ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ; ನೊಂದ ಮಹಿಳೆಯ ತಂದೆ ಸವಾಲು

ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ವಂಚನೆಗೊಳಗಾದ ಯುವತಿಯ ತಂದೆ ಲೋಕೇಶ್ ಸವಾಲು ಹಾಕಿದ್ದಾರೆ. ವಾಲ್ಮೀಕಿ ಪೀಠದ ಸ್ವಾಮೀಜಿ ಮಾತುಕತೆಗೆ ಕರೆದಿದ್ದರು. ಬೆಂಗಳೂರಿನ ಹೋಟೆಲೊಂದರಲ್ಲಿ ಮಾತುಕತೆಯಲ್ಲಿ ರವಿ ಚನ್ನಣ್ಣನವರ್ ಕೂಡ ಇದ್ದರು.

ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ; ನೊಂದ ಮಹಿಳೆಯ ತಂದೆ ಸವಾಲು
ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ; ನೊಂದ ಮಹಿಳೆಯ ತಂದೆ ಸವಾಲು
Follow us
TV9 Web
| Updated By: ಆಯೇಷಾ ಬಾನು

Updated on:Apr 27, 2022 | 3:38 PM

ಬೆಂಗಳೂರು: ರವಿ ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಡಿ ಚೆನ್ನಣ್ಣವರ್ ವಿರುದ್ಧ ಅವರ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆ ದೂರು ದಾಖಲಿಸಿದ್ದಾರೆ. ರೋಜಾ ಎಂಬ ಮಹಿಳೆಯನ್ನ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಆರೋಪ ಮಾಡಿದ್ದಾರೆ. 2015 ರಲ್ಲಿ ರಾಘವೇಂದ್ರ ಡಿ ಚೆನ್ನಣ್ಣವರ್ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿ ಬಿಟ್ಟು ರುಕ್ಮಿಣಿ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ಆರೋಪಿಸಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದು ಕೊಲ್ಲುವ ಬೆದರಿಕೆ ಹಾಕಲಾಗಿದೆ. ಹೀಗೆಂದು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ರವಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ವಂಚನೆಗೊಳಗಾದ ಯುವತಿಯ ತಂದೆ ಲೋಕೇಶ್ ಸವಾಲು ಹಾಕಿದ್ದಾರೆ. ವಾಲ್ಮೀಕಿ ಪೀಠದ ಸ್ವಾಮೀಜಿ ಮಾತುಕತೆಗೆ ಕರೆದಿದ್ದರು. ಬೆಂಗಳೂರಿನ ಹೋಟೆಲೊಂದರಲ್ಲಿ ಮಾತುಕತೆಯಲ್ಲಿ ರವಿ ಚನ್ನಣ್ಣನವರ್ ಕೂಡ ಇದ್ದರು. ಸ್ವಾಮೀಜಿಗಳ ಮುಂದೆಯೇ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಹೋಗಿ ಅಂದರು. ವರದಕ್ಷಿಣೆ ಕೂಡ ಕೊಟ್ಟಿದ್ದೇವೆ, ರವಿ ಚನ್ನಣ್ಣನವರ್ ಅಂಥ ಮಾತು ಹೇಳಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಯುವತಿಯ ತಂದೆ ಲೋಕೇಶಪ್ಪ ಸವಾಲು ಹಾಕಿದ್ದಾರೆ.

ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೋವು ಕೊಟ್ಟಿದ್ದಾರೆ. ಅನೈತಿಕ ಸಂಬಂಧ ಇಟ್ಟುಕೊಂಡಿರುವ ಇನ್ನೊಬ್ಬಳ ಜೊತೆ ನಾನು ಇರಬೇಕಂತೆ. ಕಾಂಟ್ರಾಕ್ಟ್ ಮಾಡ್ತಾನೆ, ಇಂದ್ರ ಚಂದ್ರ ಅಂತ ನಮ್ಮ ಮನೆ ಬಾಗಿಲಿಗೆ ಬಂದು ಮದುವೆ ಮಾಡಿಕೊಂಡಿದ್ದಾರೆ. ರವಿ ಚನ್ನಣ್ಣನವರ್ ಅವರದೇ ಮಗಳೋ ತಂಗಿ ಆಗಿದ್ರೆ ಈ ಮಾತನ್ನು ಹೇಳ್ತಿದ್ರಾ? ಎಂದು ಯುವತಿ ರೋಜಾ ಕಣ್ಣೀರು ಹಾಕಿದ್ದಾರೆ.

IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ- ಶಿವಮೊಗ್ಗ ಮಹಿಳೆ ದೂರು ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ (IPS officer Ravi Channannavar) ಸಹೋದರ ರಾಘವೇಂದ್ರ ಡಿ. ಚೆನ್ನಣ್ಣವರ್ ವಿರುದ್ದ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು (Shivamogga woman) ಬೆಂಗಳೂರು ಪೊಲೀಸ್​ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ಹಿರಿಯ ಪೊಲೀಸ್​ ಸೂಪರಿಂಟೆಂಡೆಂಟ್ ರವಿ ಡಿ. ಚೆನ್ನಣ್ಣವರ್ ಅವರ ಸಹೋದರ ರಾಘವೇಂದ್ರ ಅವರ ಪತ್ನಿ ಎಂದು ಹೇಳಿಕೊಂಡ ರೋಜಾ ಎಂಬ ಹೆಸರಿನ ಸದರಿ ಮಹಿಳೆ ದೂರು ಸಲ್ಲಿಸಿದ್ದಾರೆ. ರೋಜಾ ಎಂಬುವ ಮಹಿಳೆಯನ್ನ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ರಾಘವೇಂದ್ರ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ರೋಜಾ ಆರೋಪ ಮಾಡಿದ್ದಾರೆ (Wedding).

2015 ರಲ್ಲಿ ರಾಘವೇಂದ್ರ ಡಿ ಚೆನ್ನಣ್ಣವರ್ ಜೊತೆ ನನ್ನ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿಯಾದ ನನ್ನನ್ನ ಬಿಟ್ಟುಬಿಟ್ಟು, ರುಕ್ಮಿಣಿ ಎಂಬುವ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ರೋಜಾ ಆರೋಪ ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದಿದ್ದಾರೆ. ಈ ಮಧ್ಯೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ವಿಷಯವನ್ನು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಅವರ ಗಮನಕ್ಕೂ ತಂದಿರುವೆ. ಆದರೆ ಅವರೂ ಹೊಸ ಹೆಂಡತಿಯ ಜೊತೆ ಹೊಂದಿಕೊಂಡು ಹೋಗು ಎಂದು ತನಗೆ ಹೇಳಿದ್ದಾಗಿ ರೋಜಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್

IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ- ಶಿವಮೊಗ್ಗ ಮಹಿಳೆ ದೂರು

Published On - 3:37 pm, Wed, 27 April 22