AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madras Eye: ಶೀತಗಾಳಿ ಪ್ರಭಾವ ಬೆನ್ನಲ್ಲೇ ಮದ್ರಾಸ್ ಐ ಸೋಂಕು ಹೆಚ್ಚಳ: ಮಕ್ಕಳೇ ಟಾರ್ಗೆಟ್​

ಬೆಂಗಳೂರಿನಲ್ಲಿ ಶೀತಗಾಳಿ ಮತ್ತು ತೇವಾಂಶದಿಂದಾಗಿ ಮದ್ರಾಸ್ ಐ ಕಣ್ಣಿನ ಸೋಂಕು ಹೆಚ್ಚಾಗಿದೆ, ವಿಶೇಷವಾಗಿ ಮಕ್ಕಳಲ್ಲಿ. ಇದು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದು, ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸಲು ಸೂಚಿಸಿದ್ದಾರೆ.

Madras Eye: ಶೀತಗಾಳಿ ಪ್ರಭಾವ ಬೆನ್ನಲ್ಲೇ ಮದ್ರಾಸ್ ಐ ಸೋಂಕು ಹೆಚ್ಚಳ: ಮಕ್ಕಳೇ ಟಾರ್ಗೆಟ್​
ಪ್ರಾತಿನಿಧಿಕ ಚಿತ್ರ
Vinay Kashappanavar
| Edited By: |

Updated on: Jan 03, 2026 | 6:58 PM

Share

ಬೆಂಗಳೂರು, ಜನವರಿ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಚಳಿಗಾಲ (Cold Wave) ಜೊತೆ ಕೆಲ ದಿನಗಳಿಂದ ಶೀತಗಾಳಿ ಹೆಚ್ಚಳವಾಗಿದ್ದು, ತೇವಾಂಶದ ವಾತಾವರಣದಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಐ (Madras Eye) ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪೋಷಕರಿಗೆ ಎಚ್ಚರಿಕೆ ನೀಡಿದ ವೈದ್ಯರು

ಬೆಂಗಳೂರಿನಲ್ಲಿ ಚಳಿಯಿಂದ ಹಾಗೂ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್‌ ಐ ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಶಾಲಾ ಮಕ್ಕಳಲ್ಲಿಯೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಹವಮಾನ, ಚಳಿ ಹೆಚ್ಚಾಗಿರುವ ಕಾರಣ ಮಕ್ಕಳಿಗೆ ಮದ್ರಾಸ್ ಐ ಶುರುವಾಗಿದೆ. ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಸಲಹೆ ನೀಡಿದ್ದಾರೆ. ಆರೊಗ್ಯ ಇಲಾಖೆ ಕೂಡ ಮದ್ರಾಸ್ ಐ ಬಗ್ಗೆ ಕೆಲವು ಸಲಹೆಗಳನ್ನ ನೀಡಿದೆ.

ಮದ್ರಾಸ್ ಐ ಲಕ್ಷಣಗಳು ಏನು?

  • ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಕಣ್ಣಿನಲ್ಲಿ ಉರಿ, ಸೋಂಕು ಉಂಟಾಗುತ್ತದೆ.
  • ಧೂಳು, ಅಲರ್ಜಿಗಳು, ಮಾಲಿನ್ಯ ಇವುಗಳಿಂದಲೂ ಈ ಅಲರ್ಜಿ ಸಮಸ್ಯೆ ಬರಬಹುದು.
  • ಇದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸೋಂಕಾಗಿದೆ.
  • ಕಣ್ಣುಗಳು ಕೆಂಪಾಗುವುದು, ಸುಡುವಂತಾಗುವುದು.
  • ಕಣ್ಣಿನಲ್ಲಿ ಮುರಳು, ಕಿಚ್ಚು ಹಾಗೂ ಜಲಸ್ರಾವವಾಗುವುದು.
  • ರೆಪ್ಪೆಗಳು ಅಂಟಿಕೊಳ್ಳುವುದು (ಬೆಳಿಗ್ಗೆ ವಿಶೇಷವಾಗಿ)
  • ಬೆಳಕಿಗೆ ನೋವು, ಕಣ್ಣು ಮಿಡಿಯುವುದು.

ಪರಿಹಾರ ಏನು?

  • ಗುಣಮುಖವಾಗುವವರೆಗೂ ಸಾಬೂನು ಬಳಸಿ ಕೈಗಳನ್ನು ಪದೇಪದೇ ತೊಳೆಯಿರಿ.
  • ಕಣ್ಣಿನ ವೈದ್ಯರು ಸೂಚಿಸಿದ ಔಷಧಿ, ಐಡ್ರಾಪ್ಸ್ ನಿಯಮಿತವಾಗಿ ಬಳಸುವುದು.
  • ಕಣ್ಣುಗಳನ್ನು ಸ್ವಚ್ಛವಾಗಿಡುವುದು.
  • ಬಳಸಿದ ಟಿಶ್ಯೂ, ಕಾಟನ್‌ನ್ನು ತಕ್ಷಣ ತ್ಯಜಿಸುವುದು.
  • ಸೋಂಕಿತ ವ್ಯಕ್ತಿಯಿಂದ ಸ್ವಲ್ಪ ದೂರವಿರುವುದು.

ಏನು ಮಾಡಬಾರದು? 

  • ಗುಣಮುಖರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ.
  • ಕಣ್ಣಿಗೆ ವಿಶ್ರಾಂತಿ ಇಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡ.
  • ಅನಗತ್ಯ ಕಣ್ಣುಗಳ ಉಜ್ಜುವುದು, ಮುಟ್ಟುವುದು ಬೇಡ.
  • ಸೋಂಕತರು ಬಳಸಿದ ಮೇಕಪ್, ಕಾಜಲ್, ಲೆನ್ಸ್ ಟವಲ್ ಬಳಕೆ ತಪ್ಪಿಸಿ.
  • ಮನೆ ಮದ್ದು ಬೇಡ.
  • ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಸಬೇಡಿ.

ಶೀತಗಾಳಿಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಚಳಿ ವಾತಾವರಣದಿಂದ ಈ ವೈರಾಣು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಮದ್ರಾಸ್ ಐ ಏರಿಕೆಯಾಗಿದೆ. ನಿರ್ಲಕ್ಷ್ಯ ವಹಿಸದಂತೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಶಾಲೆಗೆ ಕಳಿಸದ್ದಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಕಳೆದ ಎರಡು ವಾರದಿಂದ ನಿರಂತರವಾಗಿ ವಾತವರಣದ ತೇವಾಂಶ ಹಾಗೂ ಚಳಿಯಿಂದ ಕಣ್ಣಿನ ಸೋಂಕು ಹೆಚ್ಚಾಗಿದೆ, ಅದರಲ್ಲೂ ಮದ್ರಾಸ್ ಐಗೆ ಮಕ್ಕಳು ಟಾರ್ಗೆಟ್ ಆಗಿದ್ದು, ಮಳೆಗಾಲ ಮುಗಿಯುವರೆಗೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.