ಆಗಸದಲ್ಲಿ ಚಿತ್ತಾರ: ಏರ್ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಅದ್ಭುತ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಸೂರ್ಯಕಿರಣ್, ಸಾರಂಗ್ ಮತ್ತು ಸುಖೋಯ್ ನಂತಹ ವಿಮಾನಗಳ ಪ್ರದರ್ಶನಗಳು ಜನರನ್ನು ಮಂತ್ರಮುಗ್ಧಗೊಳಿಸಿವೆ. ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್ ಕೂಡ ಭಾಗವಹಿಸಿದೆ. ಸಾವಿರಾರು ಜನರು ಈ ಏರ್ ಶೋ ವೀಕ್ಷಿಸುತ್ತಿದ್ದಾರೆ. ಮೊದಲ ದಿನದ ಪ್ರದರ್ಶನಗಳು ಯಶಸ್ವಿಯಾಗಿ ಮುಗಿದಿದೆ.
ಬೆಂಗಳೂರು, ಫೆಬ್ರವರಿ 10: ಸಿಲಿಕಾನ್ ಸಿಟಿಯಲ್ಲಿ ಲೋಕದ ಹಕ್ಕಿಗಳ ಕಲರವ ಶುರುವಾಗಿದೆ. ಏರ್ ಶೋಗೆ (Air Show) ಇಂದಿನಿಂದ ಭರ್ಜರಿ ಚಾಲನೆ ನೀಡಲಾಗಿದೆ. ಸೂರ್ಯಕಿರಣ್, ಸಾರಂಗ್, ಸುಖೋಯ್ ಪ್ರದರ್ಶನಕ್ಕೆ ಜನರು ಜೈಕಾರ ಹಾಕಿದ್ದಾರೆ. ಇನ್ನು ಏರ್ಶೋನಲ್ಲಿ ಪ್ರದರ್ಶನ ನೀಡಿದ ಹೆಲಿಕಾಪ್ಟರ್ನ್ನು ತುಮಕೂರಿನಲ್ಲಿ ತಯಾರು ಮಾಡಲಾಗಿದೆ. ಸದ್ಯ ಮೊದಲ ದಿನದ ಮೊದಲನೇ ಹಂತದ ಏರ್ ಶೋ ಮುಕ್ತಾಯವಾಗಿದ್ದು, ಮಧ್ಯಾಹ್ನದ ನಂತರ ಮತ್ತೊಂದು ಸುತ್ತಿನ ಏರ್ ಶೋ ಆರಂಭವಾಗಿದೆ. ಸಾವಿರಾರು ಜನರು ಏರ್ ಶೋ ಕಣ್ತುಂಬಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos