ರಾಷ್ಟ್ರೀಯ ಲೋಕ ಅದಾಲತ್​​ನಲ್ಲಿ 42 ಲಕ್ಷಕ್ಕೂ ಅಧಿಕ ಕೇಸ್​ಗಳ ಇತ್ಯರ್ಥ: 2,384 ಕೋಟಿ ರೂ ಪರಿಹಾರ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕರ್ನಾಟಕದ ಹೈಕೋರ್ಟ್ ಪೀಠಗಳು ಮತ್ತು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳು ಸೇರಿ 4.2 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿವೆ. ಆ ಮೂಲಕ ಒಟ್ಟು 2,384 ಕೋಟಿ ರೂ ಪರಿಹಾರ ವಿತರಿಸಲಾಗಿದೆ. ಡಿಸೆಂಬರ್ 12ರಂದು ವರ್ಷದ ಕೊನೆಯ ಲೋಕ ಅದಾಲತ್ ನಡೆಯಲಿದೆ.

ರಾಷ್ಟ್ರೀಯ ಲೋಕ ಅದಾಲತ್​​ನಲ್ಲಿ 42 ಲಕ್ಷಕ್ಕೂ ಅಧಿಕ ಕೇಸ್​ಗಳ ಇತ್ಯರ್ಥ: 2,384 ಕೋಟಿ ರೂ ಪರಿಹಾರ
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Sep 23, 2026 | 8:00 PM

ಬೆಂಗಳೂರು, ಸೆಪ್ಟೆಂಬರ್​​ 23: ಸೆಪ್ಟೆಂಬರ್ 19ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 42,43,624 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಟ್ಟು 44,28,455 ಪ್ರಕರಣಗಳ ಪೈಕಿ 42,43,624 ಕೇಸ್‌ಗಳು ಬಗೆಹರಿದಿದ್ದು, ಇನ್ನೂ 1,84,831 ಪ್ರಕರಣಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ಪ್ರಕ್ರಿಯೆಯ ಮೂಲಕ ಸಂತ್ರಸ್ತರಿಗೆ ಒಟ್ಟು 2,384 ಕೋಟಿ ರೂ ಪರಿಹಾರ ಒದಗಿಸಲಾಗಿದೆ.

42,43,624 ಪ್ರಕರಣಗಳು ಇತ್ಯರ್ಥ

ಈ ಕುರಿತಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ. ಶ್ರೀಮತಿ ಅನು ಸಿ. ಶಿವರಾಮನ್ ಹಾಗೂ ನ್ಯಾ. ಆರ್. ದೇವದಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಒಟ್ಟು 10 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಕೈಗೆತ್ತಿಕೊಂಡಿದ್ದ 44,27,445 ಕೇಸ್‌ಗಳ ಪೈಕಿ 42,43,624 ಪ್ರಕರಣಗಳು ಬಗೆಹರಿದಿವೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಬಗೆಯ ಪ್ರಕರಣಗಳ ವಿಲೇವಾರಿ

  • ವೈವಾಹಿಕ ವ್ಯಾಜ್ಯಗಳು: 1,230 ವಿಚ್ಛೇದನ ಪ್ರಕರಣಗಳು ಇತ್ಯರ್ಥವಾಗಿದ್ದು, ಈ ಪೈಕಿ 287 ದಂಪತಿಗಳ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸುಖಾಂತ್ಯಗೊಳಿಸಿ ಒಂದಾಗಿಸಲಾಗಿದೆ.
  • ಆಸ್ತಿ ಹಾಗೂ ಸಿವಿಲ್ ವ್ಯಾಜ್ಯ: 2,828 ಆಸ್ತಿ ಸಂಬಂಧಿತ ಕಿರಿಕ್ ಹಾಗೂ ವ್ಯಾಜ್ಯ ಪ್ರಕರಣಗಳು ಬಗೆಹರಿದಿವೆ.
  • ವಾಹನ ಹಾಗೂ ಚೆಕ್ ಬೌನ್ಸ್: 4,160 ಮೋಟಾರು ವಾಹನ ಅಪರಾಧ ಪ್ರಕರಣಗಳು, 10,093 ಚೆಕ್ ಬೌನ್ಸ್ ಪ್ರಕರಣಗಳು ಮತ್ತು 584 ಮೋಟಾರು ವಾಹನ ಕ್ಲೇಮ್ (ಎಂಎಸಿಟಿ) ಕೇಸ್‌ಗಳು ಇತ್ಯರ್ಥಗೊಂಡಿವೆ.
  • ಇತರ ಪ್ರಕರಣಗಳು: 571 ಭೂಸ್ವಾಧೀನ, 9 ರೇರಾ, 130 ಗ್ರಾಹಕರ ವ್ಯಾಜ್ಯ ಹಾಗೂ 2,930 ಇತರ ಕೇಸ್‌ಗಳನ್ನು ಇತ್ಯರ್ಥಪಡಿಸಲಾಗಿದೆ.

ಹಳೆಯ ಪ್ರಕಣಗಳು ಇತ್ಯರ್ಥ: ಹಿರಿಯ ನಾಗರಿಕರಿಗೆ ರಿಲೀಫ್  

ಇನ್ನು ಈ ಬಾರಿಯ ಲೋಕ ಅದಾಲತ್‌ನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೆ ಒತ್ತು ನೀಡಲಾಗಿದೆ. 5 ವರ್ಷಕ್ಕೂ ಹಳೆಯದಾದ 1,227 ಕೇಸ್‌ಗಳು, 10 ವರ್ಷಕ್ಕೂ ಹಳೆಯದಾದ 140 ಕೇಸ್‌ಗಳು ಹಾಗೂ 15 ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ 23 ಕೇಸ್‌ಗಳು ಸೇರಿದಂತೆ ಒಟ್ಟು 1,390 ಹಳೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದರಿಂದಾಗಿ 1,562 ಹಿರಿಯ ನಾಗರಿಕರಿಗೆ ಕೇಸ್​ಗಳಿಂದ ರಿಲೀಫ್ ಸಿಕ್ಕಿದೆ.

ಡಿಸೆಂಬರ್ 12ರಂದು ವರ್ಷದ ಕೊನೆಯ ಲೋಕ ಅದಾಲತ್

ಇನ್ನು ಈ ವರ್ಷದ ಅಂತಿಮ ಹಾಗೂ ಮತ್ತೊಂದು ಹಂತದ ರಾಷ್ಟ್ರೀಯ ಲೋಕ ಅದಾಲತ್ ಡಿಸೆಂಬರ್ 12ರಂದು ನಡೆಯಲಿದೆ. ನ್ಯಾಯಾಲಯಗಳಲ್ಲಿ ವ್ಯಾಜ್ಯ ಎದುರಿಸುತ್ತಿರುವ ನಾಗರಿಕರು ಈ ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪರಸ್ಪರ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us