ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ಟಿವಿ9 ನ ಅತಿದೊಡ್ಡ ಎಜುಕೇಷನ್ ಸಮ್ಮಿಟ್ ನಡೆಯಲಿದೆ. ಅರಮನೆಯ ಮೈದಾನದ ತ್ರಿಪುರವಾಸಿನಿ ಹಾಲ್‌ನಲ್ಲಿ (Tripuravasini at palace grounds) ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಇಂದು (ಸೆಪ್ಟೆಂಬರ್ 3) ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಚಾಲನೆ ನೀಡಿದ್ದಾರೆ. ಹಲವು ಪ್ರತಿಷ್ಠಿತ ಕಾಲೇಜುಗಳ ಸಹಯೋಗದಲ್ಲಿ ಸಮ್ಮಿಟ್ ನಡೆಯುತ್ತಿದ್ದು, ದೇಶದ ಪ್ರತಿಷ್ಠಿತ ಕಾಲೇಜುಗಳು ಈ ಸಮ್ಮಿಟ್ನಲ್ಲಿ ಭಾಗಿಯಾಗಲಿವೆ.
ಟಿವಿ9 ವತಿಯಿಂದ 5ನೇ ಬಾರಿಗೆ ಎಜುಕೇಷನ್ ಎಕ್ಸ್‌ಪೋ ನಡೆಯುತ್ತಿದೆ. ಒಂದೇ ವೇದಿಕೆಯಲ್ಲಿ ನೂರಾರು ಕೋರ್ಸ್‌ಗಳ ಮಾಹಿತಿ ನೀಡಲಾಗುತ್ತಿದೆ. ಟಿವಿ9 ಎಕ್ಸ್‌ಪೋನಲ್ಲಿ ಹಲವು ವಿವಿ, ಕಾಲೇಜುಗಳ ಸ್ಟಾಲ್ಸ್, ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೆ ಎನು? ಎನ್ನುವವರಿಗೆ ಮಾಹಿತಿ ನೀಡಲಾಗುತ್ತದೆ. ಟಿವಿ9 ಎಕ್ಸ್‌ಪೋನಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದ್ದು, ಇಂದು, ನಾಳೆ, ನಾಡಿದ್ದು ಟಿವಿ9 ಎಜುಕೇಷನ್ ಎಕ್ಸ್‌ಪೋ ನಡೆಯಲಿದೆ. 3 ದಿನಗಳ ಕಾಲ ನಡೆಯುವ ಸಮ್ಮಿಟ್ಗೆ ಉಚಿತ ಪ್ರವೇಶ ನೀಡಲಾಗುತ್ತಿದೆ.
ಟಿವಿ9 ಎಜುಕೇಶನ್ ಸಮ್ಮಿಟ್ (TV9 Education Summit) ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದೆ. ಹೀಗಾಗಿ ಟಿವಿ9ಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೆನೆ. ಕೊವಿಡ್ನಿಂದ ವಿದ್ಯಾಭ್ಯಾಸ ತುಂಬಾ ವ್ಯತ್ಯಾಸ ಆಗಿತ್ತು.ಈಗ ಒಂದೇ ವೇದಿಕೆಯಲ್ಲಿ ಮಾಹಿತಿಯ ಅವಕಾಶ ಸಿಕ್ಕಿದೆ ಎಂದು ಅಶ್ವಥ್ ನಾರಾಯಣ್ (Dr C Ashwath Narayan) ಹೇಳಿದ್ದಾರೆ.
ಟಿವಿ9 ಎಜುಕೇಷನ್ ಎಕ್ಸ್‌ಪೋದಲ್ಲಿ ನಾಳೆ ಫ್ರೀ ವ್ಯಾಕ್ಸಿನ್
18 ವರ್ಷ ಮೇಲ್ಪಟ್ಟವರಿಗೆ ನಾಳೆ ಉಚಿತ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ಉಚಿತ ಲಸಿಕೆ ನೀಡಲಾಗುತ್ತದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಹಾಲ್‌ನಲ್ಲಿ ಟಿವಿ9 ಎಕ್ಸ್‌ಪೋ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದೆ. ಬಿಬಿಎಂಪಿ ವತಿಯಿಂದ ಉಚಿತ ವ್ಯಾಕ್ಸಿನ್ ಹಾಕಿಸುವ ವ್ಯವಸ್ಥೆ ಮಾಡಲಾಗಿದೆ.
ಉದ್ಯೋಗ ಮೇಳಕ್ಕೆ ಸಚಿವ ಅಶ್ವತ್ಥ್ ನಾರಾಯಣ ಚಾಲನೆ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವಾಲಿವಾಲ್ ಕ್ರೀಡಾಂಗಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಸಚಿವ ಅಶ್ವತ್ಥ್ ನಾರಾಯಣ ಚಾಲನೆ ನೀಡಿದ್ದಾರೆ. ವಾಲಿವಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 30 ಕಂಪನಿಗಳು ಭಾಗಿಯಾಗಿದ್ದು, 12 ಕಂಪನಿಗಳು ವರ್ಚುವಲ್ ಮೂಲಕ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:
ರೈತರಿಗಾಗಿ ‘ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶ ಅಭಿಯಾನ’ಕ್ಕೆ ಚಾಲನೆ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
Published On - 10:47 am, Fri, 3 September 21