ಏಳೆಂಟು ಸದಸ್ಯರನ್ನು ವರಿಷ್ಠರ ಮುಂದೆ ಕರೆದೊಯ್ದು ನಾಯಕತ್ವ ಬದಲಾವಣೆ ಮಾತನ್ನು ಯತ್ನಾಳ್ ಸಮರ್ಪಕವಾಗಿ ಮಂಡಿಸುವರೇ?
ಬಸನಗೌಡ ಯತ್ನಾಳ್ ಟೀಮು ಸೋಮಣ್ಣನವವರ ನಿವಾಸಕ್ಕೆ ಭೇಟಿ ನೀಡಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ಇಂದು ದೆಹಲಿಗೆ ಆಗಮಿಸಿದ್ದಾರೆ. ಅವರಿಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಸಚಿವ ಸೋಮಣ್ಣ ಎರಡೂ ಟೀಮಿಗಳನ್ನು ಮುಂದೆ ಕೂರಿಸಿಕೊಂಡು ಬುದ್ಧಿವಾದ ಹೇಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ದೆಹಲಿ: ರಾಜ್ಯ ಬಿಜೆಪಿ ಯುನಿಟ್ಗೆ ಹೋಲಿಸಿದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಅಲ್ಪಸಂಖ್ಯಾತರು ಅಂತ ಹೇಳಿದರೆ ತಪ್ಪೆನಿಸದು. ಕೇಂದ್ರ ಸಚಿವ ವಿ ಸೋಮಣ್ಣ ಮನೆಯಲ್ಲಿ ಇಂದು ಇಟ್ಟುಕೊಳ್ಳಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿರುವ ಯತ್ನಾಳ್ ತಂಡದಲ್ಲಿ ಎಷ್ಟು ಸದಸ್ಯರಿದ್ದಾರೆ ಅಂತೊಮ್ಮೆ ನೋಡಿ. ಮಹೇಶ್ ಕುಮಟಳ್ಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತು ಯತ್ನಾಳ್ ಸೇರಿದಂತೆ 7-8 ಜನ ಇದ್ದಾರೆ. ತಮ್ಮ ಬೇಡಿಕೆಯನ್ನು ಇವರು ವರಿಷ್ಠರ ಮುಂದೆ ಮಂಡಿಸುವುದೇನೋ ಸರಿ ಅದರೆ ಅದಕ್ಕೆ ಮನ್ನಣೆ ಸಿಕ್ಕೀತೇ? ಕಾದು ನೋಡುವುದರಲ್ಲೂ ಅರ್ಥವಿಲ್ಲ ಅನಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ಮತ್ತು ತಮ್ಮ ನಡುವೆ ಸಂಧಾನ ಪ್ರಶ್ನೆಯೇ ಏಳಲ್ಲ, ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕಿದೆ: ಬಸನಗೌಡ ಯತ್ನಾಳ್

ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್ನಿಂದ ಹೊರ ಬಂದ ಸುನಿತಾ

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ

ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
