ಬೆಂಗಳೂರಿನಲ್ಲಿ 23 ಕೆರೆಗಳನ್ನ ನೆಲಸಮ ಮಾಡಿ ಬಿಡಿಎ ಲೇಔಟ್ ನಿರ್ಮಾಣ: ಒತ್ತುವರಿ ತೆರವು ಮಾಡಿಸುತ್ತಿರುವ ಶಾಸಕರು, ಸಚಿವರ ಹೆಸರಲ್ಲಿದೆ ನಿವೇಶನ
ಒತ್ತುವರಿ ತೆರವುಗೊಳಿಸಿ ಎಂದು ಆಗ್ರಹಿಸುತ್ತಿರುವ ಶಾಸಕರಿಂದಲೇ ಕೆರೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆರೆಗಳನ್ನ ಕೊಂದು ಬಿಡಿಎ ನಿರ್ಮಿಸಿದ ಲೇಔಟ್ಗಳಲ್ಲಿ ಶಾಸಕರಿಗೆ, ಸಚಿವರಿಗೆ, ಲೋಕಸಭಾ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ (Rajakaluve Encroachment) ಮಾಡಿಕೊಂಡು ಮನೆ, ವಿಲ್ಲಾಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಬಿಬಿಎಂಪಿ (BBMP) ಅವುಗಳನ್ನು ತೆರವು ಮಾಡುತ್ತಿದೆ. ಆದ್ರೆ ಕೆಲ ದಿನಗಳಿಂದ ಈ ಕಾರ್ಯಾಚರಣೆ ಮಂಕಾಗಿದೆ. ಒತ್ತುವರಿ ತೆರವು ಮಾಡಲು ಮುಂದಾದ ಸರ್ಕಾರಿ ಅಧಿಕಾರಿಗಳಿಂದಲೇ ಒತ್ತುವರಿ ಮಾಡಿಕೊಳ್ಳಲಾಗಿದೆಯಂತೆ. ಬೆಂಗಳೂರಿನ ಕೆರೆಗಳನ್ನ ಸಮಾಧಿ ಮಾಡಿ, ಸಮಾಧಿ ಮೇಲೆ ಬಿಡಿಎ ಲೇಔಟ್ ನಿರ್ಮಾಣ ಮಾಡಲಾಗಿದೆ. ಬಿಡಿಎ ಕೆರೆ ಒತ್ತುವರಿಯಲ್ಲಿ ಮೂರು ಪಕ್ಷದ ನಾಯಕರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
23 ಕೆರೆಗಳನ್ನ ನೆಲಸಮ ಮಾಡಿ ಬಿಡಿಎ ಲೇಔಟ್ ನಿರ್ಮಾಣ
ಒತ್ತುವರಿ ತೆರವುಗೊಳಿಸಿ ಎಂದು ಆಗ್ರಹಿಸುತ್ತಿರುವ ಶಾಸಕರಿಂದಲೇ ಕೆರೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆರೆಗಳನ್ನ ಕೊಂದು ಬಿಡಿಎ ನಿರ್ಮಿಸಿದ ಲೇಔಟ್ಗಳಲ್ಲಿ ಶಾಸಕರಿಗೆ, ಸಚಿವರಿಗೆ, ಲೋಕಸಭಾ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ನಗರದ 23 ಕೆರೆಗಳನ್ನ ನೆಲಸಮ ಮಾಡಿ ಬಿಡಿಎ ಲೇಔಟ್ ನಿರ್ಮಾಣ ಮಾಡಲಾಗಿದ್ದು ಕೆರೆ ಮೇಲೆ ನಿರ್ಮಾಣ ಮಾಡಿರುವ ಲೇಔಟ್ ಗಳಲ್ಲಿ 3 ಪಕ್ಷದ ನಾಯಕರಿಗೆ ಜಿ ಕೆಟಗರಿ ನಿವೇಶನ ಹಂಚಲಾಗಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ಶಾಸಕರಿಗೆ, ಸಚಿವರಿಗೆ, ಹಾಲಿ, ಮಾಜಿ ಶಾಸಕರಿಗೆ ನಿವೇಶನ ನೀಡಲಾಗಿದೆಯಂತೆ.
- ಗೋವಿಂದ್ ಕಾರಜೋಳ ಅವರು ಶಾಸಕ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 105, ಆರ್ ಎಂವಿ 2 ನೇ ಹಂತ 1998 ರಲ್ಲಿ ಹಂಚಿಕೆ ಮಾಡಲಾಗಿದೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್ ಇದಾಗಿದೆ.
- ಡಿಕೆ ಶಿವಕುಮಾರ್ ಶಾಸಕರ ಕೋಟಾದಲ್ಲಿ 50×80ವಿಸ್ತೀರ್ಣ, ನಿವೇಶನ ಸಂಖ್ಯೆ 105, ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ.
- ಡಿ.ಸುಧಾಕರ್ ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.286/c ಆರ್ ಎಂವಿ 2 ಸ್ಟೇಜ್ 2010. ರಲ್ಲಿ ನಿವೇಶನ ಹಂಚಿಕೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್.
- ಆರ್ ಅಶೋಕ್ ಸಚಿವರ ಕೋಟಾದಡಿ 50×80 ವಿಸ್ತೀರ್ಣದ, ನಿವೇಶನ ಸಂಖ್ಯೆ 195/L HBR1 stage, 5 ಬ್ಲಾಕ್, 2007 ರಲ್ಲಿ ಹಂಚಿಕೆ( ಹೆಣ್ಣೂರು ಕೆರೆ ಮೇಲೆ ನಿರ್ಮಾಣ ಆಗಿರುವ ಬಿಡಿಎ ಲೇಔಟ್)
- ಬಿ.ವೈ. ರಾಘವೇಂದ್ರ ಎಂಪಿ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ1, ಆರ್ ಎಂವಿ 2 ಸ್ಟೇಜ್, ನಾಗಶೆಟ್ಟಿಹಳ್ಳಿ 2009
- ಬಿ.ಕೆ. ಸಂಗಮೇಶ್ ಶಾಸಕರ ಕೋಟಾ 50×80 ವಿಸ್ತೀರ್ಣದ, ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ 2009.
- ವೀರಣ್ಣ ಚರಂತಿಮಠ ಶಾಸಕರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ3, ಆರ್ ಎಂವಿ 2 ಸ್ಟೇಜ್4 ಬ್ಲಾಕ್, ನಾಗಶೆಟ್ಟಿಹಳ್ಳಿ 2006 ರಲ್ಲಿ ಹಂಚಿಕೆ
- ಎಸ್ ಸುರೇಶ್ ಕುಮಾರ್ ಸಚಿವರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ2, ಆರ್ ಎಂವಿ 2 ಸ್ಟೇಜ್4 ಬ್ಲಾಕ್, 2009 ರಲ್ಲಿ ಹಂಚಿಕೆ.
- ಶಾಸಕ ನಜಿರ್ ಅಹ್ಮದ್,50×80 ನಿವೇಶನ ಸಂಖ್ಯೆ 391 ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ
- ಆರ್.ವಿ. ದೇವರಾಜ್ ಶಾಸಕರ ಕೋಟಾದಲ್ಲಿ 50×80 ವಿಸ್ತೀರ್ಣದ 108/ಎ ಆರ್ ಎಂವಿ 2 ನೇ ಸ್ಟೇಜ್ 2 ಬ್ಲಾಕ್ 1992 ರಲ್ಲಿ ಹಂಚಿಕೆ
- ಗೂಳಿಹಟ್ಟಿ ಶೇಖರ್ ಸಚಿವರ ಕೋಟಾ 2009 ರಲ್ಲಿ ಆರ್ ಎಂ ವಿ 2 ನೇ ಹಂತದಲ್ಲಿ ನಿವೇಶನ.
- ಜಿ ಕೃಷ್ಣ ಪಾಲೇಮಾರ್ ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.12 ಆರ್ ಎಂವಿ 2 ಸ್ಟೇಜ್ 2009. ರಲ್ಲಿ ನಿವೇಶನ ಹಂಚಿಕೆ.
- ಶಿವರಾಜ್ ತಂಗಡಗಿ ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ 2009. ರಲ್ಲಿ ನಿವೇಶನ ಹಂಚಿಕೆ.
- ಫಕೀರಪ್ಪ ಎಂಪಿ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ. ಸಂ.71 ಆರ್ ಎಂವಿ 2 ಸ್ಟೇಜ್ ಭೂಪಸಂಧ್ರ 2009. ರಲ್ಲಿ ನಿವೇಶನ ಹಂಚಿಕೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್ ಗಳು.
- ಕೆ.ಜೆ. ಜಾರ್ಜ್ ಎಂಎಲ್ ಎ ಕೋಟಾದಡಿ 76×60 ವಿಸ್ತೀರ್ಣದ ನಿವೇಶನ. ಸಂಖ್ಯೆ 4033, ಹೆಚ್ ಎ ಎಲ್ 2 ಸ್ಟೇಜ್, 1992 ರಲ್ಲಿ ಹಂಚಿಕೆ.( ತಿಪ್ಪಸಂದ್ರ ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್)
- ಸಿ.ಟಿ. ರವಿ ಶಾಸಕರ ಕೋಟಾದಲ್ಲಿ ನಿವೇಶನ ಸಂಖ್ಯೆ 195 ಕೆ, ಹೆಚ್ ಬಿಆರ್ 1 ಸ್ಟೇಜ್, 5 ಬ್ಲಾಕ್ ನಲ್ಲಿ 40×60 ನಿವೇಶನ ಹಂಚಿಕೆ( ಹೆಣ್ಣೂರು ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್)
- ಎಸ್ ಆರ್ ಪಾಟೀಲ್ ಗೆ ಎಂಎಲ್ ಸಿ ಕೋಟಾದಡಿ ಹಾಗೂ ಆರ್ ಎಸ್ ಪಾಟೀಲ್ ಎಂಪಿ ಕೋಟಾದಲ್ಲಿ ನಿವೇಶನ ಸಂಖ್ಯೆ 564,5 ಹಂಚಿಕೆ 2002.
- ಹಂಪನಗೌಡ ಬಾದರ್ಲಿ ಗೆ ಶಾಸಕರ ಕೋಟಾದಲ್ಲಿ ನಿವೇಶನ ಸಂಖ್ಯೆ87 ಆರ್ ಎಂವಿ ಲೇಔಟ್ 1998 ರಲ್ಲಿ ನಿವೇಶನ ಹಂಚಿಕೆ.
- ರಮೇಶ್ ಕತ್ತಿ ಎಂಪಿ ಕೋಟಾ, ಕೆ. ಶಿವನ್ಗೌಡ ನಾಯಕ್, ಪಿಎಂ ನರೇಂದ್ರ ಸ್ವಾಮಿ, ಜೆ.ಶಾಂತ, ಸುನೀಲ್ ವಲ್ಯಾಪುರ, ಸಿ.ರಮೇಶ್, mlc ಜಲಜಾ ನಾಯ್ಕ್, ಎಂಪಿ ಜನಾರ್ಧನ ಸ್ವಾಮಿ, ಹಾಲಪ್ಪ ಅವರಿಗೆ ಆರ್ ಎಂಪಿ 2 ನೇ ಹಂತದಲ್ಲಿ ನಿವೇಶನ ನೀಡಲಾಗಿದೆ.
- ಸಿಸಿ ಪಾಟೀಲ್ ಎಂಎಲ್ ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಸಂಖ್ಯೆ 3CC-907 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ.
- ಬಿ.ಸಿ. ಪಾಟೀಲ್ , ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ4M-407 HRBR3 ಬ್ಲಾಕ್ ಡಾಲರ್ಸ್ ಕಾಲೋನಿಯಲ್ಲಿ 2006 ರಲ್ಲಿ ಹಂಚಿಕೆ.
- ಪರಮೇಶ್ವರ್ ನಾಯ್ಕ್ ಎಂಎಲ್ ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಸಂಖ್ಯೆ4M-415 HRBR ಲೇಔಟ್ ನ 3 ಬ್ಲಾಕ್ ನಲ್ಲಿ 2001 ರಲ್ಲಿ ಹಂಚಿಕೆ.
- ಪ್ರಕಾಶ್ ಖಂಡ್ರೆ ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಸಂಖ್ಯೆ 5C-319 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ. ಹೆಚ್ ಆರ್ ಬಿಆರ್ 1 ನೇ ಹಂತ, ಬಾಣಸವಾಡಿ ಚನ್ನಸಂದ್ರ ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ