ಬಸನಗೌಡ ಯತ್ನಾಳ್ ಬಣಕ್ಕೆ ಕೇಂದ್ರ ಸಚಿವ ಸೋಮಣ್ಣ ಮೂಲಕ ಸಂದೇಶ ನೀಡಿದ ಬಿಜೆಪಿ ಹೈಕಮಾಂಡ್
ಯತ್ನಾಳ್ ಅವರು ಹೇಳುತ್ತಿರುವ ಮಾತಿನಿಂದ ಪಕ್ಷದ ವರಿಷ್ಠರು ಈ ಬಾರಿಯೂ ಭೇಟಿಯಾಗುವ ಸಮಯಾವಕಾಶ ನೀಡಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಯತ್ನಾಳ್ ಅವರ ಮುಖದಲ್ಲಿ ನಿರಾಶೆಯ ಅಂಶವನ್ನು ನೋಡಬಹುದು. ಪಕ್ಷದ ಹಿರಿಯ ಮುಖಂಡರು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ರಾಜ್ಯದ ಎಲ್ಲ ನಾಯಕರೊಂದಿಗೆ ಚರ್ಚೆಯನ್ನು ಮಾಡಿ ಒಂದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬ ಸಂದೇಶ ತಮಗೆ ಸಿಕ್ಕಿದೆ ಎಂದು ಯತ್ನಾಳ್ ಹೇಳಿದರು.
ದೆಹಲಿ: ಕೇಂದ್ರ ಸಚಿವ ವಿ ಸೋಮಣ್ಣ ಅವರ ದೆಹಲಿ ನಿವಾಸದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮಗಳೊಡನೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾವು ಊಹಿಸಿದ್ದನ್ನೇ ಹೇಳಿದರು. ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಸಂಗತಿಗಳೆಲ್ಲ ವರಿಷ್ಠರ ಗಮನಕ್ಕೆ ಬಂದಿವೆ, ಎಲ್ಲ ಸಮಸ್ಯೆಗಳನ್ನು ಅವರು ಬಗೆಹರಿಸುತ್ತಾರಂತೆ, ರಾಜ್ಯ ನಾಯಕತ್ವದ ವಿರುದ್ಧ ಮಾತಾಡುತ್ತಿರುವರಲ್ಲಿ ಯಾರೂ ತರಾತುರಿ ಮಾಡುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಸೋಮಣ್ಣ ಅವರ ಮೂಲಕ ತಮಗೆ ತಿಳಿಸಲಾಗಿದೆ ಎಂದು ಹೇಳಿದರು. ಸೋಮಣ್ಣ ಪ್ರಾಯಶಃ ವಿಜಯೇಂದ್ರ ಅವರೊಂದಿಗೂ ಮಾತಾಡಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷನಿಗೆ ತಿಳಿಸಬೇಕಿರುವ ಸಂದೇಶವನ್ನು ನೀಡಲಿದ್ದಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಏಳೆಂಟು ಸದಸ್ಯರನ್ನು ವರಿಷ್ಠರ ಮುಂದೆ ಕರೆದೊಯ್ದು ನಾಯಕತ್ವ ಬದಲಾವಣೆ ಮಾತನ್ನು ಯತ್ನಾಳ್ ಸಮರ್ಪಕವಾಗಿ ಮಂಡಿಸುವರೇ?