Sanskrit schools: ಶಿಕ್ಷಣ ಇಲಾಖೆ ವಿರುದ್ಧ ಹೊಸ ಸಮರ ಸಾರಿದ ಹಿಂದೂ ಪರ ಸಂಘಟನೆಗಳು!

| Updated By: ಸಾಧು ಶ್ರೀನಾಥ್​

Updated on: Nov 09, 2022 | 1:00 PM

ಕೆಲವು ದಿನಗಳಿಂದ ಶಾಲೆಗಳಲ್ಲಿ ರಾಮಯಣ, ಭಗವದ್ಗೀತೆ ಕೊನೆಯಲ್ಲಿ ಧ್ಯಾನಕ್ಕೂ ಅವಕಾಶ ಕಲ್ಪಿಸುವುದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ಮಾಡ್ತಾ ಇದ್ದಾರೆ. ಆದ್ರೆ ಉರ್ದು ಶಾಲೆಗಳಲ್ಲಿ ಮದರಸಾಗಳಲ್ಲಿ ತಮ್ಮ ಮಕ್ಕಳಿಗೆ ಇಸ್ಲಾಂ ಧರ್ಮದ ಪರಿಚಯ ಹೇಳಿಕೊಡ್ತಾರೆ.

Sanskrit schools: ಶಿಕ್ಷಣ ಇಲಾಖೆ ವಿರುದ್ಧ ಹೊಸ ಸಮರ ಸಾರಿದ ಹಿಂದೂ ಪರ ಸಂಘಟನೆಗಳು!
ಶಿಕ್ಷಣ ಇಲಾಖೆ ವಿರುದ್ಧ ಹೊಸ ಸಮರ ಸಾರಿದ ಹಿಂದೂ ಪರ ಸಂಘಟನೆಗಳು!
Follow us on

ಬೆಂಗಳೂರು: ಮುಸ್ಲಿಂ ಸಂಘಟನೆಗಳಿಗೆ ಠಕ್ಕರ್​ ಕೊಡಲು ಮುಂದಾದ ಹಿಂದೂಪರ ಸಂಘಟನೆಗಳು (hindu organisations) ಶಿಕ್ಷಣ ಇಲಾಖೆ ವಿರುದ್ಧ ಹೊಸ ಸಮರ ಸಾರಿವೆ. ಉರ್ದು ಶಾಲೆಯಂತೆ ರಾಜ್ಯದಲ್ಲಿ ಹಿಂದೂ ಮಕ್ಕಳಿಗೆ ಸಂಸ್ಕೃತ ಶಾಲೆಗಳನ್ನು (Sanskrit schools) ಆರಂಭಿಸುವುದಕ್ಕೆ ಬೇಡಿಕೆಯಿಟ್ಟಿವೆ. ಹಾಗಾದರೆ ಮುಸ್ಲಿಂ ಸಮುದಾಯದ ಮಕ್ಕಳಿಗೆ ಉರ್ದು ಹಾಗೂ ಅರೆಬಿಕ್ ಶಾಲೆಗಳು (urdu schools) ಇರುವಂತೆ ರಾಜ್ಯದಲ್ಲಿ ಸರ್ಕಾರದಿಂದ ಸಂಸ್ಕೃತ ಶಾಲೆಗಳು ಓಪನ್ ಆಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಮಕ್ಕಳಿಗೂ ಸಂಸ್ಕೃತ ಶಾಲೆಗಳ ಆರಂಭಕ್ಕೆ ಒತ್ತಾಯ ಕೇಳಿಬಂದಿದ್ದು, ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಗಳಲ್ಲಿಯೂ ಸಂಸ್ಕೃತ ಶಾಲೆಗಳನ್ನ ಆರಂಭಿಸುವಂತೆ ಮನವಿ ಮಾಡಲಾಗಿದೆ. ಇದೇ ವೇಳೆ, ಹಿಂದೂ ಮಕ್ಕಳಿಗೆ ಶಿಕ್ಷಣ ಇಲಾಖೆ ಶಾಲೆಗಳನ್ನ ಆರಂಭಿಸುವಂತೆ ಅಭಿಯಾನವನ್ನೂ ಕೈಗೊಳ್ಳಲಾಗಿದೆ. ಸಂಸ್ಕೃತ ಭೋದನೆ ಜೊತೆಗೆ ಹಿಂದೂ ಧರ್ಮದ ಪರಿಚಯ ಸಂಸ್ಕೃತಿ ಪರಿಚಯಿಸಬೇಕು. ಹಿಂದೂ ಹಬ್ಬಗಳು, ರಾಮಾಯಣ, ಭಗವದ್ಗೀತೆ, ಧ್ಯಾನ, ಪೂಜಾ ಪುನಸ್ಕಾರ, ಕುಂಕುಮ, ಬಳೆ, ತಿಲಕದ ಜ್ಞಾನ ನೀಡುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: Tv9 Exclusive: ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರತದ ಪರಂಪರೆಗೆ ಮಾಡಿದ ಅವಮಾನ; ಜಿ.ಬಿ.ಹರೀಶ್, ಶೆಲ್ವಪಿಳ್ಳೆ ಅಯ್ಯಂಗಾರ್

ಹಿಂದೂ ಧರ್ಮದ ಆಚರಣೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಕೆಲವು ದಿನಗಳಿಂದ ಶಾಲೆಗಳಲ್ಲಿ ರಾಮಯಣ, ಭಗವದ್ಗೀತೆ ಕೊನೆಯಲ್ಲಿ ಧ್ಯಾನಕ್ಕೂ ಅವಕಾಶ ಕಲ್ಪಿಸುವುದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ಮಾಡ್ತಾ ಇದ್ದಾರೆ. ಆದ್ರೆ ಉರ್ದು ಶಾಲೆಗಳಲ್ಲಿ ಮದರಸಾಗಳಲ್ಲಿ ತಮ್ಮ ಮಕ್ಕಳಿಗೆ ಇಸ್ಲಾಂ ಧರ್ಮದ ಪರಿಚಯ ಹೇಳಿಕೊಡ್ತಾರೆ. ಹಿಂದೂ ಧರ್ಮದ ಎಲ್ಲ ಆಚರಣೆಗೂ ವಿರೋಧ ಮಾಡ್ತಾರೆ. ಹೀಗಾಗಿ ಉರ್ದು ಶಾಲೆಗಳ ಮಾದರಿಯಂತೆ ಹಿಂದೂ ಶಾಲೆಗಳನ್ನ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಆರಂಭಿಸಬೇಕು ಎಂದು ಹಿಂದೂ ಪರ ಸಂಘಟನೆಗಳಿಂದ ವಿಭಿನ್ನ ಅಭಿಯಾನ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 9 November 22