ಬೆಂಗಳೂರು: ಕರ್ನಾಟಕದ ಹಲವು ನಗರಗಳಲ್ಲೂ ಪಾರ್ಶ್ವ ಸೂರ್ಯ ಗ್ರಹಣ (PartialSolarEclipse) ಕಾಣಿಸಿಕೊಂಡಿದ್ದು, ಬೆಂಗಳೂರು, ಬೀದರ್, ಹುಬ್ಬಳ್ಳಿ, ಕೊಪ್ಪಳ, ಮಂಗಳೂರು, ಧಾರವಾಡ, ಬೆಳಗಾವಿ, ರಾಯಚೂರು, ಮೈಸೂರು, ಕಲಬುರಗಿ, ಕೋಲಾರ, ಬಳ್ಳಾರಿ, ವಿಜಯಪುರ, ಶಿವಮೊಗ್ಗ, ಬಾಗಲಕೋಟೆ, ಹಾಸನ, ಉಡುಪಿ, ಮಂಡ್ಯ ಸೇರಿ ಹಲವು ನಗರಗಳಲ್ಲಿ ಗ್ರಹಣ ಗೋಚರವಾಗಿದೆ. ಇನ್ನು ಗ್ರಹಣ ಗೋಚರದಿಂದಾಗಿ ಬೆಂಗಳೂರಿನ ಬಹುತೇಕ ಕಡೆ ಸ್ತಬ್ಧವಾಗಿದ್ದು, ನಗರದ ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ. ಮೆಜೆಸ್ಟಿಕ್ ಸೇರಿ ಬಹುತೇಕ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿವೆ. ನಗರದಲ್ಲಿ ಬಹುತೇಕ ಅಂಗಡಿಗಳು ಬಂದ ಮಾಡಲಾಗಿದೆ. ಸೂರ್ಯ ಗ್ರಹಣ ಹಿನ್ನೆಲೆ ಸಿಲಿಕಾನ್ ಸಿಟಿ ಜನ ಹೊರಬಂದಿಲ್ಲ. ಇನ್ನು ಭಾರತದ ಹಲವೆಡೆ ಗ್ರಹಣ ಗೋಚರವಾಗಿದ್ದು, ಮೊದಲಿಗೆ ಅಮೃತಸರದಲ್ಲಿ ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಗಿದೆ. ಬಳಿಕ ದೆಹಲಿ, ಹರಿದ್ವಾರ, ಕುರುಕ್ಷೇತ್ರ, ಜಮ್ಮು, ಶ್ರೀನಗರ, ನೋಯ್ಡಾ, ಋಷಿಕೇಶ್, ಭೋಪಾಲ್, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಲಖನೌ, ಜೈಪುರ, ಪಾಟ್ನಾದಲ್ಲೂ ಸೂರ್ಯಗ್ರಹಣ ಗೋಚರವಾಗಿದೆ.
ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳು ಬಂದ್
ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನೂ ಸಹ ಬಂದ್ ಮಾಡಲಾಗಿತ್ತು. ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನ, ಶಿರಸಿ ಮಾರಿಕಾಂಬ, ವಿಜಯಪುರದ ಸುಂದರೇಶ್ವರ ದೇವಸ್ಥಾನ, ಶನಿದೇವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ,
ಚಾಮುಂಡೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ, ಕಪಿಲೇಶ್ವರ ದೇಗುಲ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲೂ ದರ್ಶನಕ್ಕೆ ಅವಕಾಶ,
ಯಲ್ಲಮ್ಮ, ಮಾಯಕ್ಕದೇವಿ ದೇಗುಲದಲ್ಲಿ ಆರತಿ, ಪ್ರಸಾದ ಇಲ್ಲ.
#PartialSolarEclipse as seen in Bengaluru, Karnataka. pic.twitter.com/q9Wo5zZo1Q
— ANI (@ANI) October 25, 2022
ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು ಅನ್ನುವುದು ಮೌಢ್ಯ
ಕಲಬುರಗಿ: ಜಿಲ್ಲೆಯಲ್ಲಿ ಗ್ರಹಣದ ಸಮಯದಲ್ಲಿ ಉಪಾಹಾರ ಸೇವನೆ ಮಾಡಲಾಗಿದೆ. ಜ್ಞಾನ ವಿಜ್ಞಾನ ಸಮಿತಿಯಿಂದ ಜಗತ್ ವೃತ್ತದಲ್ಲಿ ಉಪಾಹಾರ ಕೂಟ ಆಯೋಜನೆ ಮಾಡಿದ್ದು, ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು ಅನ್ನುವುದು ಮೌಢ್ಯ. ಮೌಢ್ಯ ವಿರೋಧಿಸಿ ಜ್ಞಾನ ವಿಜ್ಞಾನ ಸಮಿತಿಯಿಂದ ಉಪಾಹಾರ ಕೂಟ ನಡೆಸಿದ್ದು, ನೂರಾರು ಜನರು ಉಪಾಹಾರ ಸೇವಿಸಿದರು. ಇದೇ ರೀತಿಯಾಗಿ ಶಿವಮೊಗ್ಗದಲ್ಲಿಯೂ ಮದ್ದೂರು ವಡೆ ಮತ್ತು ಮಂಡಕ್ಕಿ ಖಾರವನ್ನು ಸಾರ್ವಜನಿಕರು ಸೇವಿಸುತ್ತಿದ್ದು, ಮೂಢನಂಬಿಕೆ ಹೋಗಲಾಡಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ವಿಜ್ಞಾನದೆಡೆಗೆ ನಮ್ಮ ನಡೆಯಾಗಿರಬೇಕು: ನಾರಾಯಣ ಮೂರ್ತಿ
ಸೂರ್ಯಗ್ರಹಣ ಮೌಡ್ಯತೆ ಕುರಿತಾಗಿ ಬೆಂಗಳೂರಿನಲ್ಲಿ ಮೂಡನಂಬಿಕೆ ವಿರೋಧಿ ವೇದಿಕೆ ನಾರಾಯಣ ಮೂರ್ತಿ ಮಾತನಾಡಿದ್ದು, ಹಲವಾರು ವರ್ಷಗಳಿಂದ ಈ ಮೌಡ್ಯವನ್ನ ಬಿತ್ತುತ್ತ ಬಂದಿದ್ದಾರೆ. ಇದನ್ನ ದೇವರು ಸೃಷ್ಟಿ ಮಾಡಿರುವುದಲ್ಲ.
ಜನರು ಮೂಡಿಸಿಕೊಂಡ ಬಂದಿರುವುದು. ಚಂದ್ರ ಹಾಗೂ ಸೂರ್ಯನ ನಡುವೆ ಬರುವ ಗ್ರಾಹಣಕ್ಕೆ ಹಲವು ಮೌಡ್ಯಗಳ ಹೆಸರನ್ನ ಇಡುತ್ತಿದ್ದೇವೆ. ಗ್ರಾಹಣದ ಹೆಸರಿನಲ್ಲಿ ಆ ದೋಷ ಈ ದೋಷ ಅಂತ ಕೆಲ ಮೂಡರು ಭಯ ಹುಟ್ಟಿಸುತ್ತಿದ್ದಾರೆ. ಇಂತಹ ಮೂಡ ನಂಬಿಕೆಗಳು ಕಡಿಮೆಯಾಗಬೇಕು. ವಿಜ್ಞಾನದೆಡೆಗೆ ನಮ್ಮ ನಡೆಯಾಗಿರಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:12 pm, Tue, 25 October 22