‘ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು’: ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಕಿಡಿಕಾರಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, 'ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು' ಎಂದು ಕಟುವಾಗಿ ಟೀಕಿಸಿ ಎಕ್ಸ್ ಪೋಸ್ಟ್ ಮೂಲಕ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಒಡಹುಟ್ಟಿದವನ ಕುಟುಂಬದ ಬೆಳವಣಿಗೆಯನ್ನೇ ನೀವು ಸಹಿಸಲಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಮ್ಮನ್ನು ಸಹಿಸಬಲ್ಲರೇ? ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 29: ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿ ಅವರಿಗೇ ಇಲ್ಲ. ಸಿದ್ದರಾಮಯ್ಯ ವಿಷಯವಿಟ್ಟುಕೊಂಡು ಒಮ್ಮೆ ಸಿಎಂ ಕಡೆ ಬೆರಳು ತೋರಿಸ್ತಾರೆ. ಮತ್ತೊಮ್ಮೆ ಸಚಿವ ಜಮೀರ್ ಅಹ್ಮದ್ ಕಡೆ, ಇನ್ನೊಮ್ಮೆ ನಮ್ಮ ಕುಟುಂಬದ ಕಡೆ ಕೈತೋರಿಸುತ್ತಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮನೆಮುರುಕತನ ಎನ್ನುತ್ತಾರೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
‘ಸಿದ್ದರಾಮಯ್ಯರನ್ನು ಅತಿ ಹೆಚ್ಚು ಅವಮಾನಿಸಿದವರು ಹೆಚ್ಡಿಕೆ’
“ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು!” — ಇದು ಮಾನ್ಯ ಕುಮಾರಸ್ವಾಮಿಯವರನ್ನು ವಿವರಿಸಬಹುದಾದ ಅತ್ಯುತ್ತಮ ಸಾಲುಗಳು.
ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿಯವರಿಗೇ ಇಲ್ಲ.
ಶ್ರೀ ಸಿದ್ದರಾಮಯ್ಯನವರ ವಿಷಯವನ್ನಿಟ್ಟುಕೊಂಡು ಒಮ್ಮೆ ಮಾನ್ಯ ಮುಖ್ಯಮಂತ್ರಿಗಳ ಕಡೆ ಬೆರಳು ತೋರಿಸುತ್ತಾರೆ, ಮತ್ತೊಮ್ಮೆ ಶ್ರೀ ಜಮೀರ್ ಅಹಮದ್ ಅವರ ಕಡೆ ಕೈ ತೋರಿಸುತ್ತಾರೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆ ಕೈ ತೋರಿಸುತ್ತಾರೆ.
ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ. “ಮನೆಮುರುಕತನ” ಎಂಬ ಪದದ ಅರ್ಥ ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ.
ಶ್ರೀ ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ.
ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ.
ಕುಮಾರಸ್ವಾಮಿಯವರೇ, ನಿಮ್ಮ ಐಟಿ ಸೆಲ್‌ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ? ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ನಮ್ಮವರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆಯನ್ನು ತೋರುತ್ತಿಲ್ಲವೇಕೆ? ವಿಡಿಯೋ ಅಪ್‌ಲೋಡ್ ಮಾಡಿದ್ದನ್ನು ವಿರೋಧಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು? ಮಾತನಾಡುತ್ತೀರಾ, ಕುಮಾರಣ್ಣಾ?
ಸ್ವತಃ ತಮ್ಮ ಸಹೋದರನ ಕುಟುಂಬದ ಬೆಳವಣಿಗೆಯನ್ನೂ ಸಹಿಸದ ಕುಮಾರಸ್ವಾಮಿಯವರು ನಮ್ಮನ್ನು ಸಹಿಸಬಲ್ಲರೇ?
ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ, ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 29, 2026
ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಕುಮಾರಸ್ವಾಮಿ ಮಾತ್ರ. ಸಿದ್ದರಾಮಯ್ಯಗೆ ಸಿಎಂ ಹುದ್ದೆ ತಪ್ಪಿಸಿದ್ದು ಯಾರಾದರೂ ಇದ್ದರೆ ಅದು ಅವರು ಮಾತ್ರ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ. ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ. ನಿಮ್ಮ ಐಟಿ ಸೆಲ್‌ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ? ನಮ್ಮವರ ಪಾತ್ರವಿಲ್ಲ ಎಂದು ಹೇಳುವ ನೈತಿಕತೆ ತೋರುತ್ತಿಲ್ಲವೇಕೆ? ವಿಡಿಯೋ ಅಪ್‌ಲೋಡ್ ಮಾಡಿದ್ದನ್ನು ನೀವು ವಿರೋಧಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು? ಮಾತನಾಡುತ್ತೀರಾ, ಕುಮಾರಣ್ಣಾ ಎಂದು ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಮಿಸ್ಟರ್ ಪ್ರಿಯಾಂಕ್… ಎಲ್ಲೂ ಹೋಗಲ್ಲ, ಬಂದು ನಿಮ್ಮ ಆಟ ಬಯಲು ಮಾಡ್ತೀನಿ: ಮತ್ತೆ ಸಿಡಿದ ಕುಮಾರಸ್ವಾಮಿ
‘ಕುಮಾರಸ್ವಾಮಿಯವರೇ ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ’
ಒಡಹುಟ್ಟಿದವನ ಕುಟುಂಬದ ಬೆಳವಣಿಗೆಯನ್ನೇ ನೀವು ಸಹಿಸಲಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಮ್ಮನ್ನು ಸಹಿಸಬಲ್ಲರೇ? ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ. ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:54 pm, Thu, 29 October 26




