ರೈತರಿಗಾಗಿ ‘ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶ ಅಭಿಯಾನ’ಕ್ಕೆ ಚಾಲನೆ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗಾಗಿ ‘ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶ ಅಭಿಯಾನ’ವನ್ನು ಜಾರಿಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ರೈತರು ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಕೃಷಿ ನಡೆಸಲು ಸರ್ಕಾರದ ಯೋಜನೆಗಳ ಕುರಿತು ತೋಮರ್ ಮಾತನಾಡಿದ್ದಾರೆ.
ರೈತರಿಗಾಗಿ ಕೇಂದ್ರ ಕೃಷಿ ಸಚಿವ ನಾರಾಯಣ ಸಿಂಗ್ ತೋಮರ್ ‘ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕಾಂಶ ಅಭಿಯಾನ’ಯನ್ನು (national food and nutrition campaign) ಗುರುವಾರ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘‘ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಗಳು ನಡೆಯುತ್ತಿವೆ. ಉತ್ಪಾದನೆಯಲ್ಲಿ ನಾವು ಮುಂದುವರೆದಿದ್ದೇವೆ. ಸರ್ಕಾರ ಮತ್ತು ರೈತರ ಸಮನ್ವಯ- ಸಹಕಾರದಿಂದಾಗಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಜಾಗತಿಕ ಮಟ್ಟದಲ್ಲಿ ಅವು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ರೈತರು ಉತ್ತಮ ಆದಾಯ ನೀಡುವ ಬೆಳೆಗಳತ್ತ ಆಕರ್ಷಿತರಾಗಬೇಕಾಗಿದೆ’’ ಎಂದು ತೋಮರ್ ಹೇಳಿದ್ದಾರೆ.
ಭಾರತದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ‘ಹೆಮ್ಮೆಯ ವಿಷಯ’ ಎಂದು ಹೇಳಿರುವ ನರೇಂದ್ರ ಸಿಂಗ್ ತೋಮರ್, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯನ್ನು (ಐಸಿಎಆರ್) ಶ್ಲಾಘಿಸಿದರು. ಐಸಿಎಆರ್ ಯಾವ ಬೆಳೆಗಳನ್ನು ಬೆಳೆಯಬೇಕೆಂದು ಹಾಗೂ ಮಳೆ ಆಶ್ರಿತ;ಇತರ ಪ್ರದೇಶಗಳಿಗೆ ಯಾವ ಬೀಜಗಳನ್ನು ಇಳುವರಿ ಮಾಡಿದರೆ ಉತ್ತಮ ಫಸಲು ನೀಡಬಹುದು ಎಂಬುದರ ಕುರಿತು ಯಶಸ್ವಿಯಾಗಿ ಸಂಶೋಧನೆ ನಡೆಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ರೈತರು, ‘ಕೃಷಿ ಇನ್ಫ್ರಾ ಫಂಡ್’ ಸೇರಿದಂತೆ ರೈತರಿಗಾಗಿಯೇ ಇರುವ ಸ್ಕೀಮ್ಗಳಲ್ಲಿ ತೊಡಗಿಸಿಕೊಳ್ಳಬೇಕು’’ ಎಂದು ಅವರು ಸಲಹೆ ನೀಡಿದ್ದಾರೆ.
ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಕೃಷಿಗೆ ಬಜೆಟ್ ₹ 21,000 ಕೋಟಿ ಇದ್ದು, ಈಗ ಅದನ್ನು ₹ 1.23 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಎಂದು ತೋಮರ್ ಇದೇ ಸಂದರ್ಭದಲ್ಲಿ ಹೇಳಿದ್ಧಾರೆ. ‘ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ, ಹಣಕಾಸು ಆಯೋಗದ ಅನುದಾನದ ಮೊತ್ತವನ್ನು ಪ್ರಧಾನಮಂತ್ರಿ ಸುಮಾರು ಐದು ಪಟ್ಟು ಹೆಚ್ಚಿಸಿದ್ದಾರೆ’ ಎಂದು ಕೃಷಿ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಕೊಡೋದಿಲ್ಲ; ಚರ್ಚೆಗೆ ಗ್ರಾಸವಾಯ್ತು ತಹಶೀಲ್ದಾರ್ ಆದೇಶ
ದೆಹಲಿ ಸರ್ಕಾರದ ‘ದೇಶ್ ಕೆ ಮೆಂಟರ್’ ವಿಶೇಷ ಕಾರ್ಯಕ್ರಮಕ್ಕೆ ಸೋನು ಸೂದ್ ಬ್ರಾಂಡ್ ಅಂಬಾಸಿಡರ್
(Agriculture minister Narendra Singh Tomar launches national food and nutrition campaign for farmers)