ರೈಲು ಪ್ರಯಾಣಿಕರಿಗೆ ಮಕರ ಸಂಕ್ರಾಂತಿಗೆ ಸಿಹಿಸುದ್ದಿ: ಬೆಂಗಳೂರಿನಿಂದ ಊರಿಗೆ ಹೋಗಲು ವಿಶೇಷ ರೈಲು
Makar Sankranti Special Trains: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಯಶವಂತಪುರ-ತಾಳಗುಪ್ಪ ಮಾರ್ಗದಲ್ಲಿ ಹೊಸ ರೈಲುಗಳ ಜೊತೆಗೆ ಬೆಂಗಳೂರು-ಬೀದರ್ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಹಬ್ಬದ ರಜಾ ದಿನಗಳಲ್ಲಿ ಹೆಚ್ಚುವರಿ ಜನದಟ್ಟಣೆ ನಿಭಾಯಿಸಲು ಮತ್ತು ಸಾವಿರಾರು ಪ್ರಯಾಣಿಕರಿಗೆ ಸುಗಮ ಪ್ರಯಾಣ ಒದಗಿಸಲು ಈ ರೈಲುಗಳು ನೆರವಾಗಲಿವೆ.

ಬೆಂಗಳೂರು , ಜ.10: ಹೊಸ ವರ್ಷ ಆರಂಭ ಆಗುತ್ತಿದ್ದಂತೆ, ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ತುಂಬಾ ವಿಶೇಷವಾಗಿದೆ. ಮಕರ ಸಂಕ್ರಾಂತಿ ದಕ್ಷಿಣ ಭಾರತಕ್ಕೆ ಮಾತ್ರವಲ್ಲದೆ. ಉತ್ತರ ಭಾರತಕ್ಕೂ ತುಂಬಾ ವಿಶೇಷವಾಗಿದೆ. ಶಬರಿಮಲೆ ಹೋಗುವ ಭಕ್ತರಿಗೂ ಈ ಹಬ್ಬ ಇನ್ನೂ ವಿಶೇಷವಾಗಿರುತ್ತದೆ. ಇನ್ನು ಮಕರ ಸಂಕ್ರಾಂತಿಗೆ ಊರಿಗೆ ಹೋಗಲು ಪ್ಲಾನ್ ಹಾಕಿಕೊಂಡವರಿಗೆ ಬಿಗ್ ಗುಡ್ನ್ಯೂಸ್ ಇದೆ. ಮಕರ ಸಂಕ್ರಾಂತಿ ಹಬ್ಬದ (Makar Sankranti special trains) ಪ್ರಯುಕ್ತ ವಿಶೇಷ ರೈಲುಗಳನ್ನು ಇಲಾಖೆ ಘೋಷಣೆ ಮಾಡಿದೆ. ಹಬ್ಬದಂದು ಆಗುವ ಜನದಟ್ಟಣೆಯನ್ನು ನಿರ್ವಹಿಸಲು ಮತ್ತು ಸಾವಿರಾರು ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಲು, ನೈಋತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ಸೇವೆಗಳನ್ನು ಘೋಷಿಸಿದೆ ಮತ್ತು ಬೆಂಗಳೂರು-ಬೀದರ್ ವಿಶೇಷ ರೈಲಿನ ವಿಸ್ತರಣೆಯನ್ನು ಘೋಷಿಸಿದೆ. ಶಿವಮೊಗ್ಗ, ಸಾಗರ, ತುಮಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಕೂಡ ಈ ರೈಲು ಭಾಗ್ಯ ಸಿಗಲಿದೆ.
ಸಂಕ್ರಾಂತಿ ರಜಾದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ನೈಋತ್ಯ ರೈಲ್ವೆ ಜನವರಿಯಲ್ಲಿ ಆಯ್ದ ದಿನಗಳಲ್ಲಿ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಸೇವೆಗಳು ಸಾಮಾನ್ಯ ರೈಲುಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣದ ದಿನಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಯಶವಂತಪುರ ಮತ್ತು ತಾಳಗುಪ್ಪ ನಡುವಿನ ವಿಶೇಷ ರೈಲುಗಳು ಜನವರಿ 13, 14, 23 ಮತ್ತು 24 ರಂದು ತನ್ನ ಸೇವೆಯನ್ನು ನೀಡಲಿದೆ ಎಂದು ಇಲಾಖೆ ಹೇಳಿದೆ. ಈ ದಿನಾಂಕಗಳು ಹಬ್ಬದ ಅವಧಿ ಹಾಗೂ ಮತ್ತೆ ಊರಿನಿಂದ ಬರುವವರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರು ಗಮನಿಸಿ: KSR ಟರ್ಮಿನಲ್ ಬದಲಾವಣೆ, ಹೊಸ ನಿಲ್ದಾಣಗಳು ಇಲ್ಲಿವೆ
ವಿಶೇಷ ರೈಲುಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
| ರೈಲು ಸಂಖ್ಯೆ | ಮಾರ್ಗ | ಸಂಚಾರದ ದಿನ | ನಿರ್ಗಮನ ಸಮಯ | ಆಗಮನದ ಸಮಯ |
| 06585 | ಯಶವಂತಪುರದಿಂದ ತಾಳಗುಪ್ಪಕ್ಕೆ | ಜನವರಿ 13, ಜನವರಿ 23 | ರಾತ್ರಿ 10:45 | ಮರುದಿನ ಬೆಳಿಗ್ಗೆ 4:45 ಕ್ಕೆ |
| 06586 / 06588 | ತಾಳಗುಪ್ಪದಿಂದ ಯಶವಂತಪುರಕ್ಕೆ | ಜನವರಿ 14, ಜನವರಿ 24 | ಬೆಳಿಗ್ಗೆ 10:00 | ಸಂಜೆ 5:15 |
ಈ ರೈಲು ರಾತ್ರಿ ಹಾಗೂ ಹಗಲಿನಲ್ಲಿ ಸಂಚಾರಿಸಲು ಅನುಕೂಲ ಆಗುವಂತೆ ಸಂಯೋಜಿಸಲಾಗಿದೆ. ಪ್ರಯಾಣಿಕರು ರಾತ್ರಿ ಪ್ರಯಾಣಿಸಲು ಬಯಸಿದ್ರೆ ಕೂಡ ರೈಲು ಸೇವೆ ಇದೆ. ಇನ್ನು ಹಗಲು ಹೊತ್ತು ಪ್ರಕೃತಿಯನ್ನು ವೀಕ್ಷಣೆ ಮಾಡಿಕೊಂಡು ಸಂಚಾರಿಸಬೇಕು ಎಂದು ಬಯಸಿದ್ರೆ ಆ ಅವಕಾಶ ಕೂಡ ಇದೆ. ಈ ವಿಶೇಷ ರೈಲುಗಳು ವಿವಿಧ ನಿಲ್ದಾಣಗಳಲ್ಲಿಯೂ ನಿಲುಗಡೆ ಆಗಲಿದೆ. ಇದರಿಂದ ಕರಾವಳಿ ಪ್ರಯಾಣಿಕರಿಗೂ ಕೂಡ ಅನುಕೂಲ ಆಗಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಪಟ್ಟಣ, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಇದೆ.
ಪಟ್ಟಣಗಳ ನಿವಾಸಿಗಳಿಗೆ, ಹಬ್ಬದ ಪ್ರಯಾಣವು ಸಾಮಾನ್ಯವಾಗಿ ಸೀಮಿತ ರೈಲು ಆಯ್ಕೆಗಳು ಅಥವಾ ಕಿಕ್ಕಿರಿದ ಬಸ್‌ಗಳು ಇರುವ ಕಾರಣ. ಈ ಹೆಚ್ಚುವರಿ ನಿಲ್ದಾಣಗಳು ವಿಶೇಷ ಸೇವೆಯನ್ನು ನೀಡಲಿದೆ. ತಾಳಗುಪ್ಪ ವಿಶೇಷ ರೈಲುಗಳ ಜೊತೆಗೆ, ನೈಋತ್ಯ ರೈಲ್ವೆಯು SMVT ಬೆಂಗಳೂರು ಮತ್ತು ಬೀದರ್ ನಡುವಿನ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಹಬ್ಬದ ಜನದಟ್ಟಣೆಯನ್ನು ನಿಭಾಯಿಸಲು, ಈ ಎರಡು ವಾರಗಳ ಸೇವೆಯು ಈಗ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಿಂದ ಬೀದರ್‌ಗೆ ರೈಲು ಜನವರಿ 2 ರಿಂದ ಫೆಬ್ರವರಿ 27 ರವರೆಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಕಾರ್ಯನಿರ್ವಹಿಸುತ್ತದೆ. ಬೀದರ್‌ನಿಂದ ಬೆಂಗಳೂರಿಗೆ ಹಿಂದಿರುಗುವ ಸೇವೆ ಜನವರಿ 3 ರಿಂದ ಫೆಬ್ರವರಿ 28 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರ ಕಾರ್ಯನಿರ್ವಹಿಸುತ್ತದೆ ಎಂದು ಇಲಾಖೆ ಹೇಳಿದೆ.
ಒಟ್ಟಾರೆಯಾಗಿ, ಈ ವಿಸ್ತರಣೆಯು 17 ಟ್ರಿಪ್‌ಗಳನ್ನು ಒಳಗೊಂಡಿದ್ದು, ಹಬ್ಬ ಮತ್ತು ಹಬ್ಬದ ನಂತರದ ಅವಧಿಯಲ್ಲಿ ಪ್ರಯಾಣಿಕರಿಗೆ ಒಳ್ಳೆಯ ಆಯ್ಕೆಯನ್ನು ನೀಡಲಿದೆ. ಸಮಯ, ನಿಲುಗಡೆಗಳು ಅಥವಾ ಕೋಚ್ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಪ್ರಯಾಣಿಕರು ಈ ವಿಚಾರವನ್ನು ಗಮನಿಸಲೇಬೇಕು. ಜ.16ರಿಂದ ಮಾ.11ರವರೆಗೆ ಕೆಲವು ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Sat, 10 January 26
