AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಕಾಂಗ್ರೆಸ್​​​ ಬಸ್​ ಯಾತ್ರೆ ವಿಚಾರ: ಕೈ ನಾಯಕರು​​ ರಿಮೋಟ್​ ಕಂಟ್ರೋಲ್​ ಗಾಡಿ ಇದ್ದಂತೆ: ಆರ್​ ಅಶೋಕ್​

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 80 ವರ್ಷದ ಮಲ್ಲಿಕಾರ್ಜುನ​ ಖರ್ಗೆ ಅವರನ್ನು ಕೂರಿಸಿದ್ದರೂ, ಇವರ ಹಿಂದೆ ಸೋನಿಯಾ ಗಾಂಧಿ ಇದ್ದಾರೆ ಅಂತ ಗೊತ್ತಿದೆ.

ರಾಜ್ಯ ಕಾಂಗ್ರೆಸ್​​​ ಬಸ್​ ಯಾತ್ರೆ ವಿಚಾರ: ಕೈ ನಾಯಕರು​​ ರಿಮೋಟ್​ ಕಂಟ್ರೋಲ್​ ಗಾಡಿ ಇದ್ದಂತೆ:  ಆರ್​ ಅಶೋಕ್​
ಕಂದಾಯ ಸಚಿವ ಆರ್​ ಅಶೋಕ
TV9 Web
| Edited By: |

Updated on: Oct 25, 2022 | 3:00 PM

Share

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 80 ವರ್ಷದ ಮಲ್ಲಿಕಾರ್ಜುನ​ ಖರ್ಗೆ ಅವರನ್ನು ಕೂರಿಸಿದ್ದರೂ, ಇವರ ಹಿಂದೆ ಸೋನಿಯಾ ಗಾಂಧಿ ಇದ್ದಾರೆ ಅಂತ ಗೊತ್ತಿದೆ. ಸ್ಟೇರಿಂಗ್ ಯಾರ ಬಳಿ ಇದೆ ಅಂತ ಗೊತ್ತಿದೆ. ಅವರದ್ದು ರಿಮೋಟ್​ ಕಂಟ್ರೋಲ್​ ಗಾಡಿ ಎಂದು ರಾಜ್ಯ ಕಾಂಗ್ರೆಸ್​​​ (Congress) ಬಸ್​ ಯಾತ್ರೆಯನ್ನು ಪ್ರಾರಂಭಿಸಲು ಹೊರಟಿರುವ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಕಂದಾಯ ಸಚಿವ ಆರ್​. ಅಶೋಕ (R Ashok) ವ್ಯಂಗ್ಯವಾಡಿದ್ದಾರೆ. ವಿಧಾನಸೌದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರ ಕಾಂಗ್ರೆಸ್ ಕೊನೆ ಮೊಳೆಯನ್ನು ಕರ್ನಾಟಕದಲ್ಲಿ ಹೊಡೆಯುತ್ತದೆ ಎಂದು ಕಾಲೆಳೆದರು.

ಕೇಂಪೇಗೌಡರ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಬರುತ್ತಾರೆ

ನಾಡಪ್ರಭು ಕೇಂಪೇಗೌಡರ ಪ್ರತಿಮೆ ಅನಾವರಣ ಕುರಿತು ಮಾತನಾಡಿದ ಅವರು ನಾಡಪ್ರಭು ಕೇಂಪೇಗೌಡರ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಪ್ರತಿ ಹಳ್ಳಿಯಿಂದ ಮೃತ್ತಿಕೆ ಸಂಗ್ರಹಿಸುವಂತೆ ಜಿಲ್ಲಾಧಿಕರಿಗಳಿಗೆ ಸೂಚನೆ ನೀಡಿದ್ದೇವೆ. ನ. 8ರಂದು ಸಂಗ್ರಹವಾದ ಮೃತ್ತಿಕೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಡಬೇಕು. ಆ ನಂತರ ನ.9ಕ್ಕೆ ಮೃತ್ತಿಕೆ ಬೆಂಗಳೂರಿಗೆ ತಲುಪಲಿದೆ. ಕೇಂಪೇಗೌಡರು ಯಾರು ಎಂದು ನಾಡಿಗೆ ತಿಳಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಬಹಳ ಜನ ಕೇಂಪೇಗೌಡರ ಹೆಸರು ಹೇಳಿ ರಾಜಕಾರಣ ಮಾಡಿದ್ದಾರೆ. ವಿಧಾನಸೌದಲ್ಲಿ ಕೇಂಪೇಗೌಡರ ಪ್ರತಿಮೆ ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮತಿ ನೀಡಿದ್ದಾರೆ. ವಿಧಾನಸೌದ ಮುಂಬಾಗ ನೆಹರು, ಅಂಬೇಡ್ಕರ್​ ಪ್ರತಿಮೆಗಳ ನಡುವೆ ಕೇಂಪೇಗೌಡರ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರ ನಾಟಕ ಕಂಪನಿಯ ಬಣ್ಣ ಬಯಲಾಗಿದೆ

ಬಿಜೆಪಿ SC, ST ಮೀಸಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಿದೆ. ನ್ಯಾ. ನಾಗಮೋಹನ ದಾಸ್​ ಸಮಿತಿ ಮಾಡಿದ್ದು ವಿಪಾಕ್ಷ ನಾಯಕ ಸಿದ್ದರಾಮಯ್ಯ ಅಲ್ಲ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ. ಸಿದ್ದರಾಮಯ್ಯನವರ ನಾಟಕ ಕಂಪನಿಯ ಬಣ್ಣ ಬಯಲಾಗಿದೆ. ಬಸ್ಕಿ ಹೊಡೆಯೋದು ಕೈಹಿಡಿದು ಓಡೋದನ್ನು ಮಾಡಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಎಣ್ಣೆ-ಸೀಗೆಕಾಯಿ ರೀತಿ ಎಂದು ವಾಗ್ದಾಳಿ ಮಾಡಿದರು.

ಕೆಎಫ್​​ಡಿಯನ್ನು ಬ್ಯಾನ್ ಮಾಡಬೇಕು

ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣಗಳ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ಪಿಎಫ್​ಐ ಬ್ಯಾನ್ ಮಾಡಿದೆ. ಅದೇ ರೀತಿ ಕೆಎಫ್​​ಡಿಯನ್ನು ಬ್ಯಾನ್ ಮಾಡಬೇಕು. ಕಿಡಿಗೇಡಿಗಳನ್ನು ಮುಲಾಜಿಲ್ಲದೆ ಮಟ್ಟ ಹಾಕುತ್ತೇವೆ. ಯಾರೇ ಇದ್ದರು ಮಟ್ಟ ಹಾಕುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು