Bengaluru: ಕನ್ನಡ ಗೊತ್ತಿಲ್ಲ ಎಂದಿದ್ದಕ್ಕೆ ವ್ಯಕ್ತಿಯೋರ್ವನ ಜೊತೆ ಟ್ರಾಫಿಕ್​ ಪೊಲೀಸರ ಅನುಚಿತ ವರ್ತನೆ

|

Updated on: Apr 11, 2023 | 9:04 AM

ಕನ್ನಡದಲ್ಲಿ ಮಾತನಾಡದಿದ್ದಕ್ಕೆ ಚಾಲಕನೋರ್ವನ ಜೊತೆ ಟ್ರಾಫಿಕ್​ ಪೊಲೀಸ್​ ಒಬ್ಬರು ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ನಿನ್ನೆ (ಏ.10) ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಘಟನೆ ನಡೆದಿದೆ.

Bengaluru: ಕನ್ನಡ ಗೊತ್ತಿಲ್ಲ ಎಂದಿದ್ದಕ್ಕೆ ವ್ಯಕ್ತಿಯೋರ್ವನ ಜೊತೆ ಟ್ರಾಫಿಕ್​ ಪೊಲೀಸರ ಅನುಚಿತ ವರ್ತನೆ
ಟ್ರಾಫಿಕ್ ಪೊಲೀಸ್ (ಎಡಚಿತ್ರ) ಕಾರು ಚಾಲಕ (ಬಲಚಿತ್ರ)​
Follow us on

ಬೆಂಗಳೂರು: ಕನ್ನಡದಲ್ಲಿ (Kannada) ಮಾತನಾಡದಿದ್ದಕ್ಕೆ ಚಾಲಕನೋರ್ವನ ಜೊತೆ ಟ್ರಾಫಿಕ್​ ಪೊಲೀಸ್​ ಒಬ್ಬರು ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ನಿನ್ನೆ (ಏ.10) ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಘಟನೆ ನಡೆದಿದೆ. ಈ ಬಗ್ಗೆ ಕಾರು ಚಾಲಕ ಇಕ್ರಮ್​ ಅನ್ಸಾರಿ ತನಗೆ ಆದ ಅನ್ಯಾಯದ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಸಾಕಷ್ಟು ವೈರಲ್​ ಆಗುತ್ತಿದೆ. ಕಾರು​ ಪಾರ್ಕಿಂಗ್ (Car Parking)​ ವಿಚಾರಕ್ಕೆ ಟ್ರಾಫಿಕ್​ ಪೊಲೀಸ್​ ಮತ್ತು ಇಕ್ರಮ್​ ಅನ್ಸಾರಿ ನಡುವೆ ವಾಗ್ವಾದ ನಡೆದಿದೆ.

ಇಕ್ರಮ್​ ಅನ್ಸಾರಿ ಓರ್ವ ಜಿಮ್​ ತರಬೇತಿದಾರರಾಗಿದ್ದಾರೆ. ನಿನ್ನೆ ಇವರು ರಸ್ತೆ ಬದಿಯಲ್ಲಿ ಕಾರ್​ ಪಾರ್ಕಿಂಗ್​ ಮಾಡಿದ್ದಾರೆ. ಈ ವೇಳೆ ಟ್ರಾಫಿಕ್​ ಪೊಲೀಸ್​​ ಇಲ್ಲಿ ಕಾರ್​ ಪಾರ್ಕ್​ ಮಾಡಬಾರದು, ಇದು ನೋ ಪಾರ್ಕಿಂಗ್​ ಈಗ ದಂಡ ಕಟ್ಟಿ ಎಂದಿದ್ದಾರೆ. ಆಗ ಇಕ್ರಮ್​ ಅನ್ಸಾರಿ ಇಲ್ಲಿ ಎಲ್ಲೂ ನೋ ಪಾರ್ಕಿಂಗ್​ ಬೋರ್ಡ್​ ಇಲ್ಲ, ನಾನೇಕೆ ದಂಡ ಕಟ್ಟಲಿ ಎಂದು ಪ್ರಶ್ನಿಸಿದ್ದಾರೆ.

ಆಗ ಪೊಲೀಸ್ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಇಕ್ರಮ್​ ಅನ್ಸಾರಿ ಕನ್ನಡ ಗೊತ್ತಿಲ್ಲ ಎಂದಿದ್ದಾರೆ. ಹೀಗೆ ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿದ್ದು,​ ಕಾರ್​ ಡಾಕ್ಯೂಮೆಂಟ್ಸ್​​ ತೋರಿಸು ಎಂದು ಪೊಲೀಸ್​ ಕೇಳಿದ್ದಾರೆ. ಆಗ ಇಕ್ರಮ್​ ಅನ್ಸಾರಿ ನಾನೇಕೆ ನಿಮಗೆ ತೋರಿಸಲಿ, ನೀವು ಎಸ್‌ಐ ಅಥವಾ ಉನ್ನತ ಶ್ರೇಣಿ ಅಧಿಕಾರಿಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪೊಲೀಸ್ ಇದನ್ನು ​ಕೋರ್ಟ್​​ಲ್ಲಿ ಮಾತನಾಡು ಎಂದಿದ್ದಾರೆ.
ಘಟನೆಯ ಬಗ್ಗೆ ಅನ್ಸಾರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿವರವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

ಅವರು ಬರೆದಿದ್ದಾರೆ, ನಾನು ಕನ್ನಡವನ್ನು ಗೌರವಿಸುತ್ತೇನೆ ಮತ್ತು ಅದರ ಮೂಲಭೂತ ಅಂಶಗಳನ್ನು ತಿಳಿದಿದ್ದೇನೆ. ಟ್ರಾಫಿಕ್ ಕಾನೂನಿನ ಪ್ರಕಾರ, ಎಸ್‌ಐ ಅಥವಾ ಉನ್ನತ ಶ್ರೇಣಿಯ ಅಧಿಕಾರಿಯು ಮಾತ್ರ ನಿಮ್ಮ ಪೇಪರ್‌ಗಳನ್ನು ಕೇಳುವ ಹಕ್ಕನ್ನು ಹೊಂದಿರುತ್ತಾರೆ. ಘಟನೆ ವೇಳೆ ಟ್ರಾಫಿಕ್​ ಪೊಲೀಸ್​ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು ಎಂದು ಆರೋಪಿಸಿದರು.

ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರು ನನಗೆ ದಂಡ ವಿಧಿಸಿದರು ಆರೋಪದ ಮೇಲೆ ನಂತರ ದಂಡ ವಿಧಿಸಲಾಯಿತು ಎಂದು ಅನ್ಸಾರಿ ಹೇಳಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ