ಬೆಂಗಳೂರು: ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ಸ್ಟೇಬಲ್ಗಳ ಅಮಾನತುಗೊಳಿಸಿ(Constables Suspend) ವೈಟ್ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ಮಹದೇವಪುರ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್ಟೇಬಲ್ ಎ.ಎನ್.ಜಯರಾಮ್ ಅಮಾನತುಗೊಂಡವರು(Mahadevapura Police Station). ಡಿಸಿಪಿ ಗಸ್ತು ವೇಳೆ ನಿದ್ರೆಯಲ್ಲಿದ್ದ ಮಹದೇವಪುರ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಕಾನ್ಸ್ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್ಟೇಬಲ್ ಎ.ಎನ್.ಜಯರಾಮ್ ರಾತ್ರಿ ಪಾಳಿಯಲ್ಲಿದ್ದರು. ಕರ್ತವ್ಯದ ವೇಳೆ ಕಣ್ಣಿಗೆ ನಿದ್ರೆ ತಾಕಿ ನಿದ್ದೆ ಮಾಡಿದ್ದಾರೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಠಾಣೆಗೆ ಭೇಟಿ ನೀಡಿದ್ದಾರೆ. ಆಗ ಇಬ್ಬರು ಪೇದೆಗಳು ನಿದ್ರಿಸುತ್ತಿರುವುದನ್ನು ಕಂಡು ವೈಟ್ಫೀಲ್ಡ್ ಡಿಸಿಪಿಗೆ ವರದಿ ನೀಡಿದ್ದಾರೆ. ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ಕಾನ್ಸ್ಟೇಬಲ್ಗಳ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 30 ವರ್ಷ ಜೈಲು
ಬೆಂಗಳೂರು: ಚಾಕು ತೋರಿಸಿ ಸುಲಿಗೆ ಮಾಡ್ತಿದ್ದ, ಬೈಕ್ ನಲ್ಲಿ ಬರ್ತಾ ಮೊಬೈಲ್ ಚಿನ್ನದ ಸರ ಕ್ಷಣಮಾತ್ರದಲ್ಲಿ ಎಗರಿಸಿಬಿಡ್ತಿದ್ದ ಯಾಸರ್ ಅಲಿಯಾಸ್ ಘೋರ್ ಎಂಬ ಖದೀಮನ ಮೇಲೆ ಪೊಲೀಸ್ ತುಪಾಕಿ ಘರ್ಜಿಸಿದೆ.
ಬೆಳಗ್ಗೆ 3 ಗಂಟೆಗೆ ಎದ್ದು ಡ್ರಗ್ಸ್ ತಗೊಂಡು ಫೀಲ್ಡಿಗೆ ಇಳಿದ್ರೆ ಮುಗೀತು. ಸಂಜೆ 6 ಗಂಟೆವರೆಗು ರಾಬರಿ ಮಾಡ್ತಿದ್ದ. ಒಂದು ವೇಳೆ ಹಣ ಕೊಡಲಿಲ್ಲ ಅಂದರೆ ಚಾಕು ತೋರಿಸಿ ಹೆದರಿಸ್ತಿದ್ದ. ಹೀಗೆ ಇತ್ತೀಚೆಗೆ ವೈಯಾಲಿಕಾವಲ್ ನಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಮೊಬೈಲ್ ಫೋನ್ ಎಗರಿಸಿದ್ದ. ಇಷ್ಟೇ ಅಲ್ಲ ಹಾಲಿನ ವ್ಯಾಪಾರಿಗೆ ಚಾಕು ತೋರಿಸಿ 13 ಸಾವಿರ ಹಣ ಸುಲಿಗೆ ಮಾಡಿದ್ದ. ಹೀಗೆ ವಿವಿಧ ಠಾಣೆಗಳಲ್ಲಿ ಮೊಬೈಲ್ ಕಳ್ಳತನ, ರಾಬರಿ, ಸುಲಿಗೆನಂತಹ 6 ಕ್ಕೂ ಹೆಚ್ಚು ಪ್ರಕರಣಗಳು ಇವನ ಮೇಲೆ ದಾಖಲಾಗಿದ್ವು. ಯಾವಾಗ ಈತನ ಉಪಟಳ ಹೆಚ್ಚಾಯ್ತೋ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಆರೋಪಿ ಪತ್ತೆಗೆ ವಿಶೇಷ ತಂಡವೊಂದನ್ನ ರಚನೆ ಮಾಡಿದ್ರು. ಹೀಗೆ ಆರೋಪಿ ಯಾಸರ್ ಬೇಟೆಗೆ ಮುಂದಾಗಿದ್ದ ಶೇಷಾದ್ರಿ ಪುರಂ ಪೊಲೀಸರಿಗೆ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಆತನ ಸಹಚರ ಪತ್ತೆಯಾಗಿದ್ದ.
ಆತನ ಮಾಹಿತಿ ಮೇರೆಗೆ ಯಾಸರ್ ಅರಮನೆ ಮೈದಾನದಲ್ಲಿ ಅಡಗಿದ್ದಾನೆ ಅನ್ನೋದು ಗೊತ್ತಾಗಿತ್ತು. ಅಷ್ಟೇ ಅಲ್ಲ ಫೀಲ್ಡಿಗೆ ಇಳಿದು ರಾಬರಿಗೆ ತಯಾರಾಗಿದ್ದ. ಅಷ್ಟೊತ್ತಿಗೆ ಪೊಲೀಸರು ಆರೋಪಿಯನ್ನ ಸುತ್ತುವರೆದಿದ್ದರು. ಅಲ್ಲೂ ಬಾಲ ಬಿಚ್ಚಿದ ಆಸಾಮಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಶೇಷಾದ್ರಿ ಪುರಂ ಠಾಣೆ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ರು ಮಾತು ಕೇಳದಿದ್ದಾಗ ಬಲಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ