ಮಂಡ್ಯ ಬಾಲಕಿ ಅತ್ಯಾಚಾರ, ಕೊಲೆ: ನಿರ್ಭಯ ಕಾಯ್ದೆಯಡಿ ಕೇಸ್ ದಾಖಲಿಸಬೇಕೆಂದು ಸಿಎಂಗೆ ಶೋಭಾ ಪತ್ರ
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ದಿವ್ಯಾ ಮೇಲೆ ಶಿಕ್ಷಕ ಅತ್ಯಾಚಾರ ವೆಸಗಿ ಮತ್ತು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ದಿವ್ಯಾ ಮೇಲೆ ಶಿಕ್ಷಕ ಅತ್ಯಾಚಾರ ವೆಸಗಿ ಮತ್ತು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆರೋಪಿ ವಿರುದ್ಧ ನಿರ್ಭಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರ ನೇಮಿಸಬೇಕು. ಹಾಗೇ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಮತ್ತು ದಿವ್ಯಾ ಪೋಷಕರಿಗೆ ಪರಿಹಾರ ಘೋಷಿಸಬೇಕು ಎಂದು ಪತ್ರದ ಮೂಲಕ ಒತ್ತಾಯ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಅ. 13 ರಂದು ಬಾಲಕಿ ದಿವ್ಯ ದಿವ್ಯಾ ಮಧ್ಯಾಹ್ನ ಟ್ಯೂಷನ್ಗೆ ತೆರಳಿದ್ದಳು. ಎಷ್ಟು ಸಮಯ ಕಳೆದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದರು. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್ನಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಶವಾಗಾರಕ್ಕೆ ರವಾನಿಸಿದ್ದರು. ಇದರ ನಡುವೆ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆಗೈದಿರುವ ಬಗ್ಗೆ ಪೋಷಕರು ಆರೋಪ ಮಾಡಿದ್ದರು.
ಪ್ರಕರಣ ಸಂಬಂಧ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಟ್ಯೂಷನ್ ಶಿಕ್ಷಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಗ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನ್ನು.
ಮರಣೋತ್ತರ ಪರೀಕ್ಷೆಯಲ್ಲಿ ಆಚೆ ಬಂತು ಅಸಲಿ ಸತ್ಯ
ಕಾಂತರಾಜ್ ಎಂಬಾತ ಬಾಲಕಿ ದಿವ್ಯಾ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.
ಕ್ರೂರಿ ಕಾಂತರಾಜ ಮಾಡಿದ್ದೇನು
ಕಾಂತರಾಜ್ ಎಂಬಾತ ಟ್ಯೂಷನ್ ನೀಡುವ ನೆಪದಲ್ಲಿ ಬಾಲಕಿಯನ್ನು ಕರೆಸಿಕೊಂಡಿದ್ದಾನೆ. ಬಳಿಕ ಬಾಲಕಿ ದಿವ್ಯ ಮೇಲೆ ಅತ್ಯಾಚಾರವೆಸಿಗಿದೆ. ನಂತರ ಬಾಲಕಿಗೆ ಮನೆಯವರಿಗೆ ವಿಷಯ ತಿಳಿದರೆ ಪರಿಸ್ಥಿತಿ ಬೇರೆಯದ್ದೇ ಆಗುತ್ತದೆ ಎಂಬ ಭಯದಿಂದ ಬಾಲಕಿಯ ತಲೆಗೆ ರಾಡ್ನಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ಮಳವಳ್ಳಿ ಪೊಲೀಸರು ನ್ಯಾಯಾಲಯ ಅನುಮತಿ ಪಡೆದು ಪೋಕ್ಸೊ ಕಾಯ್ದೆ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.