ಬೆಂಗಳೂರು: ಹಿಂದೂ ಕುಟುಂಬದಿಂದ ಅಮ್ಮಾಸ್ ಇಫ್ತಾರ್ ಪಾರ್ಟಿ, ಇದರ ಹಿಂದಿದೆ ಸಮುದಾಯ ಒಟ್ಟುಗೂಡಿಸುವ ಉದ್ದೇಶ

ಹಿಂದೂ ಮುಸ್ಲಿಮರ ನಡುವೆ ರಾಜ್ಯದಲ್ಲಿ ಶುರುವಾದ ಗಲಭೆಗಳಿಂದ ನೆಮ್ಮದಿ ಕಳೆದುಕೊಂಡಿದ್ದ ಹಿಂದೂ ಕುಟುಂಬ ಸತತ ಎರಡನೇ ವರ್ಷ ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಇಫ್ತಿಯಾರ್ ಕೂಟ ಆಯೋಜಿಸಿದೆ.

ಬೆಂಗಳೂರು: ಹಿಂದೂ ಕುಟುಂಬದಿಂದ ಅಮ್ಮಾಸ್ ಇಫ್ತಾರ್ ಪಾರ್ಟಿ, ಇದರ ಹಿಂದಿದೆ ಸಮುದಾಯ ಒಟ್ಟುಗೂಡಿಸುವ ಉದ್ದೇಶ
ಇಫ್ತಾರ್ ಔತಣಕೂಟ
Follow us
ಆಯೇಷಾ ಬಾನು
|

Updated on: Apr 11, 2023 | 8:02 AM

ಬೆಂಗಳೂರು: ಶನಿವಾರ ಸಂಜೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆಶೀರ್ವಾದ್ ಸೆಂಟರ್‌ನಲ್ಲಿ, ರಂಜಾನ್ ಹಿನ್ನೆಲೆ ಒಂದು ಕುಟುಂಬವು ಇಫ್ತಾರ್ ಔತಣಕೂಟವನ್ನು ಆಯೋಜಿಸಿತ್ತು. ಆದರೆ ಇದರಲ್ಲಿ ವಿಶೇಷವೆಂದರೆ ಇಫ್ತಾರ್ ಔತಣಕೂಟವನ್ನು ಆಯೋಜಿಸಿದ್ದು ಹಿಂದೂ ಫ್ಯಾಮಿಲಿ. ಹಿಂದೂ ಮುಸ್ಲಿಮರ ನಡುವೆ ರಾಜ್ಯದಲ್ಲಿ ಶುರುವಾದ ಗಲಭೆಗಳಿಂದ ನೆಮ್ಮದಿ ಕಳೆದುಕೊಂಡಿದ್ದ ಹಿಂದೂ ಕುಟುಂಬ ಸತತ ಎರಡನೇ ವರ್ಷ ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಇದನ್ನು ಆಯೋಜಿಸಿದ್ದಾರೆ.

ಈ ಔತಣಕೂಟವನ್ನು ಆಯೋಜಿಸಿದ್ದವರಲ್ಲಿ ಒಬ್ಬರಾದ ವೆಂಕಟ್, 2022 ರಲ್ಲಿ ರಾಮ ನವಮಿಯ ಸಮಯದಲ್ಲಿ ತಮಿಳುನಾಡಿನ ಯೆರ್ಕಾಡ್‌ಗೆ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಗಲಭೆ ಸ್ಫೋಟಗೊಂಡು ತಮ್ಮ ಪ್ರವಾಸವನ್ನು ಸರಿಯಾಗಿ ಮಾಡಲಾಗಲಿಲ್ಲ. ಇದು ರಾಮನ ಭಕ್ತೆಯಾದ ನನ್ನ ತಾಯಿ ಮೀನಾಕ್ಷಿ ಶ್ರೀನಿವಾಸನ್ ಅವರನ್ನು ಬಾಧಿಸುವಂತೆ ಮಾಡಿತ್ತು.

ಗಲಭೆ ಅಮ್ಮ ತುಂಬಾ ಡಿಸ್ಟರ್ಬ್​ ಆಗುವಂತೆ ಮಾಡಿತ್ತು. ಈ ಹಿಂಸೆಯು ಅವಳು ಪೂಜಿಸಿದ ರಾಮನ ಭಾಗವಾಗಿರಲಿಲ್ಲ, ಏಕೆಂದರೆ ಅವಳು ರಾಮನನ್ನು ಎಲ್ಲಾ ಜನರಲ್ಲೂ ಇರುವುದನ್ನು ನೋಡುತ್ತಾಳೆ. ಹಾಗಾಗಿ ಈ ಇಫ್ತಾರ್ ಹೇಳಿಕೆಯಲ್ಲ ಆತ್ಮಾವಲೋಕನ” ಎಂದು ವೆಂಕಟ್ ತಿಳಿಸಿದರು.

ಇದನ್ನೂ ಓದಿ: ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಡಿಕೆಶಿ; ಛಲವಾದಿ ನಾರಾಯಣಸ್ವಾಮಿ ಟಾಂಗ್​

ವೆಂಕಟ್ ಅವರು ಮತ್ತು ಅವರ ಸಹೋದರಿ ಬೆಳೆದ ರೀತಿಯು ವಿಶಾಲವಾದ ದೃಷ್ಟಿಕೋನವನ್ನು ನೀಡಿತು ಎಂದು ವೆಂಕಟ್ ಸ್ಮರಿಸಿಕೊಂಡಿದ್ದಾರೆ. ಕಲ್ಕತ್ತಾದಲ್ಲಿ ತಮಿಳು ಕುಟುಂಬ ಬೆಳೆಯುತ್ತಿರುವಾಗ, ನಾವು ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡುತ್ತೇವೆ ಮತ್ತು ನಮ್ಮ ನೆರೆಹೊರೆಯವರು ನಮಗೆ ಸಹಾಯ ಮಾಡುತ್ತಾರೆ. ಒಂದು ರೀತಿಯಲ್ಲಿ, ತಮಿಳಿಗರು ಬಂಗಾಳಿ ಮನೋಭಾವದಿಂದ ಬೆಳೆದಂತೆ ನಾವು ಗುರುತಿನ ನಡುವೆ ಮನಬಂದಂತೆ ಚಲಿಸುತ್ತೇವೆ ಎಂದರು.

2022 ರಲ್ಲಿ “ಅಮ್ಮಾಸ್ ಇಫ್ತಾರ್ ಪಾರ್ಟಿ” ನ ಮೊದಲ ಬಾರಿಗೆ ಆಯೋಜಿಸಿದ್ದಾಗ ಸುಮಾರು 65 ಜನರು ಭಾಗವಹಿಸಿದ್ದರು ಮತ್ತು ಈ ವರ್ಷ ಸುಮಾರು 110 ಜನರು ಭಾಗವಹಿಸುವ ನಿರೀಕ್ಷೆಯಿದೆ. ಈವೆಂಟ್‌ಗೆ ಊಟೋಪಚಾರವನ್ನು ಕರೀಮ್ಸ್ ರೆಸ್ಟೋರೆಂಟ್‌ನವರು ನೋಡಿಕೊಳ್ಳುತ್ತಾರೆ, ಇದು ಕಡಿಮೆ ದರದಲ್ಲಿ ಆಹಾರವನ್ನು ಒದಗಿಸಿತು ಮತ್ತು ಸಂಜೆಯ ಪ್ರಾರ್ಥನೆಯ ನಂತರ ಬರುವ ಅತಿಥಿಗಳು ತಮ್ಮ ಉಪವಾಸವನ್ನು ಮುರಿಯಲು ಬೇಕಾಗುವ ಹಣ್ಣು-ಹಂಪಲುಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ವೆಂಕಟ್ ವಿವರಿಸಿದರು. ಹಿಂದೂ ಮುಸ್ಲಿಮರ ನಡುವಿನ ಗಲಭೆ ದಿನದಿಂದ ದಿನಕ್ಕೆ ದಿಕ್ಕನ್ನು ಬದಲಾಯಿಸುತ್ತಿದೆ. ದ್ವೇಷ ಹುಟ್ಟುವಂತೆ ಮಾಡುತ್ತಿದೆ. ಆದ್ರೆ ಇಲ್ಲೊಂದು ಹಿಂದೂ ಕುಟುಂಬ ಸಮುದಾಯಗಳ ನಡುವೆ ಸ್ನೇಹ-ಸಂಬಂಧ ಗಟ್ಟಿ ಮಾಡಲು ಇಫ್ತಿಯಾರ್ ಕೂಟ ಆಯೋಜಿಸಿದೆ.

ಬೆಂಗಳೂರು ನಗರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ