1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್ಶಿಪ್ ಘೋಷಿಸಿದ ಸಿಎಂ ಬೊಮ್ಮಾಯಿ
ಸಮುದ್ರ ಮೀನಿನ ಕೃಷಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. 100 ಹೊಸ ಡೀಫ್ ಸೀ ಫಿಶಿಂಗ್ ಬೋಟ್ ಕೊಡುತ್ತಿದ್ದೇವೆ. 1,600 ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡುವ ಗುರಿ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: 1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸ್ಕಾಲರ್ಶಿಪ್ ಘೋಷಿಸಿದ್ದಾರೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸ್ಕಾಲರ್ಶಿಪ್(Scholarship) ಘೋಷಣೆ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಳನಾಡು ಮೀನುಗಾರಿಕೆಗೆ ಬಹಳ ಪ್ರಾಮುಖ್ಯತೆ ಇದೆ. ಸಮುದ್ರ ಮೀನಿನ ಕೃಷಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. 100 ಹೊಸ ಡೀಫ್ ಸೀ ಫಿಶಿಂಗ್ ಬೋಟ್ ಕೊಡುತ್ತಿದ್ದೇವೆ. 1,600 ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡುವ ಗುರಿ ಇದೆ. ಈ ಹಿಂದೆ 300 ಮೀನುಗಾರರ ಸಂಘಕ್ಕೆ ನೆರವು ನೀಡಲಾಗಿತ್ತು. ಈಗ ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ ವಿಸ್ತರಣೆ ಮಾಡಲಾಗಿದೆ. 3 ಲಕ್ಷದಿಂದ 5 ಲಕ್ಷದವರೆಗೂ ಸರ್ಕಾರ ಸಹಾಯಧನ ನೀಡಲಿದೆ. ಆರ್ಥಿಕವಾಗಿ ಮೀನುಗಾರರು ಸಬಲರಾಗಬೇಕು.
ಮೀನುಗಾರರಿಗೆ 5 ಸಾವಿರ ಮನೆ ಘೋಷಣೆ ಮಾಡಿದ್ದೇವೆ. 1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತೆ. ಬೆಂಗಳೂರಲ್ಲಿ ಮೀನಿನ ಆಹಾರಕ್ಕೆ ಬಹಳ ಡಿಮ್ಯಾಂಡ್ ಇದೆ. ಪ್ರತಿ ವಾರ್ಡ್ನಲ್ಲಿ ಮೀನಿನ ಆಹಾರ ಹೋಟೆಲ್ ಸ್ಥಾಪನೆಗೆ ನಿರ್ಧಾರ ಮಾಡಿದ್ದೇವೆ ಎಂದು ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಶತಮಾನಗಳಿಂದ ಮೀನು ಮನುಷ್ಯನ ಆಹಾರವಾಗಿದೆ. ಮೀನು ಸಸ್ಯಾಹಾರಿ, ಆದರೆ ಮೀನು ತಿನ್ನುವ ಮನುಷ್ಯ ಮಾಂಸಾಹಾರಿ. ಆದರೆ ಮೀನು ಸಸ್ಯಹಾರಿ ಆಗಿರೋದ್ರಿಂದ ಕೆಲವು ದೇಶಗಳಲ್ಲಿ ಮೀನು ಸಸ್ಯಾಹಾರಿ ಅಂತಾರೆ. ಒಳನಾಡಿನಲ್ಲಿ ಮೀನುಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸಿದರೆ ತಾಜಾ ಆಹಾರದಂತೆ ಒದಗಿಸಬಹುದು. ಸಮುದ್ರದ ಮೀನಿಗೂ ಒಳನಾಡಿನಲ್ಲಿ ಬೆಳೆಯುವ ಮೀನಿಗೂ ವ್ಯತ್ಯಾಸವಿದೆ. ಆದರೆ ಒಳನಾಡು ಮೀನುಗಾರಿಕೆಯನ್ನು ನಾವು ಬೆಳೆಸಬೇಕಿದೆ. ಸಮುದ್ರದ ಮೀನುಗಾರಿಕೆ ಹೆಚ್ಚಿಸಲು ನಾವು ಉತ್ತೇಜನ ಕೊಡುತ್ತಿದ್ದೇವೆ ಎಂದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇಲೆ ಗರಂ ಆದ ಸಿಎಂ
ಸಿಎಂ ಬೊಮ್ಮಾಯಿ ಭಾಷಣ ವೇಳೆ ಮಾತಾಡ್ತಿದ್ದ ಸಚಿವ ನಾಗೇಶ್ ವಿರುದ್ಧ ಗರಂ ಆದರು. ಸಿಎಂ ಬೊಮ್ಮಾಯಿಯವರು ಭಾಷಣ ಮಾಡುವಾಗ ಸಚಿವ ನಾಗೇಶ್ ಅವರು ಪಕ್ಕದಲ್ಲಿ ಕುಳಿತಿದ್ದವರ ಜೊತೆ ಮಾತಾಡುತ್ತಿದ್ದರು. ಇದನ್ನು ಕಂಡು ಸಿಟ್ಟಾದ ಸಿಎಂ, ನಾಗೇಶ್ ನಿನಗೆ ಮಾತಾಡಬೇಕು ಅಂದ್ರೆ ಹೊರಗೆ ಹೋಗಿ ಮಾತಾಡು ಎಂದು ಗರಂ ಆದರು.