ಬೆಂಗಳೂರು ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2025 ಇದರಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡದ ಪೈಟಲ್ಗಳು ಆಕರ್ಷಕ ಏರ್ ಶೋ ನಡೆಸಿದರು. ಸೂರ್ಯ ಕಿರಣ್ ಟೀಮ್ ಪೈಲಟ್ಗಳ ಸಾಹಸ, ಯುದ್ಧ ವಿಮಾನಗಳು ಆಗಸದಲ್ಲಿ ಮೊಳಗಿಸಿದ ಘರ್ಜನೆ, ವರ್ಣಮಯ ಚಿತ್ತಾರದ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ಶೋ 2025 ಗೆ ಚಾಲನೆ ದೊರೆತಿದ್ದು, ಭಾರತೀಯ ವಾಯು ಪಡೆಯ ಪ್ರಖ್ಯಾತ ‘ಸೂರ್ಯ ಕಿರಣ್’ ತಂಡ ಸಾಹಸ ಪ್ರದರ್ಶನ ನಡೆಸಿತು. ತ್ರಿವರ್ಣ ಪ್ರದರ್ಶನದ ಮೂಲಕ ‘ಸೂರ್ಯ ಕಿರಣ್’ ಟೀಮ್ ಶೋ ಆರಂಭಿಸಿತು. 8 ಫೈಟರ್ ಜೆಟ್ಗಳಿರುವ ಸೂರ್ಯ ಕಿರಣ್ ತಂಡದ ಪ್ರದರ್ಶನದ ವಿಡಿಯೋ ಇಲ್ಲಿದೆ ನೋಡಿ.
Published on: Feb 10, 2025 11:36 AM