ಬೆಂಗಳೂರು: ಎಂಇಐಎಲ್‌ನಿಂದ ಸೈಬರ್‌ ಪೋಲಿಸ್‌ ಠಾಣೆಗೆ ಕಂಪ್ಯೂಟರ್‌ಗಳ ದೇಣಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 28, 2023 | 8:46 PM

ಮಂಗಳವಾರ ಮಧ್ಯಾಹ್ನ ನಗರದ ಕಬ್ಬನ್‌ ಪಾರ್ಕ್‌ ಪೋಲಿಸ್‌ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂಇಐಎಲ್‌ ಕರ್ನಾಟಕದ ಉಪಾಧ್ಯಕ್ಷ ಸುಧೀರ್‌ ಮೋಹನ್‌ ಅವರು ಉಪ ಪೋಲಿಸ್‌ ಆಯುಕ್ತ ಶೇಖರ್‌ ಹೆಚ್.ಟಿ. ಅವರಿಗೆ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು.

ಬೆಂಗಳೂರು: ಎಂಇಐಎಲ್‌ನಿಂದ ಸೈಬರ್‌ ಪೋಲಿಸ್‌ ಠಾಣೆಗೆ ಕಂಪ್ಯೂಟರ್‌ಗಳ ದೇಣಿಗೆ
ಎಂಇಐಎಲ್‌ನಿಂದ ಸೈಬರ್‌ ಪೋಲಿಸ್‌ ಠಾಣೆಗೆ ಕಂಪ್ಯೂಟರ್‌ಗಳ ದೇಣಿಗೆ
Follow us on

ಬೆಂಗಳೂರು, ನ.28: ದೇಶದ ಪ್ರತಿಷ್ಠಿತ ಮೂಲ ಸೌಕರ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮೆಘಾ ಇಂಜಿನಿಯರಿಂಗ್‌ ಅಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (MEIL) ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಡಿಯಲ್ಲಿ ಬೆಂಗಳೂರು(Bengaluru) ನಗರದ ಸೈಬರ್‌ ಪೋಲಿಸ್‌(Cyber Police)ಕೇಂದ್ರಕ್ಕೆ ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ನೀಡಿದೆ.

ಮಂಗಳವಾರ ಮಧ್ಯಾಹ್ನ ನಗರದ ಕಬ್ಬನ್‌ ಪಾರ್ಕ್‌ ಪೋಲಿಸ್‌ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂಇಐಎಲ್‌ ಕರ್ನಾಟಕದ ಉಪಾಧ್ಯಕ್ಷ ಸುಧೀರ್‌ ಮೋಹನ್‌ ಅವರು ಉಪ ಪೋಲಿಸ್‌ ಆಯುಕ್ತ ಶೇಖರ್‌ ಹೆಚ್.ಟಿ. ಅವರಿಗೆ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು.

ಇದನ್ನೂ ಓದಿ:Megha Engineering MEIL: ತಿರುಮಲ ದೇವಸ್ಥಾನಕ್ಕೆ 10 ಎಲೆಕ್ಟ್ರಿಕ್ ಬಸ್‌ ಕೊಡುಗೆ ನೀಡಿದ ಮೇಘಾ ಇಂಜಿನಿಯರಿಂಗ್, ಬೆಟ್ಟದಲ್ಲಿ ಇನ್ನು ಎಲೆಕ್ಟ್ರಿಕ್ ವಾಹನಗಳ ಕಲರವ

ಇದೇ ವೇಳೆ ಎಂ.ಇ.ಐ.ಎಲ್‌ ಸಂಸ್ಥೆಗೆ ಅಭಿಂದನಾ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಡಿಸಿಪಿ ಶೇಖರ್‌ ಅವರು, ‘ದಿನೇ ದಿನೇ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಎಂ.ಇ.ಐ.ಎಲ್‌ನ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೋಲಿಸ್‌ ಇನ್ಸ್‌ಪೆಕ್ಟರ್‌ ಎಸ್.ಪಿ. ವಿನೋದ್‌ ರಾಜ್‌, ಎಂ.ಇ.ಐ.ಎಲ್‌ ಸಿಬ್ಬಂದಿಗಳಾದ ವೆಂಕಟ್‌ ನಾರಾಯಣ್‌, ಗುರುಶಂಕರ್‌ ರೆಡ್ಡಿ, ಇರ್ಷಾದ್‌ ಅಹ್ಮದ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ