ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆ; ಪತಿಯೇ ಕೊಲೆ ಮಾಡಿದನಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2024 | 4:02 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಂತೆ ವಿವೇಕನಗರ(Viveknagar)ದ ಬಾಡಿಗೆ ಮನೆಯಲ್ಲಿ ಕುಂದಾಪುರ ಮೂಲದ ವಿವಾಹಿತೆ ಟೆಕ್ಕಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವಿವೇಕನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆ; ಪತಿಯೇ ಕೊಲೆ ಮಾಡಿದನಾ?
ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆ
Follow us on

ಬೆಂಗಳೂರು, ಅ.05: ಬೆಂಗಳೂರಿನ ವಿವೇಕನಗರ(Viveknagar)ದ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಟೆಕ್ಕಿ ಶವ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಮೇಘನಾ ಶೆಟ್ಟಿ(27) ಮೃತ ಮಹಿಳೆ. ಮೇಘನಾ ಅವರು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ತೀರ್ಥಹಳ್ಳಿಯ ಮೂಲದ  ಇಂಜಿನಿಯರ್ ಸುದೀಪ್ ಶೆಟ್ಟಿ ಜೊತೆ ವಿವಾಹವಾಗಿತ್ತು. ಜೊತೆಗೆ ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಸಹ ಇದೆ.

ಮೇಘನಾ ಪೋಷಕರಿಂದ ಪತಿ ಸುದೀಪ್ ವಿರುದ್ಧ ಕೊಲೆ ಆರೋಪ

ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಇತ್ತೀಚೆಗೆ ಪದೇಪದೆ ಹಣಕ್ಕಾಗಿ ಪತಿ ಕುಟುಂಬದಿಂದ ಕಿರುಕುಳ ನೀಡುತ್ತಿದ್ದು, ನಿನ್ನೆ(ಅ.04) ರಾತ್ರಿ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಇಂದು(ಶನಿವಾರ) ಬೆಳಗ್ಗೆ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವಿವೇಕನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮೃತ ಮೇಘನಾ ಪೋಷಕರು, ಆಕೆಯ ಪತಿ ಸುದೀಪ್ ಕೊಲೆ ಮಾಡಿದ್ದಾನೆ. ಜೊತೆಗೆ ಸುದೀಪ್ ಪೋಷಕರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೇಘನಾ ಪತಿ ಸುದೀಪ್​ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಕೆರೆ ಒತ್ತುವರಿ ತೆರವು ವಿರೋಧಿಸಿ ವಿಷ ಸೇವಿಸಿದ್ದ ರೈತ ಸಾವು

ಚಿಕ್ಕಮಗಳೂರು: ಕೆರೆ ಒತ್ತುವರಿ ತೆರವು ವಿರೋಧಿಸಿ ವಿಷ ಸೇವಿಸಿದ್ದ ರೈತ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆ.ಆರ್​ ಪೇಟೆ ಸಮೀಪದ ಕಂಚೇನಹಳ್ಳಿಯಲ್ಲಿ ನಡೆದಿದೆ. ರೈತ ಮಲ್ಲೇಶ್ (43) ಮೃತ ರ್ದುದೈವಿ. ಕಳೆದ ಮೂರು ದಿನಗಳ ಹಿಂದೆ ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಒತ್ತುವರಿ ತೆರವು ಮಾಡದಂತೆ ಅಧಿಕಾರಿಗಳ ಎದುರೇ ವಿಷ ಸೇವಿಸಿದ್ದ. ಕೂಡಲೇ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Sat, 5 October 24