ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ಬೆಂಗಳೂರಿನ ಯಲಹಂಕದ ಏರೋ ಇಂಡಿಯಾ 2025ರಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರಿಗೆ ನೀಡಲಾದ ಊಟದಲ್ಲಿ ಹುಳುಗಳು ಪತ್ತೆಯಾಗಿದೆ. ಇದು ಎರಡನೇ ಭಾರಿ ಈ ರೀತಿಯ ಘಟನೆ ನಡೆದಿದ್ದು, ನಿನ್ನೆ ಜಿರಳೆ ಪತ್ತೆಯಾಗಿತ್ತು. ಪೊಲೀಸ್ ಆಯುಕ್ತರು ಗುಣಮಟ್ಟದ ಆಹಾರ ಒದಗಿಸುವಂತೆ ಸೂಚಿಸಿದ್ದರೂ, ಈ ಘಟನೆ ನಡೆದಿದೆ.
ಬೆಂಗಳೂರು, ಫೆಬ್ರವರಿ 10: ನಗರದ ಯಲಹಂಕದ ವಾಯುನೆಲೆಯಲ್ಲಿ ಏರೋ ಶೋ-2025 (Air Show 2025) ಆರಂಭವಾಗಿದೆ. ಏರೋ ಶೋ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ನಿನ್ನೆ ಜಿರಳೆ ಪತ್ತೆ ಆಗಿತ್ತು. ಇದೀಗ ಇಂದು ಕೂಡ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಸಿಹಿ ತಿನಿಸಿನಲ್ಲಿ ಮತ್ತೆ ಹುಳ ಪತ್ತೆ ಆಗಿದೆ. ನಿನ್ನೆಯಷ್ಟೇ ಗುಣಮಟ್ಟದ ಆಹಾರ ನೀಡಲು ಕಮಿಷನರ್ ಸೂಚಿಸಿದ್ದರು. ಆದರೂ ಇದೀಗ ಊಟದಲ್ಲಿ ಹುಳ ಪತ್ತೆ ಆಗಿದೆ. ಹುಳ, ಜಿರಳೆ ಪತ್ತೆ ಹಿನ್ನೆಲೆ ಮತ್ತು ಗುಣಮಟ್ಟವಿಲ್ಲದ ಊಟದಿಂದಾಗಿ ಪೊಲೀಸ್ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 10, 2025 02:50 PM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
