ಬೆಂಗಳೂರಿನ ಕೆಂಗೇರಿ ಬಳಿ ಕೆಟ್ಟು ನಿಂತ ಮೆಮೋ ರೈಲು! ಪ್ರಯಾಣಿಕರು ಪರದಾಟ
ರೈಲು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ಇಂಜಿನ್ನಲ್ಲಿ ದೋಷ ಕಂಡುಬಂದಿದ್ದು, ಕಳೆದ 1 ಗಂಟೆಯಿಂದ ನಿಂತಲ್ಲೇ ನಿಂತಿದೆ. ಸದ್ಯ ಇಂಜಿನ್ ಬದಲಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಬೆಂಗಳೂರು: ನಗರದ ಕೆಂಗೇರಿ ಬಳಿ ಮೆಮೋ ರೈಲು (Memu train) ಕೆಟ್ಟು ನಿಂತಿದ್ದು, ಪ್ರಯಾಣಿಕರು (Passengers) ಪರದಾಡುವಂತಾಗಿದೆ. ಮೆಮೋ ರೈಲಿನ ಇಂಜಿನ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆ ರೈಲು ನಿಲುಗಡೆ ಆಗಿದೆ. ರೈಲು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ಇಂಜಿನ್ನಲ್ಲಿ ದೋಷ ಕಂಡುಬಂದಿದ್ದು, ಕಳೆದ 1 ಗಂಟೆಯಿಂದ ನಿಂತಲ್ಲೇ ನಿಂತಿದೆ. ಸದ್ಯ ಇಂಜಿನ್ ಬದಲಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಮೆಜೆಸ್ಟಿಕ್ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬೇರೆ ರೈಲು ಓಡಾಡಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಜೂನ್ 21ಕ್ಕೆ ಶ್ರೀರಾಮಾಯಣ ಯಾತ್ರಾ ರೈಲು ಪ್ರಾರಂಭ: ರಾಮನ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಜೂನ್ 21 ರಂದು ವಿಶೇಷ ಪ್ರವಾಸಿ ರೈಲಿನ ಮೂಲಕ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುವ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ಮೂಲಕ ರಾಮಾಯಣ ಸರ್ಕ್ಯೂಟ್‌ನಲ್ಲಿ ಪ್ರವಾಸಕ್ಕಾಗಿ ಬುಕ್ಕಿಂಗ್ ನಡೆಯುತ್ತಿದೆ.
ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭ, ಇಲ್ಲಿವೆ ಕೆಲವು ಕೈಗೆಟಕುವ ದರದಲ್ಲಿ ಲಭ್ಯವಾಗುವ ಐಫೋನ್ಗಳು
14 ವರ್ಷಗಳ ಕಾಲ ಕಾಡಿನಲ್ಲಿ ವನವಾಸವನ್ನು ಕೈಗೊಂಡಾಗ ಭಗವಾನ್ ರಾಮ, ಅವರ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣರು ಕಾಲಿಟ್ಟ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಕನಸುಗಳನ್ನು ಸಾಕಾರಗೊಳಿಸುವ ಗುರಿಯನ್ನು ಈ ಪ್ರವಾಸ ಪ್ಯಾಕೇಜ್ ಹೊಂದಿದೆ ಎಂದು ಸಿನ್ಹಾ ಹೇಳಿದ್ದಾರೆ. ಅಯೋಧ್ಯೆ, ಜನಕ್‌ಪುರ (ನೇಪಾಳ), ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್‌ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ (ಇದನ್ನು ದಕ್ಷಿಣ ಭಾರತದ ಅಯೋಧ್ಯೆ ಎನ್ನಲಾಗುತ್ತದೆ) ಒಳಗೊಂಡಿರುವ ಪ್ರಮುಖ ಸ್ಥಳಗಳನ್ನು ಸ್ವದೇಶ್ ದರ್ಶನ್ ಯೋಜನೆಯಡಿ ಗುರುತಿಸಲಾದ ರಾಮಾಯಣ ಸರ್ಕ್ಯೂಟ್‌ನಲ್ಲಿ ರೈಲು ಚಲಿಸಲಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Mon, 30 May 22