ಸತೀಶ್ ಜಾರಕಿಹೊಳಿ ಮಗ ರಾಹುಲ್ ಜಾರಕಿಹೊಳಿಗೆ ರಾಜ್ಯ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಟ್ಟ!
ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸುವಾಗ ಅವರ ಹಿಂದೆ ಅಥವಾ ಅಕ್ಕಪಕ್ಕದಲ್ಲಿ ಕಾಣುವ ಮಹಿಳೆಯೊಬ್ಬರು ‘ಯುವನಾಯಕ ರಾಹುಲ್ ಜಾರಕಿಹೊಳಿ ಅವರಿಗೆ....’ ಮತ್ತು ‘ಭಾವಿ ಶಾಸಕ ರಾಹುಲ್ ಜಾರಕಿಹೊಳಿ ಅವರಿಗೆ ಜಯವಾಗಲಿ,’ ಅಂತ ಗಂಟಲು ಹರಿಯುವ ಹಾಗೆ ಕಿರುಚುತ್ತಾರೆ. ರಾಜೀವ್ ಗಾಂಧಿಯವರ ಮಕ್ಕಳ ಹೆಸರನ್ನೇ ಸತೀಶ್ ತಮ್ಮ ಮಕ್ಕಳಿಗೆ ಇಟ್ಟಿರೋದು ಕಾಕತಾಳೀಯವಾಗಿಲಾರದು!
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ರಾಜಕೀಯ ಮಹತ್ವಾಕಾಂಕ್ಷೆಗಳು ಮತ್ತೇನಾದರೂ ಉಳಿದೆವೆಯಾ? ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ, ಮಗಳು ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸಂಸದೆ ಮತ್ತು ಈಗ ಮಗ ರಾಹುಲ್ ಜಾರಕಿಹೊಳಿ ರಾಜ್ಯ ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ! ಸತೀಶ್ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸೊಂದಿದೆ. ಅದಾಗಿಬಿಟ್ಟರೆ ಅವರ ಸಂಪುಟದಲ್ಲಿ ರಾಹುಲ್ ಜಾರಕಿಹೊಳಿ ಸಚಿವನಾಗಬಹುದೇನೋ? ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ರಾಹುಲ್ ರನ್ನು ಪಟಾಕಿ ಸಿಡಿಸಿ ಪುಷ್ಟವೃಷ್ಟಿ ಮಾಡಿ, ಅರತಿ ಬೆಳಗಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Maha Kumbh Mela 2025: ತ್ರಿವೇಣಿ ಸಂಗಮದಲ್ಲಿ ಮಿಂದವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದರು!