AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IISc: ಜಗತ್ತಿನ ಟಾಪ್ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​!

Indian Institute of Science Bangalore: ಇಂಗ್ಲೆಂಡ್​ನ ಆಕ್ಸ್​ಫರ್ಡ್​ ಯೂನಿವರ್ಸಿಟಿ ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ 350 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ (IISc) ಕೂಡ ಒಂದು.

IISc: ಜಗತ್ತಿನ ಟಾಪ್ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​!
ಬೆಂಗಳೂರಿನ ಐಐಎಸ್​ಸಿ
TV9 Web
| Edited By: |

Updated on:Sep 03, 2021 | 2:25 PM

Share

ನವದೆಹಲಿ: 2022ನೇ ಸಾಲಿನ ಟೈಮ್ಸ್​ ವರ್ಲ್ಡ್​ ಯುನಿವರ್ಸಿಟಿ ರ್ಯಾಂಕಿಂಗ್ ಪಟ್ಟಿ (Times World University Rankings 2022) ಪ್ರಕಟವಾಗಿದ್ದು, ವಿಶ್ವದ 350 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್​ನ ಆಕ್ಸ್​ಫರ್ಡ್​ ಯೂನಿವರ್ಸಿಟಿ (University of Oxford) ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ 350 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ (IISc) ಕೂಡ ಒಂದು ಎಂಬುದು ಹೆಮ್ಮೆಯ ಸಂಗತಿ.

ವಿಶ್ವದ 350 ಟಾಪ್ ವಿಶ್ವವಿದ್ಯಾಲಯಗಳಲ್ಲಿ ಆಕ್ಸ್​ಫರ್ಡ್​ ಯುನಿವರ್ಸಿಟಿಗೆ ಮೊದಲ ಸ್ಥಾನ, ಕ್ಯಾಲಿಫೋರ್ನಿಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎರಡನೇ ಸ್ಥಾನ, ಹಾರ್ವರ್ಡ್ ಯುನಿವರ್ಸಿಟಿ 3ನೇ ಸ್ಥಾನ, ಸ್ಟಾನ್​ಫೋರ್ಡ್​ ಯುನಿವರ್ಸಿಟಿ 4ನೇ ಸ್ಥಾನ ಪಡೆದಿವೆ. ಬೆಂಗಳೂರಿನ ಭಾರತೀಯ ವಿಜ್ಞಾನಗಳ ಸಂಸ್ಥೆ (IISc) 301ನೇ ಸ್ಥಾನ ಪಡೆದಿದೆ. ಅಂದಹಾಗೆ, ಜಗತ್ತಿನ 350 ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯೂ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ನದ್ದು. ಈ ಮೂಲಕ ಬೆಂಗಳೂರಿನ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದಿದೆ.

ಉಳಿದಂತೆ ಭಾರತದ ಐಐಟಿ ರೋಪರ್, ಜೆಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್, ಐಐಟಿ ಇಂದೋರ್, ಅಲಗಪ್ಪ ಯುನಿವರ್ಸಿಟಿ ಮತ್ತು ತಪಾರ್ ಯುನಿವರ್ಸಿಟಿಗಳು ಟಾಪ್ 350ರಿಂದ 400ರೊಳಗಿನ ನಂತರ ಸ್ಥಾನಗಳನ್ನು ಪಡೆದಿವೆ. ಅಲ್ಲದೆ, ಬನಾರಸ್ ಹಿಂದು ಯುನಿವರ್ಸಿಟಿ, ಜವಹರಲಾಲ್ ನೆಹರು ಯುನಿವರ್ಸಿಟಿ (JNU) ದೆಹಲಿ ಟೆಕ್ನಾಲಜಿ ಯುನಿವರ್ಸಿಟಿ ಸೇರಿದಂತೆ ಭಾರತದ 10 ವಿಶ್ವವಿದ್ಯಾಲಯಗಳು ಜಗತ್ತಿನ ಟಾಪ್ 601ರಿಂದ 800ರೊಳಗಿನ ರ್ಯಾಂಕ್ ಪಡೆದಿವೆ.

ಇದನ್ನೂ ಓದಿ: Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಮಾಜಿ ಸಿಎಂ ಜಯಲಲಿತಾ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ವಿವಾದ; ಎಐಎಡಿಎಂಕೆ ನಾಯಕರಿಂದ ಪ್ರತಿಭಟನೆ

(Bengaluru IISc Times World University Rankings 2022 Announced Indian Institute of Science Bangalore In Top 350)

Published On - 2:18 pm, Fri, 3 September 21

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ