿ ಒಂದಾಗಿದೆ. ಇದು ವೈಮಾನಿಕ ಕ್ಷೇತ್ರ, ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ತೋರಿಸುತ್ತದೆ. ವಿಮಾನಯಾನ ಕ್ಷೇತ್ರದ ಅಭಿವೃದ್ಧಿಯ ಮಾಹಿತಿ, ವೈಮಾನಿಕ ಪ್ರದರ್ಶನಗಳು, ರಕ್ಷಣಾ ಪರಿಕರಗಳ ವಸ್ತು ಪ್ರದರ್ಶನ ಮತ್ತು ಸಮ್ಮೇಳನ, ವಿಚಾರ ಸಂಕಿರಣಗಳನ್ನು ಏರೋ ಇಂಡಿಯಾ ಒಳಗೊಂಡಿದೆ. ಏರೋ ಇಂಡಿಯಾಗೆ ವಿಶ್ವದ ವಿವಿಧ ಕಡೆಗಳಿಂದ ಉದ್ಯಮಿಗಳು, ರಕ್ಷಣಾ ತಜ್ಞರು, ಸಚಿವರು, ಸರ್ಕಾರದ ಪ್ರತಿನಿಧಿಗಳು ಆಗಮಿಸುತ್ತಾರೆ. ಅನೇಕ ಒಪ್ಪಂದಗಳೂ ಇಲ್ಲಿ ಏರ್ಪಡುತ್ತವೆ. ಇದನ್ನು ಭಾರತೀಯ ರಕ್ಷಣಾ ಸಚಿವಾಲಯ ಆಯೋಜಿಸುತ್ತಾ ಬರುತ್ತಿದೆ ಮತ್ತು ರಕ್ಷಣಾ ಉದ್ಯಮ ವೃತ್ತಿಪರರಿಗೆ ನೆಟ್‌ವರ್ಕ್ ವಿಸ್ತರಿಸಲು ಮತ್ತು ಉದ್ಯಮ ವಿಸ್ತರಣೆಗೆ ಒಂದು ವೇದಿಕೆಯನ್ನು ಒದಗಿಸುತ್ತದೆ
ಲೋಹದ ಹಕ್ಕಿಗಳನ್ನ ಕಣ್ತುಂಬಿಕೊಂಡ ಸಿಟಿಮಂದಿ: 4ನೇ ದಿನದ ಏರ್ ಶೋನಲ್ಲೂ ತಟ್ಟಿದ ಟ್ರಾಫಿಕ್ ಬಿಸಿ
ಏರೋ ಇಂಡಿಯಾ ಏರ್ ಶೋನ ನಾಲ್ಕನೇ ದಿನ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಇದರಿಂದಾಗಿ ಯಲಹಂಕದಲ್ಲಿ ಭಾರಿ ಜನಸಂದಣಿ ಮತ್ತು ದಟ್ಟ ಟ್ರಾಫಿಕ್ ಸಮಸ್ಯೆ ಉಂಟಾಯಿತು. ವಿವಿಧ ರೀತಿಯ ಯುದ್ಧ ವಿಮಾನಗಳು ಮತ್ತು ಪ್ರದರ್ಶನಗಳು ಜನರನ್ನು ಆಕರ್ಷಿತರಾದರು. ಇನ್ನು ಸಂಸದ ತೇಜಸ್ವಿ ಸೂರ್ಯ ಟ್ರೈನಿ ಏರ್ ಕ್ರಾಫ್ಟ್ನಲ್ಲಿ ಹಾರಾಟ ಮಾಡಿದ್ದಾರೆ.
- Shanthamurthy
- Updated on: Feb 13, 2025
- 9:29 pm
ಬೆಂಗಳೂರಿನ ಆಗಸದಲ್ಲಿ ಮಿಂಚುತ್ತಿರುವ ದೇಶ ವಿದೇಶಗಳ ವೈಮಾನಿಕ ಶಕ್ತಿ; ಯಲಹಂಕ ಏರೋಶೋನ ಝಲಕ್
Bangalore Aero Show 2025: ರಫೇಲ್, ಸುಖೋಯ್, ಎಫ್-35, ಕೆಸಿ 135, ಎಲ್ಯುಎಚ್, ಐಜೆಟಿ ಇತ್ಯಾದಿ ಅತ್ಯಾಧುನಿಕ ಫೈಟರ್ ಜೆಟ್, ಟ್ರೈನರ್ ಜೆಟ್, ಫೈಟರ್ ಹೆಲಿಕಾಪ್ಟರ್ಗಳು ಬೆಂಗಳೂರು ಏರೋ ಶೋದಲ್ಲಿ ಪ್ರದರ್ಶನ ನಡೆಸಿವೆ. 78 ದೇಶಗಳು 15ನೇ ಬೆಂಗಳೂರು ಏರೋ ಶೋನದಲ್ಲಿ ಪಾಲ್ಗೊಂಡಿದ್ದು, ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೋಗೆ ಚಾಲನೆ ಮಾಡಿದ್ದರು. ಫೆಬ್ರುವರಿ 14ರವರೆಗೂ ಏರೋ ಶೋ ನಡೆಯಲಿದೆ.
- Vijaya Sarathy SN
- Updated on: Feb 11, 2025
- 4:24 pm
ಬೆಂಗಳೂರು ಏರ್ ಶೋ: ಜರ್ಮನ್ ಪೈಲಟ್ಗಳಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ, ಉದ್ಘಾಟನಾ ಸಮಾರಂಭ ಮಿಸ್
ಬೆಂಗಳೂರಿನ ಏರೋ ಇಂಡಿಯಾ ಏರ್ ಶೋಗೆ ಆಗಮಿಸಿದ ಜರ್ಮನಿಯ 15 ಮಂದಿ ಪೈಲಟ್‌ಗಳು ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಉದ್ಘಾಟನಾ ಸಮಾರಂಭದಿಂದ ವಂಚಿತರಾಗಿದ್ದ ಬಗ್ಗೆ ವರದಿಯಾಗಿದೆ. ಉಳಿದುಕೊಂಡಿದ್ದ ಹೋಟೆಲ್‌ನಿಂದ ಏರ್ ಶೋ ಸ್ಥಳಕ್ಕೆ ತೆರಳುವಾಗ ಅವರು ಎರಡು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದರು.
- Ganapathi Sharma
- Updated on: Feb 11, 2025
- 12:30 pm
ಏರ್ಶೋ: ಏರ್ಪೋರ್ಟ್ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಏರೋ ಇಂಡಿಯಾ 2025ರ ಏರ್ ಶೋ ಕಾರಣ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಕಿಲೋಮೀಟರ್ನಷ್ಟು ಉದ್ದ ಸಂಚಾರ ದಟ್ಟಣೆ ಉಂಟಾಗಿದೆ. ಬಾಗಲೂರು ಕ್ರಾಸ್ ಸ್ಕೈ ವಾಕ್ ಬಳಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಕೂಡ ಪರದಾಡುವಂತಾಗಿದೆ. ಆದರೂ ಟ್ರಾಫಿಕ್ ಪೊಲೀಸರು ನೆರವಿಗೆ ಧಾವಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
- Naveen Kumar
- Updated on: Feb 11, 2025
- 11:36 am
ಏರ್ ಶೋ: ಪೊಲೀಸರಿಗಿನ್ನು ಇಸ್ಕಾನ್ ಆಹಾರ, ಜಿರಳೆ ಹುಳ ಪತ್ತೆ ಬೆನ್ನಲ್ಲೇ ಖಾಸಗಿ ಕಂಪನಿ ಗುತ್ತಿಗೆ ರದ್ದು
ಏರ್ ಶೋ ರಿಹರ್ಸಲ್ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಆನಂತರ, ಇದೀಗ ಆಹಾರದಲ್ಲಿ ಹುಳ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಖಾಸಗಿ ಸಂಸ್ಥೆಯ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿದ್ದು, ಭದ್ರತೆಗೆ ನಿಯೋಜನೆಯಾಗಿರುವ ಪೊಲೀಸರಿಗೆ ಆಹಾರ ಒದಗಿಸುವ ಹೊಣೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸಿದೆ.
- Ganapathi Sharma
- Updated on: Feb 11, 2025
- 8:15 am
ಏರೋ ಶೋ-2025: ಕಡಿಮೆ ತೂಕ ಮತ್ತು ಅತಿಹೆಚ್ಚು ಎತ್ತರದಲ್ಲಿ ಹಾರುವ ಪ್ರಚಂಡ್ ಹೆಲಿಕಾಪ್ಟರ್ಗೆ ವಿದೇಶಗಳಿಂದ ಪ್ರಚಂಡ ಬೇಡಿಕೆ
ಏರೋ ಶೋ-2025: ಪ್ರಚಂಡ್ ಹೆಲಿಕಾಪ್ಟರ್ಗಳಿಗಾಗಿ ಬೇರೆ ದೇಶಗಳಿಂದ ಅಪಾರ ಬೇಡಿಕೆ ಬಂದಿದೆ, ಇಷ್ಟು ಕಡಿಮೆ ತೂಕ ಮತ್ತು ಅತಿಹೆಚ್ಚು ಎತ್ತರದಲ್ಲಿ ಹಾರುವ ಹೆಲಿಕಾಪ್ಟರ್ ಬೇರೆ ಯಾವ ದೇಶದಲ್ಲೂ ಇಲ್ಲ ಎಂದು ರಕ್ಷಣಾ ತಜ್ಞ ಹೇಳುತ್ತಾರೆ. ಲಿಮಿಟೆಡ್ ಸಿರೀಜ್ ಪ್ರೊಡಕ್ಷನ್ ಅಂತ ಕೇವಲ 15 ಚಾಪರ್ ಗಳನ್ನು ಮಾತ್ರ ತಯಾರು ಮಾಡಿದ್ದು ಅದರಲ್ಲಿ ಮತ್ತಷ್ಟು ಸುಧಾರಣೆಗಳನ್ನು ರಕ್ಷಣಾ ಇಲಾಖೆ ಸೂಚಿಸಿದ ಬಳಿಕ ಮೊದಲ ಹಂತದಲ್ಲಿ 156 ಪ್ರಚಂಡ್ ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುವುದಂತೆ.
- Arun Belly
- Updated on: Feb 10, 2025
- 8:34 pm
ಆಗಸದಲ್ಲಿ ಚಿತ್ತಾರ: ಏರ್ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಅದ್ಭುತ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಸೂರ್ಯಕಿರಣ್, ಸಾರಂಗ್ ಮತ್ತು ಸುಖೋಯ್ ನಂತಹ ವಿಮಾನಗಳ ಪ್ರದರ್ಶನಗಳು ಜನರನ್ನು ಮಂತ್ರಮುಗ್ಧಗೊಳಿಸಿವೆ. ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್ ಕೂಡ ಭಾಗವಹಿಸಿದೆ. ಸಾವಿರಾರು ಜನರು ಈ ಏರ್ ಶೋ ವೀಕ್ಷಿಸುತ್ತಿದ್ದಾರೆ. ಮೊದಲ ದಿನದ ಪ್ರದರ್ಶನಗಳು ಯಶಸ್ವಿಯಾಗಿ ಮುಗಿದಿದೆ.
- Web contact
- Updated on: Feb 10, 2025
- 3:38 pm
ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ಬೆಂಗಳೂರಿನ ಯಲಹಂಕದ ಏರೋ ಇಂಡಿಯಾ 2025ರಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರಿಗೆ ನೀಡಲಾದ ಊಟದಲ್ಲಿ ಹುಳುಗಳು ಪತ್ತೆಯಾಗಿದೆ. ಇದು ಎರಡನೇ ಭಾರಿ ಈ ರೀತಿಯ ಘಟನೆ ನಡೆದಿದ್ದು, ನಿನ್ನೆ ಜಿರಳೆ ಪತ್ತೆಯಾಗಿತ್ತು. ಪೊಲೀಸ್ ಆಯುಕ್ತರು ಗುಣಮಟ್ಟದ ಆಹಾರ ಒದಗಿಸುವಂತೆ ಸೂಚಿಸಿದ್ದರೂ, ಈ ಘಟನೆ ನಡೆದಿದೆ.
- Prajwal Kumar NY
- Updated on: Feb 10, 2025
- 3:00 pm
ಬೆಂಗಳೂರು ಏರ್ ಶೋ: ಕಾರ್ಯಕ್ರಮಗಳ ವಿವರ, ಆನ್ಲೈನ್ ಪಾಸ್ ಬುಕಿಂಗ್ ಹೇಗೆ, ದರ ಎಷ್ಟು? ಮಾಹಿತಿ ಇಲ್ಲಿದೆ
ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದೆ. ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ವಿವಿಧ ರೀತಿಯ ಪಾಸ್‌ಗಳು ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ? ಪಾರ್ಕಿಂಗ್ ಮತ್ತು ಸಾರಿಗೆ ವ್ಯವಸ್ಥೆಗಳು ಹೇಗೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.
- Ganapathi Sharma
- Updated on: Feb 10, 2025
- 1:49 pm
ಬೆಂಗಳೂರು ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2025 ಇದರಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡದ ಪೈಟಲ್ಗಳು ಆಕರ್ಷಕ ಏರ್ ಶೋ ನಡೆಸಿದರು. ಸೂರ್ಯ ಕಿರಣ್ ಟೀಮ್ ಪೈಲಟ್ಗಳ ಸಾಹಸ, ಯುದ್ಧ ವಿಮಾನಗಳು ಆಗಸದಲ್ಲಿ ಮೊಳಗಿಸಿದ ಘರ್ಜನೆ, ವರ್ಣಮಯ ಚಿತ್ತಾರದ ವಿಡಿಯೋ ಇಲ್ಲಿದೆ ನೋಡಿ.
- Kiran Surya
- Updated on: Feb 10, 2025
- 11:39 am