AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ ಪರಿಷತ್ ಕಲಾಪದಲ್ಲಿ ಕರ್ನಾಟಕ ಸಿಎಂಗೆ ಅವಮಾನ; ಬೊಮ್ಮಾಯಿ ದಾದಾಗಿರಿ ಹೆಚ್ಚಿದೆ ಎಂದ ಡಾ. ಮನಿಷಾ

ಕರ್ನಾಟಕ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿರಿಂದ ದಾದಾಗಿರಿ ಹೆಚ್ಚಿದೆ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎನ್ನುವ ಮೂಲಕ ಸಿಎಂ ಬೊಮ್ಮಾಯಿಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಎಂಎಲ್‌ಸಿ ಡಾ. ಮನಿಷಾ ಅಪಮಾನ ಮಾಡಿದ್ದಾರೆ.

ಮಹಾರಾಷ್ಟ್ರ ಪರಿಷತ್ ಕಲಾಪದಲ್ಲಿ ಕರ್ನಾಟಕ ಸಿಎಂಗೆ ಅವಮಾನ; ಬೊಮ್ಮಾಯಿ ದಾದಾಗಿರಿ ಹೆಚ್ಚಿದೆ ಎಂದ ಡಾ. ಮನಿಷಾ
ಸಿಎಂ ಬಸವರಾಜ ಬೊಮ್ಮಾಯಿ
ಆಯೇಷಾ ಬಾನು
|

Updated on:Mar 23, 2023 | 10:18 AM

Share

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಮತ್ತೆ ಅಪಮಾನವಾಗಿದೆ. ಮಹಾರಾಷ್ಟ್ರ ಪರಿಷತ್ ಕಲಾಪದಲ್ಲಿ ಸಿಎಂ ಬೊಮ್ಮಾಯಿಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಎಂಎಲ್‌ಸಿ ಡಾ. ಮನಿಷಾ(Dr Manisha) ಅಪಮಾನ ಮಾಡಿದ್ದಾರೆ. ಕರ್ನಾಟಕ ಸರ್ಕಾರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿರಿಂದ ದಾದಾಗಿರಿ ಹೆಚ್ಚಿದೆ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎನ್ನುವ ಮೂಲಕ ಹಗುರವಾಗಿ ಮಾತನಾಡಿದ್ದಾರೆ.

ಕರ್ನಾಟಕದ ಗಡಿಭಾಗದಲ್ಲಿರುವ 865 ಹಳ್ಳಿಗಳಿಗೆ 54 ಕೋಟಿ ರೂ. ವೆಚ್ಚದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಹೇಳಿದ್ದರು. ಈ ಕುರಿತು ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪದಲ್ಲಿ ಚರ್ಚೆ ಮಾಡುವಾಗ ಶಿವಸೇನೆ ಉದ್ಧವ್ ಠಾಕ್ರೆ ಬಣದ ಎಂಎಲ್‌ಸಿ ಡಾ. ಮನಿಷಾ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕ ಸಿಎಂ ಹಾಗೂ ಕರ್ನಾಟಕ ಸರ್ಕಾರದ ಬಗ್ಗೆ ಡಾ.ಮನಿಷಾ ಹಗುರವಾದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿಯನ್ನು ನಾಯಿಮರಿಗೆ ಹೋಲಿಕೆ ಮಾಡಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ: J.P.ನಡ್ಡಾ

ಕರ್ನಾಟಕ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿಯ ದಾದಾಗಿರಿ ಹೆಚ್ಚಾಗಿದೆ. ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿ, ಮರಾಠಿ ಮಾತನಾಡಲು ಬಿಡುತ್ತಿಲ್ಲ. ಗಡಿಭಾಗದ 865 ಹಳ್ಳಿಗಳಿಗೆ ಕೇವಲ 54 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಯೋಜನೆ ನೀಡಲಾಗಿದೆ. ಉಭಯ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಇದೆ. ನಾವು ನಮ್ಮ ಜನರಿಗೆ ಅನುದಾನ ನೀಡುತ್ತಿದ್ದೇವೆ. ಅದನ್ನು ಪ್ರಶ್ನೆ ಮಾಡಲು ಕರ್ನಾಟಕ ಸಿಎಂಗೆ ಎಷ್ಟು ಧೈರ್ಯ ಇದೆ? ಸುಪ್ರೀಂಕೋರ್ಟ್​ನಲ್ಲಿ ಕೇಸ್​ ಇನ್ನು ಬಾಕಿ ಇದೆ. ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಈ ಹಿಂದೆಯೂ ಸಿಎಂ ಬೊಮ್ಮಾಯಿಗೆ ಅವಮಾನ

ಕೆಲ ತಿಂಗಳ ಹಿಂದೆ ಕೂಡ ಸಿಎಂ ಬೊಮ್ಮಾಯಿಗೆ ಮಹಾ ನಾಯಕರು ಅವಮಾನ ಮಾಡಿದ್ದರು. ಎನ್​​​​ಸಿಪಿ ನಾಯಕ, ಮಾಜಿ ಸಚಿವ ಜಯಂತ್​​ ಪಾಟೀಲ್​ ಕಲಾಪದಲ್ಲಿ ಉದ್ಧಟತನದ ಹೇಳಿಕೆ ನೀಡಿದ್ದರು. ಬೊಮ್ಮಾಯಿಗೆ ಮಸ್ತಿ ಹೆಚ್ಚಾಗಿದೆ. ಅವರ ಭಾಷೆಯಲ್ಲೇ ಉತ್ತರಿಸಿ. ಶಾಸಕ ಹಸನ್​ ಮುಶ್ರಫ್​ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಉದ್ದೇಶ ಪೂರ್ವಕವಾಗಿ ಮರಾಠಿಗರಿಗೆ ಕಿರುಕುಳ ನೀಡಲಾಗ್ತಿದೆ. ಬೆಳಗಾವಿಯಲ್ಲಿ ಮರಾಠಿಗರು ಹೊರಬರದ ಸ್ಥಿತಿ ನಿರ್ಮಾಣ ಆಗಿದೆ ಎಂದು ಬೊಮ್ಮಾಯಿ ಅವರನ್ನ ಅವಮಾನಿಸಿದ್ದರು.  ಇದಲ್ಲದೆ ನವೆಂಬರ್ ತಿಂಗಳಲ್ಲಿ ಗಡಿ ವಿವಾದ ಜೋರಾದಾಗ ಸಿಎಂ ಬೊಮ್ಮಾಯಿಯವರಿದ್ದ ಜಾಹಿರಾತು ಪೋಸ್ಟರ್​ಗಳಿಗೆ ಮಸಿ ಬಳಿಯಲಾಗಿತ್ತು.

ಬೆಳಗಾವಿ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Thu, 23 March 23