ಅಕ್ರಮ ಸಂಬಂಧಕ್ಕೆ ತಿರುಗಿದ ಅಕ್ಕ ತಮ್ಮನ ಸಂಬಂಧ: ಪತ್ನಿಯ ನವರಂಗಿ ಆಟಕ್ಕೆ ಪತಿ ದುರಂತ ಸಾವು
ಅವರದ್ದು ಹತ್ತು ವರ್ಷಗಳ ದಾಂಪತ್ಯ ಜೀವನ. ಮುದ್ದಾದ ಆರು ವರ್ಷದ ಮಗ ಇದ್ದ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಸಂಸಾರದಲ್ಲಿ ಬಿರುಗಾಳಿಯೆಬ್ಬಿಸಿದ್ದು ಪತ್ನಿಯ ಅಕ್ರಮ ಸಂಬಂಧ. ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಪ್ರಿಯಕರನ ಜೊತೆ ಪತ್ನಿ ಲವ್ವಿಡವ್ವಿ ಶುರು ಮಾಡಿಕೊಂಡಿಕೊಳ್ಳುತ್ತಿದ್ದಳು. ಪತ್ನಿಯ ಖಾಸಗಿ ವಿಡಿಯೋ, ಪೋಟೋ ನೋಡಿದ ಪತಿ ಮನನೊಂದು ಸಾವಿನ ಮನೆ ಸೇರಿದ್ದಾನೆ.

ಬೆಂಗಳೂರು, (ಅಕ್ಟೋಬರ್ 19): ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಮುನಿಕೃಷ್ಣ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಹತ್ತು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ನಾಗದೇವನಹಳ್ಳಿಯ ನಯನ ಜೊತೆ ಮುನಿಕೃಷ್ಣ ಮದುವೆಯಾಗಿದ್ದ. ಇವರ ಸುಖ ಸಂಸಾರಕ್ಕೆ ಆರು ವರ್ಷದ ಗಂಡು ಮಗನಿದ್ದು, ನೆಮ್ಮದಿಯ ಸಂಸಾರದ ಕನಸು ಕಂಡಿದ್ದ. ಆದ್ರೆ, ಇವರ ಸುಖ ಸಂಸಾರಕ್ಕೆ ಸಂಬಂಧಿ ಕುಮಾರನೇ ಕೊಳ್ಳಿ ಇಟ್ಟಿದ್ದು, ಅದೇ ಗ್ರಾಮದ ಕುಮಾರ ಎನ್ನುವಾತನ ಪರಿಚವಾಗಿದ್ದು, ತಮ್ಮ ತಮ್ಮ ಎನ್ನುತಲೇ ಆತನೊಂದಿಗೆ ನಯನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಈ ವಿಚಾರತ್ತಾಗಿ ಮನನೊಂದ ಪತಿ ಮುನಿಕೃಷ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮುನಿಕೃಷ್ಣನ ಸಂಬಂಧಿಯಾಗಿದ್ದ ಕುಮಾರ
ಮುನಿಕೃಷ್ಣನ ಸಂಬಂಧಿಯಾಗಿದ್ದ ಕುಮಾರ ವೃತ್ತಿಯಲ್ಲಿ ಕ್ಯಾಬ್ ಚಾಲಕ, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಕುಮಾರ, ನಯನಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಹೀಗೆ ಕಳೆದ ಎರಡು ವರ್ಷಗಳಿಂದ ಇಬ್ಬರ ಮಧ್ಯೆ ಇದ್ದ ಅಕ್ಕ-ತಮ್ಮನ ಸಂಬಂಧ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಆದ್ರೆ ಈ ಸಂಬಂಧದ ವಿಚಾರ ಮುನಿಕೃಷ್ಣನಿಗೆ ಗೊತ್ತಾಗಿದ್ದೇ ಮೂರು ತಿಂಗಳ ಹಿಂದೆ ಅಷ್ಟೇ. ಮುನಿಕೃಷ್ಣನ ಮೊಬೈಲ್ಗೆ ಕುಮಾರನೇ ವಾಟ್ಸಾಪ್ ಮೂಲಕ ಇಬ್ಬರು ಜೊತೆಯಲ್ಲಿರುವ ಫೋಟೋಗಳು, ಖಾಸಗಿ ವಿಡಿಯೋಗಳು ಹಾಗೂ ಚಾಟ್‌ಗಳನ್ನು ಕಳುಹಿಸಿದ್ದ. ಇಲ್ಲಿಂದಲೇ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಮನಸ್ತಾಪದ ಬಳಿಕ ನಯನ ಗಂಡನ ಮನೆಯಿಂದ ತವರು ಮನೆ ಸೇರಿದ್ದಳು. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಕುಮಾರ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಮುನಿಕೃಷ್ಣನಿಗೆ ನಿಂದಿಸುತ್ತಿದ್ದತ್ತಿದ್ದ.
ಇದನ್ನೂ ನೋಡಿ: ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ
ಮುನಿಕೃಷ್ಣನಿಗೆ ಮಾನಸಿಕ ಹಿಂಸೆ
ನಯನಾಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದು ಎಂದು ಹೇಳಿ ಮುನಿಕೃಷ್ಣನಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಒಂದೆಡೆ ಪತ್ನಿಯ ಅಕ್ರಮ ಸಂಬಂಧದ ಆಘಾತ, ಮತ್ತೊಂದೆಡೆ ಸಾರ್ವಜನಿಕವಾಗಿ ಅವಮಾನಿಸುವ ಕಿರುಕುಳದಿಂದ ಸಹಿಸಲಾಗದೆ ಮುನಿಕೃಷ್ಣ ಮಾನಸಿಕವಾಗಿ ಕುಗ್ಗಿಹೋಗಿದ್ದ. ತನ್ನ ಮನದ ನೋವನ್ನ ಮುನಿಕೃಷ್ಣ ಎಲ್ಲರ ಮುಂದೆಯೂ ಹೇಳಿಕೊಂಡಿರಲಿಲ್ಲ. ಸಾವಿಗೂ ಒಂದು ದಿನ ಮೊದಲು ತನ್ನ ಸಹೋದರಿಗೆ ಈ ವಿಚಾರವನ್ನ ಹೇಳಿಕೊಂಡಿದ್ದ. ಆದ್ರೆ ಅದೇ ಆತನ ಕೊನೆಯ ಮಾತಾಗುತ್ತದೆ ಅಂತ ಕುಟುಂಬಸ್ಥರು ಊಹಿಸಿರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ಮನೆಯಲ್ಲಿ ನೋಡಿದಾಗ ಮುನಿಕೃಷ್ಣ ನೇಣಿಗೆ ಶರಣಾಗಿದ್ದ.
ಇನ್ನೂ ಮುನಿಕೃಷ್ಣ ಸಾವಿನ ವಿಚಾರವಾಗಿ ಸದ್ಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತ್ಯಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸರು ಇಲ್ಲಿಯವರೆಗೆ ಆರೋಪಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಸಾವಿಗೆ ಕಾರಣರಾದ ನಯನಾ ಹಾಗೂ ಕುಮಾರನ ಬಂಧನ ಮಾಡಿಲ್ಲ. ಹೀಗಾಗಿ ಮುನಿಕೃಷ್ಣ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಕೂಡಲೇ ಅವರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಒಟ್ನಲ್ಲಿ ಅಕ್ರಮ ಸಂಬಂಧಗಳು ಸುಖವಾಗಿ ಸಂಸಾರ ನಡೆಸುತ್ತಿರುವವರ ಜೀವನಕ್ಕೆ ಕೊಳ್ಳಿ ಇಟ್ಟಂತೆ. ಇದು ಅನೇಕ ದಂಪತಿಗಳನ್ನು ದೂರ ಮಾಡಿದ್ದು, ಸಾಕಷ್ಟು ಸಂಸಾರಗಳನ್ನು ಒಡೆದು ಹಾಕಿದೆ. ಅದೇ ರೀತಿ ಪರ ಪುರುಷನ ಮೋಹದ ಆಸೆಗೆ ಬಿದ್ದು ಹತ್ತು ವರ್ಷದ ಸಂಸಾರವನ್ನ ಪತ್ನಿ ನಯನಾ ಹಾಳು ಮಾಡಿಕೊಂಡ್ರೆ, ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತಿ ಮುನಿಕೃಷ್ಣ ಸಾವಿನ ದಾರಿ ಹಿಡಿದಿದ್ದಾನೆ.
