ಏರೋ ಶೋ-2025: ಕಡಿಮೆ ತೂಕ ಮತ್ತು ಅತಿಹೆಚ್ಚು ಎತ್ತರದಲ್ಲಿ ಹಾರುವ ಪ್ರಚಂಡ್ ಹೆಲಿಕಾಪ್ಟರ್ಗೆ ವಿದೇಶಗಳಿಂದ ಪ್ರಚಂಡ ಬೇಡಿಕೆ
ಏರೋ ಶೋ-2025: ಪ್ರಚಂಡ್ ಹೆಲಿಕಾಪ್ಟರ್ಗಳಿಗಾಗಿ ಬೇರೆ ದೇಶಗಳಿಂದ ಅಪಾರ ಬೇಡಿಕೆ ಬಂದಿದೆ, ಇಷ್ಟು ಕಡಿಮೆ ತೂಕ ಮತ್ತು ಅತಿಹೆಚ್ಚು ಎತ್ತರದಲ್ಲಿ ಹಾರುವ ಹೆಲಿಕಾಪ್ಟರ್ ಬೇರೆ ಯಾವ ದೇಶದಲ್ಲೂ ಇಲ್ಲ ಎಂದು ರಕ್ಷಣಾ ತಜ್ಞ ಹೇಳುತ್ತಾರೆ. ಲಿಮಿಟೆಡ್ ಸಿರೀಜ್ ಪ್ರೊಡಕ್ಷನ್ ಅಂತ ಕೇವಲ 15 ಚಾಪರ್ ಗಳನ್ನು ಮಾತ್ರ ತಯಾರು ಮಾಡಿದ್ದು ಅದರಲ್ಲಿ ಮತ್ತಷ್ಟು ಸುಧಾರಣೆಗಳನ್ನು ರಕ್ಷಣಾ ಇಲಾಖೆ ಸೂಚಿಸಿದ ಬಳಿಕ ಮೊದಲ ಹಂತದಲ್ಲಿ 156 ಪ್ರಚಂಡ್ ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುವುದಂತೆ.
ಬೆಂಗಳೂರು: ನಗರದ ಹೆಚ್ಎಎಲ್ ನಲ್ಲಿ ಸುಮಾರು 45 ಭಾಗದಷ್ಟು ವಿದೇಶೀ ಉಪಕರಣಗಳೊಂದಿಗೆ ತಯಾರಾಗಿರುವ ಪ್ರಚಂಡ್ ಹೆಲಿಕಾಪ್ಟರ್ ಹೆಸರಿಗೆ ತಕ್ಕಂತೆಯೇ ಪ್ರಚಂಡವಾಗಿದೆ. ಈ ಸ್ಲೀಕ್ ಆದರೆ ಸ್ಟೆಲ್ದೀ ಚಾಪರ್ ಬಗ್ಗೆ ರಕ್ಷಣಾ ತಜ್ಞ ಗಿರೀಶ್ ಲಿಂಗಣ್ಣ ಅವರ ಬಾಯಿಂದ ಮೆಚ್ಚುಗೆ ಹೊರತು ಬೇರೆ ಶಬ್ದಗಳೇ ಹೊರಡುತ್ತಿಲ್ಲ. ಕಾರ್ಗಿಲ್ ಯುದ್ಧಸಮಯದಲ್ಲಿ ಹೆಚ್ಚು ಎತ್ತರಕ್ಕೆ ಹಾರಬಲ್ಲ ಅದರೆ ಕಡಿಮೆ ತೂಕದ ಹೆಲಿಕಾಪ್ಟರ್ ಗಳ ಅವಶ್ಯಕತೆಯನ್ನು ಮನಗಾಣಲಾಯಿತು ಮತ್ತು ಎಚ್ಎಎಲ್ ಪ್ರಚಂಡ ಪ್ರಾಜೆಕ್ಟ್ ವಿನ್ಯಾಸವನ್ನು 2010 ರಲ್ಲಿ ಸಿದ್ಧಪಡಿಸಿದರು ಎಂದು ಗಿರೀಶ್ ಹೇಳುತ್ತಾರೆ. ಪ್ರಚಂಡ್ ಹೆಲಿಕಾಪ್ಟರ್ ತೂಕ ಕೇವಲ 2.2 ಟನ್ ಮಾತ್ರ ಮತ್ತು ಇದು 6.5 ಕಿಮೀ ಎತ್ತರದಲ್ಲಿ ಹಾರಬಲ್ಲದು, ಟ್ಯಾಕ್ಟಿಕಲ್ ವಾರ್ಫೇರ್ಗೆ ಹೇಳಿಮಾಡಿಸಿದಂಥ ಚಾಪರ್ ಎಂದು ಗಿರೀಶ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ