ಮುಖ ಕಳೆಗುಂದದಂತೆ ಕಾಣಲು ಬೊಟೊಕ್ಸ್ ಚುಚ್ಚುಮದ್ದು ಬಳಸುವವರಲ್ಲಿ ಪುರುಷರೇ ಹೆಚ್ಚು
ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್ ಡರ್ಮಲ್ ಫಿಲ್ಲರ್ ಮುಂತಾದ ಚುಚ್ಚುಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಚುಚ್ಚು ಮದ್ದು ಬಳಕೆಯಲ್ಲಿ ಪುರುಷರೇ ಹೆಚ್ಚು ಎಂಬ ಅಂಶ ತಿಳಿದು ಬಂದಿದೆ.
ಬೆಂಗಳೂರು, ಸೆಪ್ಟೆಂಬರ್ 17: ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸಲು ಇತ್ತೀಚಿಗೆ ಬೊಟೊಕ್ಸ್ ಡರ್ಮಲ್ ಫಿಲ್ಲರ್ (Botox injection) ಮುಂತಾದ ಚುಚ್ಚು ಮದ್ದುಗಳನ್ನು ಮಾಡಿಸಿಕೊಳ್ಳುತ್ತಾರೆ. ಬೊಟೊಕ್ಸ್ ಡರ್ಮಲ್ ಫಿಲ್ಲರ್ ಮುಂತಾದ ಚುಚ್ಚು ಮದ್ದುಗಳನ್ನು ಹೆಚ್ಚಾಗಿ ಚಿತ್ರರಂಗದ ನಟ, ನಟಿಯರು ಹೆಚ್ಚಾಗಿ ಬಳಸುತ್ತಾರೆ. ಈ ಚುಚ್ಚು ಮದ್ದು ಕೇವಲ ಚಿತ್ರರಂಗಕ್ಕೆ ಮಾತ್ರಕ್ಕೆ ಸೀಮಿತವಾಗದೆ ಅನೇಕ ಪುರುಷರು ಕೂಡ ಬಳಸುತ್ತಿದ್ದಾರೆ. ಬೆಲೆಬಾಳುವ ಚರ್ಮದ ಕ್ರೀಮ್‌ಗಳು ಮತ್ತು ಫೇಶಿಯಲ್‌ಗಳ ಜೊತೆಗೆ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ.
ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಮಿಂಟೆಲ್‌ನ 2023 ರ ಸಮೀಕ್ಷೆ ಪ್ರಕಾರ ಶೇ30 ರಷ್ಟು ಪುರುಷರು ಮುಖ ಸುಕ್ಕಾಗದಂತೆ ತಡೆಯಲು ಚುಚ್ಚು ಮದ್ದು ಬಳಸುತ್ತಿದ್ದಾರೆ. ಶೇ 26 ರಷ್ಟು ಮಹಿಳೆಯರು ಬಳಸುತ್ತಿದ್ದಾರೆ. ಬೆಂಗಳೂರಿನ ಹಣಕಾಸಿನ ಮುಖ್ಯ ಅಧಿಕಾರಿಯೊಬ್ಬರು ತಮ್ಮ ಮುಖದ ಮೇಲಿನ ಗೆರೆ ಮತ್ತು ಸೊಕ್ಕನ್ನು ಹೋಗಲಾಡಿಸಲು ಈ ಚುಚ್ಚು ಮದ್ದು ಉಪಯೋಗಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುಖದ ಸುಕ್ಕು ಹೋಗಲಾಡಿಸುವ ಬೊಟೊಕ್ಸ್ ಚಿಕಿತ್ಸೆ ಕುರಿತು ತಜ್ಞರು ಹೇಳುವುದೇನು?
ಯುಸ್ನ ವಾಣಿಜ್ಯೋದ್ಯಮಿ ಬ್ರಯಾನ್ ಜಾನ್ಸನ್ ಅವರು ತಾವು ಸಣ್ಣವರಂತೆ ಕಾಣಲು ಆಹಾರ ಸೇವನೆಯಲ್ಲಿ ನಿಯಂತ್ರಣ, ವ್ಯಾಯಾಮ ಮಾಡುತ್ತಾರೆ. ತಾವು ವಯಸ್ಸಾದಂತೆ ಕಾಣದಿರಲು ಅವರು ವಾರ್ಷಿಕವಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಇದರಿಂದ ಅವರು ಚಿಕ್ಕ ವಯಸ್ಸಿನವರಹಾಗೆ ಕಾಣುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ