AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಕನ್ನಡ ಗೊತ್ತಿಲ್ಲ ಎಂದಿದ್ದಕ್ಕೆ ವ್ಯಕ್ತಿಯೋರ್ವನ ಜೊತೆ ಟ್ರಾಫಿಕ್​ ಪೊಲೀಸರ ಅನುಚಿತ ವರ್ತನೆ

ಕನ್ನಡದಲ್ಲಿ ಮಾತನಾಡದಿದ್ದಕ್ಕೆ ಚಾಲಕನೋರ್ವನ ಜೊತೆ ಟ್ರಾಫಿಕ್​ ಪೊಲೀಸ್​ ಒಬ್ಬರು ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ನಿನ್ನೆ (ಏ.10) ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಘಟನೆ ನಡೆದಿದೆ.

Bengaluru: ಕನ್ನಡ ಗೊತ್ತಿಲ್ಲ ಎಂದಿದ್ದಕ್ಕೆ ವ್ಯಕ್ತಿಯೋರ್ವನ ಜೊತೆ ಟ್ರಾಫಿಕ್​ ಪೊಲೀಸರ ಅನುಚಿತ ವರ್ತನೆ
ಟ್ರಾಫಿಕ್ ಪೊಲೀಸ್ (ಎಡಚಿತ್ರ) ಕಾರು ಚಾಲಕ (ಬಲಚಿತ್ರ)​
Follow us
ವಿವೇಕ ಬಿರಾದಾರ
|

Updated on: Apr 11, 2023 | 9:04 AM

ಬೆಂಗಳೂರು: ಕನ್ನಡದಲ್ಲಿ (Kannada) ಮಾತನಾಡದಿದ್ದಕ್ಕೆ ಚಾಲಕನೋರ್ವನ ಜೊತೆ ಟ್ರಾಫಿಕ್​ ಪೊಲೀಸ್​ ಒಬ್ಬರು ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ನಿನ್ನೆ (ಏ.10) ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಘಟನೆ ನಡೆದಿದೆ. ಈ ಬಗ್ಗೆ ಕಾರು ಚಾಲಕ ಇಕ್ರಮ್​ ಅನ್ಸಾರಿ ತನಗೆ ಆದ ಅನ್ಯಾಯದ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಸಾಕಷ್ಟು ವೈರಲ್​ ಆಗುತ್ತಿದೆ. ಕಾರು​ ಪಾರ್ಕಿಂಗ್ (Car Parking)​ ವಿಚಾರಕ್ಕೆ ಟ್ರಾಫಿಕ್​ ಪೊಲೀಸ್​ ಮತ್ತು ಇಕ್ರಮ್​ ಅನ್ಸಾರಿ ನಡುವೆ ವಾಗ್ವಾದ ನಡೆದಿದೆ.

ಇಕ್ರಮ್​ ಅನ್ಸಾರಿ ಓರ್ವ ಜಿಮ್​ ತರಬೇತಿದಾರರಾಗಿದ್ದಾರೆ. ನಿನ್ನೆ ಇವರು ರಸ್ತೆ ಬದಿಯಲ್ಲಿ ಕಾರ್​ ಪಾರ್ಕಿಂಗ್​ ಮಾಡಿದ್ದಾರೆ. ಈ ವೇಳೆ ಟ್ರಾಫಿಕ್​ ಪೊಲೀಸ್​​ ಇಲ್ಲಿ ಕಾರ್​ ಪಾರ್ಕ್​ ಮಾಡಬಾರದು, ಇದು ನೋ ಪಾರ್ಕಿಂಗ್​ ಈಗ ದಂಡ ಕಟ್ಟಿ ಎಂದಿದ್ದಾರೆ. ಆಗ ಇಕ್ರಮ್​ ಅನ್ಸಾರಿ ಇಲ್ಲಿ ಎಲ್ಲೂ ನೋ ಪಾರ್ಕಿಂಗ್​ ಬೋರ್ಡ್​ ಇಲ್ಲ, ನಾನೇಕೆ ದಂಡ ಕಟ್ಟಲಿ ಎಂದು ಪ್ರಶ್ನಿಸಿದ್ದಾರೆ.

ಆಗ ಪೊಲೀಸ್ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಇಕ್ರಮ್​ ಅನ್ಸಾರಿ ಕನ್ನಡ ಗೊತ್ತಿಲ್ಲ ಎಂದಿದ್ದಾರೆ. ಹೀಗೆ ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿದ್ದು,​ ಕಾರ್​ ಡಾಕ್ಯೂಮೆಂಟ್ಸ್​​ ತೋರಿಸು ಎಂದು ಪೊಲೀಸ್​ ಕೇಳಿದ್ದಾರೆ. ಆಗ ಇಕ್ರಮ್​ ಅನ್ಸಾರಿ ನಾನೇಕೆ ನಿಮಗೆ ತೋರಿಸಲಿ, ನೀವು ಎಸ್‌ಐ ಅಥವಾ ಉನ್ನತ ಶ್ರೇಣಿ ಅಧಿಕಾರಿಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪೊಲೀಸ್ ಇದನ್ನು ​ಕೋರ್ಟ್​​ಲ್ಲಿ ಮಾತನಾಡು ಎಂದಿದ್ದಾರೆ. ಘಟನೆಯ ಬಗ್ಗೆ ಅನ್ಸಾರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿವರವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

ಅವರು ಬರೆದಿದ್ದಾರೆ, ನಾನು ಕನ್ನಡವನ್ನು ಗೌರವಿಸುತ್ತೇನೆ ಮತ್ತು ಅದರ ಮೂಲಭೂತ ಅಂಶಗಳನ್ನು ತಿಳಿದಿದ್ದೇನೆ. ಟ್ರಾಫಿಕ್ ಕಾನೂನಿನ ಪ್ರಕಾರ, ಎಸ್‌ಐ ಅಥವಾ ಉನ್ನತ ಶ್ರೇಣಿಯ ಅಧಿಕಾರಿಯು ಮಾತ್ರ ನಿಮ್ಮ ಪೇಪರ್‌ಗಳನ್ನು ಕೇಳುವ ಹಕ್ಕನ್ನು ಹೊಂದಿರುತ್ತಾರೆ. ಘಟನೆ ವೇಳೆ ಟ್ರಾಫಿಕ್​ ಪೊಲೀಸ್​ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು ಎಂದು ಆರೋಪಿಸಿದರು.

ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರು ನನಗೆ ದಂಡ ವಿಧಿಸಿದರು ಆರೋಪದ ಮೇಲೆ ನಂತರ ದಂಡ ವಿಧಿಸಲಾಯಿತು ಎಂದು ಅನ್ಸಾರಿ ಹೇಳಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ