AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ: ದಾಳಿಯಲ್ಲಿ ಸಿಕ್ಕ ಹಣವೆಷ್ಟು? ಖಚಿತ ಮಾಹಿತಿ ನೀಡಿದ ಲೋಕಾಯುಕ್ತ ಮುಖ್ಯ ನಾಯಮೂರ್ತಿ

ನಿನ್ನೆ (ಮಾ.2) ಘಟನೆಯಲ್ಲಿ 2 ಕೋಟಿ 2 ಲಕ್ಷ ರಿಕವರಿ ಆಗಿದೆ. 6 ಕೋಟಿ 10 ಲಕ್ಷ ಮನೆಯಲ್ಲಿ ರಿಕವರಿ ಆಗಿದೆ. ಈಗ ಇನ್ವೆಸ್ಟಿಗೇಶನ್ ಆಗುತ್ತಿದೆ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕಿದ್ದು, ಕಂಪ್ಲೇಟ್ ಕೊಟ್ಟಿರುವವರನ್ನು ಗೌರವಿಸಬೇಕು. ಅವರ ಧೈರ್ಯಕ್ಕೆ ಮೆಚ್ಚುಗೆ ಇದೆ ಎಂದು ಲೋಕಾಯುಕ್ತ ಮುಖ್ಯ ನಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.

ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ:  ದಾಳಿಯಲ್ಲಿ ಸಿಕ್ಕ ಹಣವೆಷ್ಟು? ಖಚಿತ ಮಾಹಿತಿ ನೀಡಿದ ಲೋಕಾಯುಕ್ತ ಮುಖ್ಯ ನಾಯಮೂರ್ತಿ
ಲೋಕಾಯುಕ್ತ ಮುಖ್ಯ ನಾಯಮೂರ್ತಿ ಬಿ.ಎಸ್. ಪಾಟೀಲ್
ವಿವೇಕ ಬಿರಾದಾರ
|

Updated on:Mar 03, 2023 | 11:38 AM

Share

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ (BJP MLA Madal Virupaksha)  ಪುತ್ರ ಪ್ರಶಾಂತ್​ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ (Lokayukta)ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮುಖ್ಯ ನಾಯಮೂರ್ತಿ ಬಿ.ಎಸ್. ಪಾಟೀಲ್ (Lokayukta Chief Justice BS Patil) ಇಂದು(ಮಾ.03) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ (ಮಾ.2) ಘಟನೆಯಲ್ಲಿ 2 ಕೋಟಿ 2 ಲಕ್ಷ ರಿಕವರಿ ಆಗಿದೆ. 6 ಕೋಟಿ 10 ಲಕ್ಷ ಮನೆಯಲ್ಲಿ ರಿಕವರಿ ಆಗಿದೆ. ಈಗ ಇನ್ವೆಸ್ಟಿಗೇಶನ್ ಆಗುತ್ತಿದೆ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕಿದ್ದು, ಕಂಪ್ಲೇಟ್ ಕೊಟ್ಟಿರುವವರನ್ನು ಗೌರವಿಸಬೇಕು. ಅವರ ಧೈರ್ಯಕ್ಕೆ ಮೆಚ್ಚುಗೆ ಇದೆ ಎಂದರು.

ನಮ್ಮ ಸಹಕಾರಕ್ಕೆ ಅವರು ಬಂದರೆ ಎಂತಹ ತಿಮಿಂಗಲುಗಳನ್ನು ಹಿಡಿದು ಹಾಕಬೇಕಿದೆ. ದೊಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಡಿ. ಪ್ರತಿ ಜಿಲ್ಲೆಯಲ್ಲೂ ನಮ್ಮ ತಂಡ ಇದೆ. ಐದು ಜನರ ಮೇಲೆ ಎಫ್​ಐಆರ್​ ಆಗಿದೆ. ಪ್ರಶಾಂತ್ ಎನ್ನುವ ಅಕೌಂಟೆಂಟ್ ಜೊತೆಗೆ ಮೂರು ಜನ ಲಂಚ ಕೊಡುವವರು ಇದ್ದರು. ದುಡ್ಡು ಕೊಟ್ರೆ ಟೆಂಡರ್ ಮಾಡಿಕೊಡ್ತಿವಿ ಅಂತ ಹೇಳಿದ್ರು ಎಂದು ದೂರುದಾರರು ದೂರು ಕೊಟ್ಟಿದ್ದಾರೆ. ಯಾರು ಅಮೌಂಟ್ ಸ್ವೀಕಾರ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಶಾಸಕ ಪುತ್ರ ಪ್ರಶಾಂತ್ ಮಾಡಾಳ್​ಗೆ 14 ದಿನ ನ್ಯಾಯಾಂಗ ಬಂಧನ

ಲಂಚ ಸ್ವೀರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್​ಗೆ 14 ದಿನ ನ್ಯಾಯಾಂಗ ಬಂಧನವಾಗಿದೆ. ಪ್ರಶಾಂತ್ ಸೇರಿದಂತೆ ಐವರರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಲೋಕಾಯುಕ್ತ ಕೋರ್ಟ್ (Bangalore lokayukta court)​ ಆದೇಶ ಹೊರಡಿಸಿದೆ. ನಿನ್ನೆ(ಮಾ.02) ಸಂಜೆ ಬೆಂಗಳೂರಿನ ಕ್ರಸೆಂಟ್​ ರಸ್ತೆಯಲ್ಲಿರುವ ಕಚೇರಿಯಲ್ಲಿ ವ್ಯಕ್ತಿಯಿಂದ 40 ಲಕ್ಷ ರೂ ನಗದು ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

ನಿನ್ನೆ (ಮಾ.02) ಸಂಜೆ ಪ್ರಶಾಂತ್​ನನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೂ ರೇಡ್ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖಾ ಹಂತ ಪೂರ್ಣಗೊಂಡ ನಂತರ ಲೋಕಾಯುಕ್ತ ಅಧಿಕಾರಿಗಳು ತಮ್ಮ ಕಷ್ಟಡಿಗೆ ಕೇಳುವ ಸಾಧ್ಯತೆಗಳಿವೆ. ಸದ್ಯ ಪ್ರಶಾಂತ್ ಮಾಡಾಳ್ ಸೇರಿ ಐವರಿಗೂ 14 ದಿನಗಳ ಕಾಲ ಜೈಲು ಫಿಕ್ಸ್.

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಸ್​ಡಿಎಲ್​ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಟೆಂಡರ್​ವೊಂದಕ್ಕೆ ಸಂಬಂಧಿಸಿದಂತೆ 80 ಲಕ್ಷ ಕಮಿಷನ್​​ ಕೇಳಿದ್ದರು. ಈ ಪೈಕಿ ಮುಂಗಡವಾಗಿ ಪ್ರಶಾಂತ್ 40 ಲಕ್ಷ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು. ಬಳಿಕ BWSSB ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್‌ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದರು. ಈ ವೇಳೆ ಬರೊಬ್ಬರಿ ಒಟ್ಟು 7 ಕೋಟಿ 62 ಲಕ್ಷ ರೂ. ಹಣ ಪತ್ತೆಯಾಗಿದೆ. ಹಾಗೇ ಪ್ರಶಾಂತ್ ಮಾಡಾಳ್​​​ ಸೇರಿ ಐವರನ್ನು ಬಂಧಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:35 am, Fri, 3 March 23