ವಿಜಯೇಂದ್ರ ಮತ್ತು ತಮ್ಮ ನಡುವೆ ಸಂಧಾನ ಪ್ರಶ್ನೆಯೇ ಏಳಲ್ಲ, ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕಿದೆ: ಬಸನಗೌಡ ಯತ್ನಾಳ್
ಕಳೆದ ಬಾರಿ ತಾವು ದೆಹಲಿಗೆ ಬಂದಿದ್ದು ಪಕ್ಷದ ವರಿಷ್ಠರನ್ನು ಭೇಟಿಯಾಗಲು ಅಲ್ಲ, ರಾಜ್ಯದ ಬಿಜೆಪಿ ಸಂಸದರ ಜೊತೆ ಸಭೆ ನಡೆಸಲು ಎಂದು ಯತ್ನಾಳ್ ಹೇಳಿದರು. ಹೈಕಮಾಂಡ್ ಅಪಾಯಿಂಟ್ಮೆಂಟ್ ನೀಡಲಿಲ್ಲ, ಬಂದ ದಾರಿಗೆ ಸುಂಕವಿಲ್ಲ ಅಂತೆಲ್ಲ ಮಾಧ್ಯಮಗಳು ಹೇಳಬಹುದು, ಅದರೆ ತಾವೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿಗೆ ಬರುತ್ತೇವೆ, ಅಗ್ಗದ ದರಗಳಲ್ಲಿ ಎಲ್ಲವನ್ನು ಒದಗಿಸುವ ಕರ್ನಾಟಕ ಭವನದಲ್ಲಿ ಇರುತ್ತೇವೆ ಅಂತ ಯತ್ನಾಳ್ ಹೇಳಿದರು.
ದೆಹಲಿ: ಬಸನಗೌಡ ಪಾಟೀಲ್ ಯತ್ನಾಳ್ ತಂಡ ಮೊತ್ತೊಮ್ಮೆ ದೆಹಲಿಯಲ್ಲಿದೆ, ಯಾಕೆ ಅಂತ ಕೇಳಿದರೆ ಕೇಂದ್ರ ಸಚಿವ ವಿ ಸೋಮಣ್ಣ ಅವರ ಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದಾಗಿ ಹೇಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಗೆ ಬಂದಿರುವ ಕಾರಣ ಸಂಧಾನವೇನಾದರೂ ಏರ್ಪಡುವ ಸಾಧ್ಯತೆಯಿದೆಯೇ ಅಂತ ಕೇಳಿದರೆ ಖಡಾಖಂಡಿತವಾಗಿ ನಿರಾಕರಿಸುವ ಯತ್ನಾಳ್ ಅದರ ಅವಶ್ಯಕತೆಯೇ ಇಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಬೇಕಿತ್ತು, ಆದರೆ ಪಕ್ಷದ ಬಗ್ಗೆ ಈಗ ಹೀನಾಯವಾಗಿ ಮಾತಾಡುತ್ತಿರುವವರಿಂದಾಗಿ ಅದು ಸಾಧ್ಯವಾಗಲಿಲ್ಲ, ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕಿದೆ, ಹೊಸ ನಾಯಕತ್ವದ ಅವಶ್ಯಕತೆಯಿದೆ ಎಂದು ಹೇಳಿದರು. ನೀವು ಪದೇಪದೆ ದೆಹಲಿಗೆ ಬರುತ್ತಿರುವುದರಿಂದ ರಾಜ್ಯಾಧ್ಯಕ್ಷರಿಗೆ ಆತಂಕವಾಗುತ್ತಿದೆ ಅಂತ ಹೇಳಿದರೆ ಯತ್ನಾಳ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಎಲ್ಲ ವಿದ್ಯಮಾನಗಳನ್ನು ತಿಳಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ವಿಜಯೇಂದ್ರ: ಸೋಮಣ್ಣ ಮನೆ ಪೂಜೆ ನೆಪದಲ್ಲಿ ದೆಹಲಿ ಸೇರಿದ ಯತ್ನಾಳ್!

