ಲುಲು ಮಾಲ್​ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಯಲು, ವೀಕೆಂಡ್ ಬಂದ್ರೆ ಸಾಕು ಈತನಿಗೆ ಅದೇ ಕೆಲಸ

Bengaluru Lulu Mall groping case: ಬೆಂಗಳೂರಿನ ಲುಲು ಮಾಲ್​ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಇದೀಗ ಕೋರ್ಟ್​ಗೆ ಬಂದು ಶರಣಾಗಿದ್ದು, ಆತ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ಈತನನ್ನು ವಿಚಾರಣೆಗೊಳಡಿಸಿದಾಗ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಟಾಬಯಲಾಗಿವೆ.

ಲುಲು ಮಾಲ್​ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಯಲು, ವೀಕೆಂಡ್ ಬಂದ್ರೆ ಸಾಕು ಈತನಿಗೆ ಅದೇ ಕೆಲಸ
Follow us
Jagadish PB
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2023 | 8:16 AM

ಬೆಂಗಳೂರು, (ನವೆಂಬರ್ 04): ಬೆಂಗಳೂರಿನ ಲುಲು ಮಾಲ್​ನಲ್ಲಿ (Bengaluru Lulu Mall )ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ವಿಡಿಯೋ ವೈರಲ್​ ಆಗಿದ್ದು, ಇದೀಗ ಆ ವ್ಯಕ್ತಿ ಕೋರ್ಟ್​ಗೆ ಬಂದು ಶರಣಾಗಿದ್ದಾನೆ. ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಆಗಿರುವ ಅಶ್ವಥ್ ನಾರಾಯಣ (60) ಎನ್ನುವಾತನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಚಪಲ ಚನ್ನಿಗನ ಒಂದೊಂದೇ ಕೃತ್ಯಗಳು ಬಟಾಬಯಲಾಗಿವೆ.

ಪ್ರತೀ ವೀಕೆಂಡ್ ನಲ್ಲೂ ಆತನಿಗೆ ಇದೇ ದಂಧೆಯಾಗಿ ಮಾಡಿಕೊಂಡಿದ್ದ. ಅದರಂತೆ ಅಕ್ಟೋಬರ್ 29ರಂದು ಭಾನುವಾರ ಸಂಜೆ ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ಯುವತಿಯೋರ್ವಳ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಸಹ್ಯವಾಗಿ ವರ್ತಿಸಿದ್ದ. ಕೇವಲ ಈ ಯುವತಿ ಮಾತ್ರವಲ್ಲದೇ ಅಂದು ಅದೇ ಮಾಲ್ ನಲ್ಲಿ ಐದಾರು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಮಾಲ್​ನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಶ್ವಥ್ ನಾರಾಯಣನ ಚಪಲದ ಚಟ ಬಯಲಿಗೆ ಬಂದಿದೆ.

ಇದನ್ನೂ ಓದಿ: ಲುಲು ಮಾಲ್​ನಲ್ಲಿ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ವ್ಯಕ್ತಿಯ ಗುರುತು ಪತ್ತೆ

ಬರೋಬ್ಬರಿ ಮೂರು ತಾಸು ಡ್ಯೂರೇಷನ್ ನ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದು, ಲುಲು ಮಾಲ್​ನ ಪರಿಶೀಲನೆ ವೇಳೆ ಘಟನೆಯ ದಿನ ಐದಾರು ಯುವತಿಯರ ಜೊತೆ ಅನುಚಿತ ವರ್ತನೆ ಮಾಡಿದ್ದಾನೆ. ಈ ಚಪಲ ಚೆನ್ನಿಗರಾಯನಿಗೆ ವೀಕೆಂಡ್ ಬಂತು ಅಂದ್ರೆ ಸಾಕು​ ಮನೆಗೆ ಹೋಗುತ್ತಿರಲಿಲ್ಲ. ಬರೀ ಮಾಲ್​ಗೆ ಹೋಗುವುದು ಮಹಿಳೆ ಹಾಗೂ ಯುವತಿರಿಗೆ ಡಿಕ್ಕಿ ಹೊಡೆಯುವುದು ಹಾಗೂ ಅವರ ದೇಹವನ್ನು ಮುಟ್ಟಿ ಆನಂದ ಪಡುವುದೇ ಈತನ ಕೆಲಸ. ಹೀಗಾಗಿ ಬೇರೆ ಬೇರೆ ಮಾಲ್ ಗಳಲ್ಲೂ ಈ ಹಿಂದೆ ಇದೇ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದ ಹಲವು ಮಾಲ್ ಗಳ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕ,ಹೆಡ್ ಮಾಸ್ಟರ್ ಆಗಿದ್ದ ಅಶ್ವಥ ನಾರಾಯಣ ಒಳ್ಳೆಯ ಸಿಂಗರ್ ಆಗಿದ್ದ. ಆದ್ರೆ ಮಾಲ್ ನ ಸಿಸಿಟಿವಿ ಪರಿಶೀಲನೆ ವೇಳೆ ನಿವೃತ್ತ ಶಿಕ್ಷಕನ ಅಸಲಿ ಆಟ ಬಟಾಬಯಲಾಗಿದೆ. ಸದ್ಯ ಆರೋಪಿ ಕೋರ್ಟ್ ಗೆ ಬಂದು ಶರಣಾಗಿದ್ದು, ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ